ಬೆಂಗಳೂರು: ಇಂದು ಅರಮನೆ ಮೈದಾನದಲ್ಲಿ ನಡೆಯಲಿರುವ ವೀರಶೈವ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ಸಾವಿರಾರು ಜನರು ಭಾಗಿಯಾಗುವ ಹಿನ್ನೆಲೆ ಸಂಚಾರ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಸಮಾವೇಶಕ್ಕೆ ಹೆಚ್ಚು ವಾಹನಗಳು ಬರುವ ಹಿನ್ನೆಲೆ ಸಂಚಾರ ದಟ್ಟಣೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದ್ದು, ಟ್ರಾಫಿಕ್ ಪೊಲೀಸರು 8 ಪ್ರಮುಖ ರಸ್ತೆಗಳ ಬದಲಾವಣೆ ಮಾಡಿದ್ದಾರೆ.
- ಮೈಸೂರು ರಸ್ತೆಯಲ್ಲಿ ಬರುವ ವಾಹನಗಳ ಮಾರ್ಗ: ನಾಯಂಡಹಳ್ಳಿ-ಸುಮನಹಳ್ಳಿ-ರಾಜಕುಮಾರ್ ಸಮಾಧಿ ರಸ್ತೆ-ತುಮಕೂರು ರಸ್ತೆ-ಗೊರಗುಂಟೆಪಾಳ್ಯ ಜಂಕ್ಷನ್-ಬಿಇಎಲ್-ಹೆಬ್ಬಾಳ ಮೇಲ್ಸೇತುವೆ-ಮೇಖ್ರಿ ಸರ್ಕಲ್-ಜಯಮಹಲ್ ರೋಡ್-ಅರಮನೆ ಮೈದಾನ
- ತುಮಕೂರು ರೋಡ್ ಕಡೆಯಿಂದ ಬರುವ ಮಾರ್ಗ: ಗೊರಗುಂಟೆ ಪಾಳ್ಯ ಜಂಕ್ಷನ್-ಬಿಇಎಲ್-ಹೆಬ್ಬಾಳ-ಮೇಖ್ರಿ ಸರ್ಕಲ್ ಸರ್ವಿಸ್ ರೋಡ್- ಅರಮನೆ ಮೈದಾನ
- ಕನಕಪುರ ರಸ್ತೆ ಮಾರ್ಗ ಬದಲಾವಣೆ: ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ-ರಾಜಲಕ್ಷ್ಮಿ ಜಂಕ್ಷನ್ ಜಯನಗರ ನಾಲ್ಕನೇ ಮುಖ್ಯ ರಸ್ತೆ-ಸೌತ್ ಎಂಡ್ ಸರ್ಕಲ್-ಆರ್ವಿ ಜಂಕ್ಷನ್-ಲಾಲ್ ಬಾಗ್ ವೆಸ್ಟ್ ಗೇಟ್-ಮಿನರ್ವ ಸರ್ಕಲ್-ಜೆ.ಸಿ ರೋಡ್-ಟೌನ್ ಹಾಲ್-ಕೆಜಿ ರೋಡ್-ಮೈಸೂರು ಬ್ಯಾಂಕ್ ಸರ್ಕಲ್-ಪ್ಯಾಲೇಸ್ ರೋಡ್-ಬಸವೇಶ್ವರ ಸರ್ಕಲ್-ವಸಂತನಗರ ರೋಡ್-ಕಂಟೋನ್ಮೆಂಟ್ ಅಂಡರ್ ಪಾಸ್-ಜಯಮಹಲ್ ರೋಡ್-ಅರಮನೆ ಮೈದಾನ
- ಬನ್ನೇರುಘಟ್ಟ ರಸ್ತೆ ಮಾರ್ಗ: ಡೈರಿ ಸರ್ಕಲ್-ಲಾಲ್ ಬಾಗ್ ಮೇನ್ ಗೇಟ್-ಮಿನರ್ವ ಸರ್ಕಲ್-ಜೆ.ಸಿ ರೋಡ್-ಟೌನ್ ಹಾಲ್-ಕೆಜಿ ರಸ್ತೆ-ಮೈಸೂರು ಬ್ಯಾಂಕ್ ಸರ್ಕಲ್-ಪ್ಯಾಲೇಸ್ ರೋಡ್-ಬಸವೇಶ್ವರ ಸರ್ಕಲ್-ವಸಂತನಗರ ರಸ್ತೆ-ಕಂಟೋನ್ಮೆಂಟ್ ಅಂಡರ್ ಪಾಸ್-ಜಯಮಹಲ್ ರಸ್ತೆ-ಅರಮನೆ ಮೈದಾನ
- ಹಳೆ ಮದ್ರಾಸ್ ರಸ್ತೆ: ಕೆ.ಆರ್ ಪುರಂ ಮೇಲ್ಸೇತುವೆ-ಹೆಣ್ಣೂರು ಕ್ರಾಸ್-ನಾಗವಾರ-ಹೆಬ್ಬಾಳ ಫ್ಲೈ ಓವರ್-ಬಳ್ಳಾರಿ ರಸ್ತೆ-ಮೇಖ್ರಿ ಸರ್ಕಲ್ ಸರ್ವಿಸ್ ರೋಡ್-ಅರಮನೆ ಮೈದಾನ
- ಹೊಸೂರು ರಸ್ತೆ ಕಡೆಯಿಂದ ಬರುವವರಿಗೆ: ಹೊಸೂರು ರಸ್ತೆ-ಮಡಿವಾಳ ಚೆಕ್ ಪೋಸ್ಟ್-ಹಳೆ ಮದ್ರಾಸ್ ರಸ್ತೆ-ಡೈರಿ ಸರ್ಕಲ್ ರೋಡ್-ಲಾಲ್ ಬಾಗ್ ಮೇನ್ ಗೇಟ್-ಮಿನರ್ವ ಸರ್ಕಲ್-ಜೆ.ಸಿ ರೋಡ್-ಟೌನ್ ಹಾಲ್-ಕೆ.ಜಿ ರಸ್ತೆ-ಮೈಸೂರು ಬ್ಯಾಂಕ್ ಸರ್ಕಲ್-ಪ್ಯಾಲೇಸ್ ರಸ್ತೆ-ಬಸವೇಶ್ವರ ಸರ್ಕಲ್-ವಸಂತನಗರ ರಸ್ತೆ-ಕಂಟೋನ್ಮೆಂಟ್ ಅಂಡರ್ ಪಾಸ್-ಜಯಮಹಲ್ ರೋಡ್-ಅರಮನೆ ಮೈದಾನ
- ಬಳ್ಳಾರಿ ರೋಡ್ ಮಾರ್ಗ: ದೇವನಹಳ್ಳಿ ಮಾರ್ಗ-ಚಿಕ್ಕಜಾಲ-ಹುಣಿಸೇಮಾರನಹಳ್ಳಿ-ಕೋಗಿಲು ಜಂಕ್ಷನ್-ಕೊಡಿಗೇಹಳ್ಳಿ ಗೇಟ್-ಹೆಬ್ಬಾಳ ಮೇಲ್ಸೇತುವೆ-ಮೇಖ್ರಿ ಸರ್ಕಲ್-ಅರಮನೆ ಮೈದಾನ
- ದೊಡ್ಡಬಳ್ಳಾಪುರದಿಂದ ಬರುವ ಮಾರ್ಗ: ಮೇಜರ್ ಉನ್ನಿಕೃಷ್ಣನ್ ರಸ್ತೆ-ಯಲಹಂಕ ಪೊಲೀಸ್ ಸ್ಟೇಷನ್ ಜಂಕ್ಷನ್-ಬಳ್ಳಾರಿ ರಸ್ತೆ-ಹೆಬ್ಬಾಳ ಮೇಲ್ಸೇತುವೆ-ಮೇಖ್ರಿ ಸರ್ಕಲ್-ಅರಮನೆ ಮೈದಾನ
ಬೈಕ್ ಮತ್ತು ಕಾರುಗಳಲ್ಲಿ ಬರುವರಿಗೆ ತ್ರಿಪುರ ವಾಸಿನಿ ಮೈದಾನದಲ್ಲಿ ವ್ಯವಸ್ಥೆ ಹಾಗೂ ವಿಐಪಿ ವಾಹನಗಳಿಗೆ ರಮಣಶ್ರೀ ರಸ್ತೆಯ ಕೃಷ್ಣ ವಿಹಾರ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅರಮನೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ: ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ದಿನಾಂಕ ಬದಲಾವಣೆ
ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಎಂಟು ಮಂದಿ ಡಿಸಿಪಿಗಳು ನೇತೃತ್ವದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ತುಮಕೂರು ರಸ್ತೆ ಮಾರ್ಗ ಗೊರಗುಂಟೆ ಪಾಳ್ಯ ಮಾರ್ಗದಿಂದ ಅರಮನೆ ಮೈದಾನದ ಮಾರ್ಗದಲ್ಲಿ ಮುನ್ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ಕೈಗೊಂಡಿದ್ದಾರೆ. ಸಂಚಾರ ದಟ್ಟಣೆಯಾಗದಂತೆ ಒಂದು ಸಾವಿರಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ.