ETV Bharat / state

ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯದಿದ್ದರೆ ಡಿ. 5ರಂದು ರಾಜ್ಯ ಬಂದ್: ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸ್ಪಷ್ಟ ಸಂದೇಶ

ಡಿಸೆಂಬರ್ 5ರಂದು ರಾಜ್ಯ ಬಂದ್ ವಿಚಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದು ಖಾಸಗಿ ಹೋಟೆಲ್​ನಲ್ಲಿ​ ಜಂಟಿ ಸುದ್ದಿಗೋಷ್ಠಿ ಆಯೋಜಿಸಿದ್ದರು.

press meet
ಸುದ್ದಿಗೋಷ್ಠಿ
author img

By

Published : Nov 25, 2020, 3:36 PM IST

Updated : Nov 25, 2020, 4:19 PM IST

ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಡಿಸೆಂಬರ್ 5ರಂದು ರಾಜ್ಯ ಬಂದ್ ವಿಚಾರದಲ್ಲಿ ವ್ಯಾಪಕ ಪರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲಾ ಸಂಘಟನೆಗಳನ್ನು ಒಂದುಗೂಡಿಸಲು ಮುಂದಾಗಿರುವ ವಾಟಾಳ್ ನಾಗರಾಜ್​, ಸಾ.ರಾ.ಗೋವಿಂದು,​ ಹಲವು ಸಂಘಟನೆಗಳ ಜೊತೆ ಜಂಟಿ ಸುದ್ದಿಗೋಷ್ಠಿ ಕರೆದಿದ್ದರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಮುಖ್ಯಮಂತ್ರಿ ಚಂದ್ರು, ಬಿ.ಟಿ.ಲಲಿತಾ ನಾಯಕ್, ಕರವೇ ಶಿವರಾಮೇಗೌಡ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.

ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಬಂದ್‌ಗಾಗಿ ಕನ್ನಡಪರ ಸಂಘಟನೆಗಳು ಹರಸಾಹಸ ಪಡುತ್ತಿಲ್ಲ. ರಾಜ್ಯ ಸರ್ಕಾರ ಬಂದ್ ತಡೆಯಲು ಹರಸಾಹಸ ಮಾಡುತ್ತಿದೆ. ಬಳ್ಳಾರಿಯಲ್ಲಿ ಗಡಿ ಬಂದ್ ಮಾಡಿದ್ದು, ಉತ್ತಮ ಬೆಂಬಲ ದೊರೆತಿದೆ. ಯಾರನ್ನು ಕೇಳಿ ಮರಾಠ ನಿಗಮ ರಚನೆ ಮಾಡಿದರು. ಸರ್ವಪಕ್ಷ ಸಭೆ ಕರೆದಿಲ್ಲ, ವಿಧಾನಸಭೆಯಲ್ಲಿ ಇಡಲಿಲ್ಲ ಎಂದರು.

ಯಾರ ವಿಶ್ವಾಸವನ್ನೂ ತೆಗೆದುಕೊಳ್ಳದೆ, ಏಕಾಏಕಿ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಲಾಗಿದೆ. ಕನ್ನಡಪರ ಸಂಘಟನೆಗಳು ಒಂದಾಗಿ ಹೋರಾಟ ಮಾಡೋ ಪರಿಸ್ಥಿತಿ ಬಂದಿದೆ. ಬಂದ್ ಅಂತ ಹೇಳಿ ಯಾವ್ಯಾವ ರೀತಿ ಪ್ರಚಾರ ಮಾಡಬಹುದು ಮಾಡಿ ಎಂದರು.

ಡಿಸೆಂಬರ್ 5ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಬಂದ್ ಇರಲಿದೆ. ಸೆಪ್ಟೆಂಬರ್ 30ರವರೆಗೂ ಗಡುವು ನೀಡಿದ್ದೇವೆ, ಜೈಲಿಗೆ ಕಳಿಸಿದ್ರೂ ಪರವಾಗಿಲ್ಲ. ನಾವು ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲು ಅಧಿಕಾರ ಕೊಟ್ಟವರಾರು? ಈ ಪ್ರಾಧಿಕಾರಕ್ಕೆ ಸರ್ವಪಕ್ಷಗಳ ಸಭೆ ಕರೆದಿದ್ದೀರಾ? ಸದನದಲ್ಲಿ ಒಪ್ಪಿಗೆ ಪಡೆದಿದ್ದೀರಾ? ಮರಾಠ ಪ್ರಾಧಿಕಾರಕ್ಕೆ ನಿಮ್ಮ ಒಪ್ಪಿಗೆ ಮಾತ್ರ ಸಾಕಾ? ಎಂದು ಪ್ರಶ್ನಿಸಿದರು. ಕರ್ನಾಟಕ ಬಂದ್ ಮಾಡುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನೀವು ನಗಮ ವಾಪಸ್​​ ಪಡೆಯುವವರೆಗೂ ನಾವು ಪ್ರತಿಭಟನೆ ಮಾಡುವುದನ್ನು ನಿಲ್ಲಿಸೋದಿಲ್ಲ ಎಂದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಾಡು-ನುಡಿ, ಗಡಿಗಾಗಿ ನಮ್ಮ ಹೋರಾಟ. ಬಹಳಷ್ಟು ಜನ ನನ್ನ ಕೇಳಿದ್ರು. ಬಂದ್‌ಗೆ ನೀವು ಬೆಂಬಲ ನೀಡುತ್ತೀರಾ ಅಂತಾ. ನಾಡು-ನುಡಿ, ನೆಲ, ಜಲ, ಸಂವಿಧಾನಕ್ಕೆ ಅಪಮಾನವಾದಾಗ ಹೋರಾಟ ಅನಿವಾರ್ಯ ಎಂದರು.

ಕನ್ನಡ ಒಕ್ಕೂಟದ ಮುಖಂಡ ಮತ್ತು ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ಸರ್ಕಾರ ನಮ್ಮ ಹೋರಾಟವನ್ನು ಜಾತಿ ಹೋರಾಟ ಅಂತ ಹೇಳುತ್ತಿದೆ. ನಾವು ಎಂದಿಗೂ ಮರಾಠಿ ಸಂಘವನ್ನು ವಿರೋಧಿಸಿಲ್ಲ. ನವೆಂಬರ್ 1ರಂದು ಕಪ್ಪು ಬಟ್ಟೆ ಪ್ರದರ್ಶನ ಮಾಡೋದಕ್ಕೆ ನಮ್ಮ ವಿರೋಧವಿದೆ. ಮರಾಠ ಅಭಿವೃದ್ಧಿ ನಿಗಮ ಯಾಕೆ ಮಾಡುತ್ತಿದ್ದೀರಾ? ಅಭಿವೃದ್ಧಿ ನಿಗಮ ಮಾಡಿ, ನಮ್ಮನ್ನ ಬೇರೆ ಮಾಡುತ್ತಿದ್ದೀರ ಅಂತ ಕೆಲವರು ವಿರೋಧಿಸಿದ್ದಾರೆ. ಈ ವಿಚಾರ ಸೂಕ್ಷ್ಮ ವಿಚಾರವಾಗಿದ್ದು, ಜಾರಿಗೆ ತರೋ ಮುನ್ನ ಎಲ್ಲಿ ಚರ್ಚೆ ಮಾಡಿದ್ದೀರಾ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಇವತ್ತು ಇಷ್ಟೆಲ್ಲ ಹೋರಾಟ ಮಾಡ್ತಾ ಇದ್ದರೂ ಕರ್ನಾಟಕ ಸರ್ಕಾರಕ್ಕೆ ಗೊತ್ತಾಗ್ತಾ ಇಲ್ಲ. ಇಡೀ ಕರ್ನಾಟಕ ಜನರನ್ನು ಕುರಿ ಮಾಡ್ತಾ ಇದ್ದೀರಾ? ಈ ಸರ್ವಾಧಿಕಾರಿ ಧೋರಣೆ ಸರಿಯಲ್ಲ, ಜನ ಗಮನಿಸುತ್ತಿದ್ದಾರೆ. ನೀವು ಬಂದ್ ವಿಫಲ ಮಾಡುವ ಬಗ್ಗೆ ಯೋಚನೆ ಮಾಡಬೇಡಿ. ಒಳ್ಳೆದಕ್ಕೆ ಸುಗ್ರೀವಾಜ್ಞೆ ಹೊರಡಿಸೋದು ಯಾಕೆ ಮಾಡ್ತಿಲ್ಲ? ಚುನಾವಣೆ ಗೆಲ್ಲೋದಿಕ್ಕೆ ಈ ರೀತಿ ಮಾಡ್ತಾ ಇದ್ದೀರಾ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ... ''ಡಿ.5ರ ಬಂದ್‌ಗೆ ಬೀದಿ ಬದಿ ವ್ಯಾಪಾರಿಗಳಿಂದ ಬೆಂಬಲವಿಲ್ಲ''; ರಂಗಸ್ವಾಮಿ ಹೇಳಿಕೆ

Last Updated : Nov 25, 2020, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.