ETV Bharat / state

ಗಡಿ ಕ್ಯಾತೆಗೆ ಸಚಿವರ ಸಮಿತಿ ರಚಿಸುವುದಕ್ಕೆ ಇದೇನು ಕಡ್ಲೆಪುರಿ ವ್ಯಾಪಾರನಾ?: ವಾಟಾಳ್ - ಕೇಂದ್ರ ಸರ್ಕಾರ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಧಾನ ಸಭೆಯಲ್ಲಿ ಸಚಿವರ ಸಮಿತಿ ನೇಮಿಸಿದ್ದಕ್ಕೆ‌ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
author img

By

Published : Dec 15, 2022, 10:24 PM IST

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಬೆಂಗಳೂರು: ಇದೇನು ಕಡ್ಲೇಪುರಿ ವ್ಯಾಪಾರನಾ? ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಹಾರಾಷ್ಟ್ರ ಗಡಿ ಕ್ಯಾತೆ ವಿಚಾರವಾಗಿ ಉಭಯ ರಾಜ್ಯಗಳ ಸಚಿವರ ಸಮಿತಿ ರಚನೆಯನ್ನು ಟೀಕಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಗಡಿ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಂಧಾನ ಸಭೆಯಲ್ಲಿ ಸಚಿವರ ಸಮಿತಿ ನೇಮಿಸಿರುವುದನ್ನು ಖಂಡಿಸಿದರು.

ಈ ಸಭೆ ಸಂಪೂರ್ಣ ವಿಫಲವಾಗಿದೆ. ಮೂರು ಮೂರು ಸಚಿವರನ್ನು ಸಮಿತಿಗೆ ನೇಮಕ ಮಾಡಿದ್ದೀರಿ. ಬೊಮ್ಮಾಯಿ ಅವರಿಗೆ ಅರ್ಥ ಆಗಿಲ್ಲ‌ ಅನ್ನಿಸುತ್ತೆ.‌ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಅರ್ಜಿ ಚರ್ಚೆಗೆ ಬಂದಿಲ್ಲ. ಸುಪ್ರೀಂ ತೀರ್ಪು ಬರುವವರೆಗೂ ಕಾಯಿರಿ ಅಂತಾರೆ. ಕೇಂದ್ರ ಸರ್ಕಾರದ ನಿಲುವೇನು? ಎಂದು ಕಿಡಿಕಾರಿದರು.

ಸುಪ್ರೀಂ ಕೋರ್ಟ್ ತೀರ್ಪು ಬರಬೇಕು ಅಂದ್ರೆ ನಿಮ್ಮ ಉದ್ದೇಶ ಏನು?. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿದ ಅಪಮಾನ. ಸುಪ್ರೀಂ ತೀರ್ಪು ಬರುತ್ತೆ ಕಾಯಿರಿ ಅಂತಾ ಮಹಾರಾಷ್ಟ್ರಕ್ಕೆ ಹೇಳಬೇಕು,‌ ಶಿವಸೇನೆಗೆ ಹೇಳಬೇಕು. ಮಹಾಜನ್ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಬೇಕು. ಮೂವರು ಸಚಿವರ ಸಮಿತಿಗೆ ನಿನ್ನೆ ಒಪ್ಪಬಾರದಿತ್ತು. ಇದರಿಂದ ಕರ್ನಾಟಕಕ್ಕೆ ದ್ರೋಹ ಆಗಿದೆ. ಎಂಪಿಗಳು ಕೇಂದ್ರದ ಮೇಲೆ‌ ಒತ್ತಡ ತರಬೇಕು. ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರ ಸಚಿವರು ರಾಜ್ಯ ಪ್ರವೇಶಿಸದರೆ ಬಂಧಿಸಿ: ವಾಟಾಳ್ ನಾಗರಾಜ್ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.