ಬೆಂಗಳೂರು: ನಗರದ ಬ್ರೀಗೇಡ್ ಹಾಗೂ ಎಂಜಿ ರಸ್ತೆ ಬದಿಯ ಶಾಪ್ಗಳಲ್ಲಿ ಆಂಗ್ಲ ಭಾಷೆಯ ನಾಮಫಲಕಗಳನ್ನು ಹಾಕಿಕೊಂಡಿರುವ ಮಾಲೀಕರ ವಿರುದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಬಿಬಿಎಂಪಿ ಕೂಡ ಎಲ್ಲ ಅಂಗಡಿಗಳಲ್ಲಿ ಕನ್ನಡ ನಾಮಫಲ ಕಡ್ಡಾಯವಾಗಿರಬೇಕು ಎಂದು ಸೂಚನೆ ನೀಡಿತ್ತು. ಆದರೆ, ನಗರದ ಬ್ರಿಗೇಡ್ ಹಾಗೂ ಎಂಜಿ ರಸ್ತೆಯ
ಶಾಪ್ಗಳ ಮಾಲೀಕರು ಇದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಇದರ ವಿರುದ್ದ ಆಕ್ರೋಶಗೊಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ಹೋಗಿ ಇಂಗ್ಲಿಷ್ ಭಾಷೆಯ ನಾಮಫಲಕಗಳನ್ನು ಧ್ವಂಸ ಮಾಡಿ ಅಂಗಡಿ ಮಾಲೀಕರ ವಿರುದ್ದ ಗುಡುಗಿದ್ದಾರೆ. ರಾಜಭವನರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್ನ ಬೋರ್ಡ್ ಹಾಗೂ ಬ್ರಿಗೇಡ್ ಟವರ್ ನಾಮಫಲಕ ಒಡೆದು ಹಾಕಿದ್ದಾರೆ. ಅಲ್ಲದೇ ಆಂಗ್ಲ ಭಾಷೆಯಲ್ಲಿದ್ದ ಬೋರ್ಡ್ಗಳಿಗೆ ಕಪ್ಪು ಮಸಿ ಬಳಿದಿದ್ಧಾರೆ.
ಅಲ್ಲದೇ ಕನ್ನಡ ನಾಮಫಲಕ ಹಾಕಿದ ಶಾಪ್ ಮಾಲೀಕರ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.