ಬೆಂಗಳೂರು: ದೇಶದ ಇತಿಹಾಸದಲ್ಲಿ 14 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಪಡೆದ ಏಕೈಕ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ.
ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್ನಲ್ಲಿ ನಿರ್ಮಿಸಿರುವ ಸ್ವಾತಂತ್ರ್ಯ ಹೋರಾಟಗಾರ ದಾಮೋದರ್ ಸಾವರ್ಕರ್ ಕಂಚಿನ ಪ್ರತಿಮೆಯನ್ನು ಉದ್ಘಾಟಿಸಿ ಮಾತನಾಡಿದ ಮೇಯರ್, ಸಾವರ್ಕರ್ ಬಗ್ಗೆ ಗೊತ್ತಿರುವ ಪ್ರತಿಯೊಬ್ಬರೂ ಅವರ ಪರ ನಿಲ್ಲುತ್ತಾರೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅವರು 14 ವರ್ಷ ಶಿಕ್ಷೆ ಅನುಭವಿಸಿದರು. ಈಗ ಪುತ್ಥಳಿ ಅನಾವರಣ ಮಾಡಿರುವುದು ಖುಷಿ ತಂದಿದೆ ಎಂದರು.
ಬಳಿಕ ಮಾತನಾಡಿದ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್, ಸೆಲ್ಯುಲರ್ ಜೈಲಿನಲ್ಲಿ ಇಂದಿಗೂ ಅವರ ನೆನಪು ಕಾಡುತ್ತೆ ಎಂದು ಹೇಳಿದರು.
ಮಂಗಲ್ ಪಾಂಡೆ, ಸೇರಿದಂತೆ ಅನೇಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ವೀರ ಮರಣವನ್ನಪ್ಪಿದ್ದಾರೆ. ಸಾವರ್ಕರ್ ಅವರಿಗೆ ಬ್ರಿಟೀಷರು 14 ವರ್ಷಗಳ ಕಾಲಪಾನಿ ಶಿಕ್ಷೆ ನೀಡಿದ್ದರು. ಅಲ್ಲದೆ ಒಂದೇ ಬಾರಿ ಗುಂಡು ಹಾರಿಸಿ ಸಾಯಿಸಿದ್ರು. ಅವರ ತ್ಯಾಗ ಬಲಿದಾನದ ಪ್ರತೀಕವಾಗಿ ಪುತ್ಥಳಿ ನಿರ್ಮಾಣ ಮಾಡಿದ್ದೇವೆ ಎಂದು ಎನ್. ಆರ್.ರಮೇಶ್ ಹೇಳಿದರು.