ETV Bharat / state

ಟ್ರಾಫಿಕ್​ ನಿಯಮ ಉಲ್ಲಂಘನೆ: ವಾಹನ ಸವಾರರ ಲೈಸನ್ಸ್ ರದ್ದು

ಸಂಚಾರಿ ನಿಯಮ ಉಲ್ಲಂಘನೆ ಆಧರಿಸಿ ಆರ್​ಟಿಒ ಅಧಿಕಾರಿಗಳು ವಾಹನ ಸವಾರರಿಗೆ ಶಾಕ್​ ನೀಡಿದ್ದು, ಡ್ರೈವಿಂಗ್ ಲೈಸನ್ಸ್​ ರದ್ದು ಮಾಡಿದ್ದಾರೆ.

dsd
ಆರ್​ಟಿಓದಿಂದ ವಾಹನ ಸವಾರರ ಲೈಸನ್ಸ್ ರದ್ದು
author img

By

Published : Oct 5, 2020, 12:33 PM IST

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿರುವ ವಾಹನ ಸವಾರರ ಲೈಸನ್ಸ್ ರದ್ದು ಮಾಡಿ ಆರ್​ಟಿಒ ಅಧಿಕಾರಿಗಳು ಶಾಕ್ ನೀಡಿದ್ದಾರೆ‌.

ಪೊಲೀಸರು ಬೈಕ್​ನಲ್ಲಿ ಸ್ಟಂಟ್ ಮಾಡುವವರು, ಕುಡಿದು ವಾಹನ ಚಾಲನೆ ಮಾಡಿದವರ ಬೈಕ್ ಸೀಜ್ ಮಾಡುವುದರ ಜೊತೆಗೆ ಲೈಸನ್ಸ್ ಜಪ್ತಿ ಮಾಡಿದ್ದರು‌. ವಶಪಡಿಸಿಕೊಂಡ ಲೈಸನ್ಸ್​ಗಳನ್ನು ಆರ್​ಟಿಒಗೆ ಟ್ರಾಫಿಕ್ ಇಲಾಖೆ ಕಳುಹಿಸಿತ್ತು. ಈಗ ನಿಯಮ ಮೀರಿದವರ ಲೈಸನ್ಸ್ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. 2018ರಲ್ಲಿ 19 ಸಾವಿರದ 431 ಡ್ರೈವಿಂಗ್ ಲೈಸನ್ಸ್​ಗಳನ್ನು ಟ್ರಾಫಿಕ್ ಪೊಲೀಸರು ಕಳುಹಿಸಿದ್ದರು. ಅದರಲ್ಲಿ 5 ಸಾವಿರದ 899 ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗಿತ್ತು.

2019ರಲ್ಲಿ 7 ಸಾವಿರದ 149 ಲೈಸನ್ಸ್ ರದ್ದು ಮಾಡಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದರು. ಇದರಲ್ಲಿ ಕೇವಲ 944 ಡ್ರೈವಿಂಗ್ ಲೈಸನ್ಸ್​ಗಳನ್ನು ಆರ್​ಟಿಒ ರದ್ದು ಮಾಡಿತ್ತು. ಹಾಗೆಯೇ ಕಳೆದ ತಿಂಗಳು 3 ಸಾವಿರದ 900 ಡ್ರೈವಿಂಗ್ ಲೈಸನ್ಸ್ ರದ್ಧತಿಗೆ ಕಳಿಸಲಾಗಿತ್ತು. ಈಗ ಮತ್ತೆ 838 ಲೈಸನ್ಸ್ ರದ್ದು ಮಾಡಿ ಆರ್​ಟಿಒ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಪರವಾನಗಿ ಹೇಗೆ ರದ್ದು ಮಾಡಲಾಗುತ್ತದೆ ಎಂದು ಗಮನಿಸುವುದಾದರೆ ಟ್ರಾಫಿಕ್ ಪೊಲೀಸರು ಮೊದಲು ಒರಿಜಿನಲ್ ಲೈಸನ್ಸ್ ಕಲೆಕ್ಟ್ ಮಾಡುತ್ತಾರೆ. ಲೈಸನ್ಸ್​ಗಳನ್ನು ಆರ್​ಟಿಒ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಲೈಸನ್ಸ್ ರದ್ದು ಮಾಡಲು ಸೂಕ್ತ ಕಾರಣ ಕೊಟ್ಟು ರದ್ಧತಿಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಕಾರಣ ನಿಜವೇ ಆಗಿದ್ದರೆ 6 ತಿಂಗಳು ಲೈಸನ್ಸ್ ರದ್ದು ಮಾಡಲಾಗುತ್ತದೆ. ಇದಾದ ಬಳಿಕ ಹೊಸ ಲೈಸನ್ಸ್​ಗೆ ಇಂತಿಷ್ಟು ಹಣ ಪೇ ಮಾಡಬೇಕಾಗುತ್ತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.