ETV Bharat / state

ವೈಕುಂಠ ಏಕಾದಶಿ: ಶರವಣ ಚಾರಿಟಬಲ್​​​ ಟ್ರಸ್ಟ್‌ನಿಂದ 1 ಲಕ್ಷ ಲಡ್ಡು ವಿತರಣೆ - ಟಿ ಎ ಶರವಣ

ವೈಕುಂಠ ಏಕಾದಶಿ ಪ್ರಯುಕ್ತ ಶರವಣ ಚಾರಿಟಬಲ್​​​​ ಟ್ರಸ್ಟ್ ನಿಂದ 1 ಲಕ್ಷ ಲಡ್ಡನ್ನು ವೆಂಕಟೇಶರ ಸ್ವಾಮಿ ದೇವಸ್ಥಾನಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದರು.

vaikuntha ekadashi
1 ಲಕ್ಷ ಲಡ್ಡು ವಿತರಣೆ
author img

By ETV Bharat Karnataka Team

Published : Dec 22, 2023, 9:04 AM IST

Updated : Dec 22, 2023, 9:31 AM IST

ಶರವಣ ಚಾರಿಟೇಬಲ್​​​ ಟ್ರಸ್ಟ್‌ನಿಂದ 1 ಲಕ್ಷ ಲಡ್ಡು ವಿತರಣೆ

ಬೆಂಗಳೂರು : ಶ್ರೀ ಸಾಯಿ ಪಾರ್ಟಿ ಹಾಲ್​ನಲ್ಲಿ ಶರವಣ ಚಾರಿಟಬಲ್​​​​ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ನಿಮಿತ್ತ ಭಕ್ತರಿಗೆ 1 ಲಕ್ಷ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಶೇಷ ಪೂಜೆ ಸಲ್ಲಿಸಿ ಟ್ರಸ್ಟ್ ಸಂಸ್ಥಾಪಕ ಟಿ.ಎ.ಶರವಣ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎ.ಶರವಣ, "ವೈಕುಂಠ ಏಕಾದಶಿ ದಿನದಂದು ಮಹಾ ವಿಷ್ಣುವಿನ ವೈಕುಂಠ ಮಹಾದ್ವಾರ ತೆಗೆಯುತ್ತದೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಅಂದು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂಬ ಬಿರುದಾಂಕಿತ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಬೇಕು. ತಿರುಮಲ ತಿರುಪತಿಗೆ ಹೋಗಬೇಕು, ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ, ಭಕ್ತಿ ಎಲ್ಲರಿಗೂ ಇರುತ್ತದೆ" ಎಂದು ಹೇಳಿದರು.

ಎಲ್ಲರು ತಿರುಪತಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ತಿರುಪತಿ ಲಡ್ಡು ಮಾದರಿಯಲ್ಲಿ 100 ಬಾಣಸಿಗರು ಹಗಲುರಾತ್ರಿ ಎನ್ನದೇ 1 ಲಕ್ಷ ಲಡ್ಡು ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಶುದ್ದ ತುಪ್ಪ, ಗೋಡಂಬಿ, ದ್ರಾಕ್ಷಿ, ಕಡಲೆಬೇಳೆ ಬಳಸಿ ತಿರುಪತಿಯ ಲಡ್ಡು ಮಾದರಿಯಲ್ಲಿ ತಯಾರಿಸಲಾಗುತ್ತಿದೆ. ನಂತರ ಶ್ರೀ ವೆಂಕಟೇಶ್ವರ ದೇವಸ್ಥಾನಗಳಿಗೆ ಲಡ್ಡು ನೀಡಲಾಗುತ್ತದೆ. ಬಳಿಕ, ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ವೈಕುಂಠ ಏಕಾದಶಿ ದಿನವೇ ದೇವಾಲಯದ ಬೀಗ ಕತ್ತರಿಸಿ ಹುಂಡಿ ಹಣ ಕದ್ದ ಕಳ್ಳರು

ತಿರುಪತಿ ತಿಮ್ಮಪ್ಪ, ಗೋವಿಂದ, ಹರೇ ಶ್ರೀನಿವಾಸ, ವೆಂಕಟೇಶ್ವರ, ಏಳು ಬೆಟ್ಟದ ಒಡೆಯನನ್ನು ಭಕ್ತರು ಭಕ್ತಿ ಭಾವದಿಂದ ಸ್ಮರಣೆ ಮಾಡುತ್ತಾರೆ. ತಿರುಪತಿ ತಿಮ್ಮಪ್ಪನ ನಂಬಿದ ಭಕ್ತರಿಗೆ ಎಂದೂ ಸಂಕಷ್ಟಗಳು ಬರುವುದಿಲ್ಲ. ಇಂದು ಜನರು ಬಹಳ ಅತಂಕದಲ್ಲಿ ಇದ್ದಾರೆ. ಕೊರೋನಾ ಎಂಬ ಮಹಾಮಾರಿ ಮತ್ತೇ ತನ್ನ ಅರ್ಭಟ ತೋರಿಸುತ್ತಿದೆ ಎಂಬ ವರದಿಗಳು ಬರುತ್ತಿದೆ. ಸಕಲ ಸಂಕಷ್ಟಗಳು ದೂರವಾಗಲಿ, ರೋಗ ರುಜಿನಗಳು ಮುಕ್ತವಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ, ನೆಮ್ಮದಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ವೈಕುಂಠ ಏಕಾದಶಿ : ಶ್ರೀನಿವಾಸನ ದರ್ಶನ ಪಡೆದ ಮಹಾನಗರ ಭಕ್ತಸಾಗರ

ವೈಕುಂಠ ಏಕಾದಶಿ : ವೈಕುಂಠ ಏಕಾದಶಿಯು ಹಿಂದೂ ಆಚರಣೆಯಲ್ಲಿ ಪವಿತ್ರವಾದ ದಿನವಾಗಿದೆ. ಈ ದಿನ ಭಗವಾನ್ ಶ್ರೀವಿಷ್ಣುವನ್ನ ಪೂಜಿಸಲು ಮೀಸಲಾಗಿದೆ. ಭಕ್ತರು ಉಪವಾಸ ಮಾಡಿ, ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ. ದಕ್ಷಿಣ ಭಾರತದ ಎಲ್ಲಾ ವಿಷ್ಣುವಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಪ್ರಮುಖ ದಿನವಾಗಿ ಆಚರಿಸಲಾಗುತ್ತದೆ.

Last Updated : Dec 22, 2023, 9:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.