ETV Bharat / state

ತರಕಾರಿಗಳ ಬೆಲೆ ಏರಿಕೆ ಎಫೆಕ್ಟ್: ಅಂಗನವಾಡಿ ಕೇಂದ್ರಗಳಿಗೆ ಎದುರಾಗಿದೆ ಸಂಕಷ್ಟ.. - etv bharat kannada

ತರಕಾರಿ ಬೆಲೆಗಳು ಗಗನಕ್ಕೇರಿರುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೋಷಕಾಂಶ ಭರಿತ ಊಟ ನೀಡಲು ತೊಂದರೆಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

vegetables-price-hike-effecting-anganawadi-centers-in-state
ತರಕಾರಿಗಳ ಬೆಲೆ ಏರಿಕೆ ಎಫೆಕ್ಟ್: ಅಂಗನವಾಡಿ ಕೇಂದ್ರಗಳಿಗೆ ಎದುರಾಗಿದೆ ಸಂಕಷ್ಟ..
author img

By

Published : Jul 15, 2023, 9:07 PM IST

ಬೆಂಗಳೂರು: ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ತೊಂದರೆ ಎದುರಾಗಿದೆ. ತರಕಾರಿ ಹಾಗೂ ನಿತ್ಯ ಬಳಸುವ ವಸ್ತುಗಳು ಆಗಸಕ್ಕೇರಿದ ಹಿನ್ನೆಲೆ ತರಕಾರಿ ಖರೀದಿಗೆ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಬಂದಿದೆ. ದುಬಾರಿ ಬೆಲೆ ಕಾರಣ ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ ಎದುರಾಗಿದೆ. ಅಂಗನವಾಡಿ ಕೇಂದ್ರಗಳು‌ ನೀಡುತ್ತಿರುವ ಊಟದಲ್ಲಿ ತರಕಾರಿ ತುಂಡುಗಳೇ ನಾಪತ್ತೆ ಆಗುತ್ತಿದೆ. ಅಂಗನವಾಡಿ ಕೇಂದ್ರಗಳು ಬರಿ ಅನ್ನ ಮತ್ತು ತಿಳಿಸಾರು ಮೊರೆ ಹೋಗುತ್ತಿದ್ದಾರೆ.

ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರಕ್ಕಾಗಿ ಸೊಪ್ಪು, ತರಕಾರಿ ನೀಡಲಾಗುತ್ತದೆ. ಇದರಲ್ಲಿ ಹೆಚ್ಚು ಸೊಪ್ಪನ್ನು ನೀಡಲಾಗುತ್ತದೆ. ಆದರೆ, ಈಗ ತರಕಾರಿ, ಸೊಪ್ಪು ಎಂಬುದು ಗಗನಕುಸುಮವಾಗಿದೆ. ಇದರಿಂದ ಅಂಗನವಾಡಿಗಳಲ್ಲಿ ಬೇಳೆ ಸಾರನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಹಾಗೂ ಪೌಷ್ಟಿಕತೆ ಹೆಚ್ಚಿಸಲು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೋಷಣ್ ಅಭಿಯಾನ ಯೋಜನೆ ಜಾರಿಗೆ ತಂದಿತ್ತು.

ಶಿಶು ಮತ್ತು ತಾಯಿಯ ಮರಣ ಪ್ರಮಾಣವನ್ನು ತಗ್ಗಿಸಲು ಈ ಯೋಜನೆ ಆರಂಭಿಸಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಊಟದ ವ್ಯವಸ್ಥೆೆ ಮಾಡಲಾಗಿತ್ತು. ಅ ಊಟದಲ್ಲಿ ಪೋಷಕಾಂಶ ಭರಿತ ಸೊಪ್ಪು, ತರಕಾರಿ ಬೇಯಿಸಿ ಅಡುಗೆ ಉಣ ಬಡಿಸಲಾಗುತ್ತಿತ್ತು. ಈ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದಲ್ಲಿ ಸಾಲ ಪಡೆದುಕೊಂಡು ಬನ್ನಿ. ಇಲ್ಲವೇ ನೀವೇ ಹಣ ಭರಿಸಿ ನಂತರ ಸರ್ಕಾರದಿಂದ ಕೊಡಲಾಗುತ್ತದೆ ಎಂಬ ಸಿದ್ದ ಉತ್ತರ ಅಧಿಕಾರಿಗಳಿಂದ ಸಿಗುತ್ತಿದೆ.

"ಒಂದು ದಿನ ಇಲ್ಲವೇ ಎರಡು ದಿನ ಸಾಲ ಪಡೆದುಕೊಂಡು ಬರಬಹುದು. ಇನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಅವರ ಜೀವನಕ್ಕೇ ಸಾಲುವುದಿಲ್ಲ. ಅವರು ಹೇಗೆ ಹಣ ಭರಿಸಿ ಖರೀದಿಸಲು ಸಾಧ್ಯ" ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ರಾಜ್ಯದ ಹುಬ್ಬಳ್ಳಿ, ದಾವಣಗೆರೆ, ಬಾಗಲಕೋಟೆ, ಕಲಬುರಗಿ, ಬೆಂಗಳೂರು, ಮೈಸೂರು ಸೇರಿದಂತೆ ಹಲವಾರು ಭಾಗದಲ್ಲಿ ಅಂಗನವಾಡಿಗಳಿಗೆ ದಾನಿಗಳು ನೆರವನ್ನು ನೀಡುತ್ತಿದ್ದಾರೆ. ಇದು ಕೂಡಾ ಅಂಗನವಾಡಿ ಕಾರ್ಯಕರ್ತೆಯರು ದಾನಿಗಳ ಬಳಿ ಹೋಗಿ ಕೇಳಿಕೊಳ್ಳುತ್ತಿರುವುದರಿಂದ ಕೆಲವರು ತರಕಾರಿ, ಸೊಪ್ಪು ನೀಡುತ್ತಿದ್ದರೆ, ಇನ್ನು ಕೆಲವರು ಮೊಟ್ಟೆ ಒದಗಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಬಹುತೇಕ ತರಕಾರಿ ಬೆಲೆ 100 ರೂ. ದಾಟಿರುವ ಹಿನ್ನೆೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅಂಗನವಾಡಿಗಳ ಬಳಿ ಅಕ್ಷಯ ಪಾತ್ರೆ ಇಡಲಾಗಿದೆ. ಇದಕ್ಕೆೆ ದಾನಿಗಳು ಹಣದ ನೆರವನ್ನು ನೀಡುತ್ತಿದ್ದಾರೆ. ಈ ಹಣದಿಂದ ಸೊಪ್ಪು ತರಕಾರಿ ಖರೀದಿ ಮಾಡಲಾಗುತ್ತಿದೆ. ಬರುವ ಹಣದಲ್ಲಿ ಮಗುವಿಗೆ 1 ರೂ. ಗರ್ಭಿಣಿಯರಿಗೆ 2 ರೂ ನಿಗದಿ ಮಾಡಲಾಗುತ್ತಿದೆ. ಇದರ ಜೊತೆಗೆ ಸರ್ಕಾರವೂ ಅನುದಾನ ಒದಗಿಸುತ್ತಿದೆ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ ತಿಳಿಸಿದ್ದಾರೆ.

ಇದನ್ನೂ ಓದಿ: ಭಿಕ್ಷಾಟನೆ ಬಿಟ್ಟು ರಸ್ತೆ ಬದಿ ತರಕಾರಿ ಮಾರಿ ಸ್ವಾವಲಂಬನೆ ಜೀವನ ಸಾಗಿಸುತ್ತಿರುವ ಮಂಗಳಮುಖಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.