ETV Bharat / state

ಮಳೆಯಿಂದ ಬೆಳೆ ಹಾನಿ: ರಾಜಧಾನಿಯಲ್ಲಿ ಸೊಪ್ಪು ತರಕಾರಿ ದರದಲ್ಲಿ ಭಾರಿ ಹೆಚ್ಚಳ

ಬೀಟ್‌ರೂಟ್, ಮೆಣಸಿನಕಾಯಿ, ಅವರೆಕಾಯಿ ಸೇರಿದಂತೆ ಹಲವು ತರಕಾರಿಗಳ ದರಗಳೂ ಕೆ.ಜಿ ಗೆ 50 ರೂ ಕ್ಕಿಂತ ಹೆಚ್ಚಳವಾಗಿದೆ.

ತರಕಾರಿ ಬೆಳೆ ಹೆಚ್ಚಳ
ತರಕಾರಿ ಬೆಳೆ ಹೆಚ್ಚಳ
author img

By

Published : Sep 16, 2022, 5:14 PM IST

ಬೆಂಗಳೂರು: ಇತ್ತೀಚಿಗೆ ಸುರಿದ ಸತತ ಮಳೆಗೆ ಸೊಪ್ಪು ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ಅದರ ಪರಿಣಾಮ ಗ್ರಾಹಕರನ್ನು ಬಾಧಿಸತೊಡಗಿದೆ. ಮುಖ್ಯವಾಗಿ ಕೊತ್ತಂಬರಿ ಕಟ್ಟಿಗೆ 60ರೂ ರಂತೆ ಸಿಲಿಕಾನ್ ಸಿಟಿಯಲ್ಲಿ ಮಾರಾಟವಾಗುತ್ತಿದೆ. ಕೆಲ ತರಕಾರಿ ದರಗಳಲ್ಲಿ ಏರಿಳಿತವಾಗಿದೆ.

ಕೆಲ ದಿನಗಳ ಹಿಂದೆ ಕೊತ್ತಂಬರಿ ಪ್ರತಿ ಕಟ್ಟಿಗೆ 20 ರೂ ರಂತೆ ಮಾರಾಟವಾಗುತ್ತಿತ್ತು. ಮಾರುಕಟ್ಟೆಗೆ ಉತ್ಪನ್ನಗಳ ಆವಕದಲ್ಲಿ ವ್ಯತ್ಯಾಸ ಆಗಿರುವುದು ದಿಢೀರನೇ ಬೆಲೆ ಏರಿಕೆಗೆ ಕಾರಣ ಎಂದು ಎಪಿಎಂಸಿ ವರ್ತಕರು ಮತ್ತು ಕೆ. ಆರ್ ಮಾರ್ಕೆಟ್ ಸೊಪ್ಪುಗಳ ವ್ಯಾಪಾರಿಗಳು ತಿಳಿಸಿದ್ದಾರೆ.

ಮಳೆಯ ಕಾರಣಕ್ಕೆ ಸೊಪ್ಪಿನ ಬೆಲೆ ಏರಿಕೆಯಾಗಿದೆ. ಅದರಲ್ಲೂ ನಾಟಿ ಕೊತ್ತಂಬರಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ದಪ್ಪನೆಯ ಕಟ್ಟು 50 ರೂ 60ವರೆಗೂ ಮಾರಾಟವಾಗುತ್ತಿದೆ. ಸಬ್ಬಕ್ಕಿ ಸೊಪ್ಪು ಪ್ರತಿ ಕಟ್ಟಿಗೆ 40 ರೂ ರಂತೆ ಮಾರಾಟವಾಗುತ್ತಿದೆ. ಮೆಂತೆ, ಪಾಲಾಕ್ ದರದಲ್ಲೂ ಏರಿಕೆ ಆಗಿದ್ದು, ಇನ್ನೂ ಕೆಲವು ದಿನ ಈ ಪರಿಸ್ಥಿತಿ ಮುಂದುವರಿಯಲಿದೆ ಎಂದಿದ್ದಾರೆ.

ತರಕಾರಿಗಳ ದರ ಹೆಚ್ಚಳ : ಬೀಟ್‌ರೂಟ್, ಮೆಣಸಿನಕಾಯಿ, ಅವರೆಕಾಯಿ ಸೇರಿದಂತೆ ಹಲವು ತರಕಾರಿಗಳ ದರಗಳೂ ಕೆ. ಜಿ ಗೆ 50 ರೂ ಕ್ಕಿಂತ ಹೆಚ್ಚಳವಾಗಿದೆ. ಈ ತರಕಾರಿಗಳ ದರ ಕಳೆದ ವಾರ ಕಡಿಮೆ ಇತ್ತು. ಪ್ರತಿ ತರಕಾರಿ ದರ ಕೆ.ಜಿಗೆ 20 ರೂ ರಿಂದ 30ರೂ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಓದಿ: ರಾಜ್ಯಾದ್ಯಂತ ಇಂದು ತರಕಾರಿ ಬೆಲೆ ಹೇಗಿದೆ? ಇಲ್ಲಿದೆ ನೋಡಿ ಮಾಹಿತಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.