ಬೆಂಗಳೂರು: ಪ್ರೇಮಿಗಳ ದಿನದ ನಿಮಿತ್ತ ಸಿಲಿಕಾನ್ ಸಿಟಿಯಲ್ಲಿ ಆಕರ್ಷಕ, ವಿಭಿನ್ನ ರೀತಿಯ ಫ್ಯಾಷನ್ ಶೋ ನಡೆಯಿತು.
ರಿಚ್ಮಂಡ್ ರಸ್ತೆ ವುಡ್ ಸ್ಟ್ರೀಟ್ನಲ್ಲಿ ವಿಭಿನ್ನ ಮಾದರಿಯಲ್ಲಿ ಮಾಡೆಲ್ಗಳು ಫ್ಯಾಷನ್ ಶೋ ಎಮರಾಲ್ಡ್ ಸ್ಟೋರ್ ಪ್ರಾಯೋಜಕತ್ವದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಖ್ಯಾತ ಡಿಸೈನರ್ ಅಂಜುಮ್ ಎಜ್ಜೆಜ್, ಫ್ಯಾಷನ್ ಡಿಸೈನರ್ ಅಲ್ಲಾಭಕ್ಷ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಲಾಕ್ಡೌನ್ನಿಂದ ಮನೆಯಲ್ಲೆ ಕುಳಿತು ಬೇಸರಗೊಂಡಿದ್ದ ಮಹಿಳೆಯರು ಫ್ಯಾಷನ್ ಶೋನಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಡೆಲ್ಗಳಾದ ಪ್ರಿಯಾ ಪ್ರಶಾಂತ್, ಅನು ಪ್ರಸಾದ್, ಚೈತ್ರಾ, ಶ್ರದ್ಧಾ, ಮೈತ್ರಿ, ಸೋನಾಲಿ, ನಂದಿತಾ, ಗೌರಿ ದೀಪಕ್, ಅಂಕಿತಾ ರಾಂಪ್ ಮೇಲೆ ಹೆಜ್ಜೆ ಹಾಕಿದರು.