ಬೆಂಗಳೂರು: ಕೊರೊನಾ ಎರಡನೇ ಅಲೆಯ ಆತಂಕ ದಿನೇ ದಿನೆ ಹೆಚ್ಚಾಗುತ್ತಿದ್ದು, ವರ್ಷಾರಂಭದಿಂದ ಎಲ್ಲಾ ಹಬ್ಬಗಳಿಗೂ ಬ್ರೇಕ್ ಬಿದ್ದಿದೆ. ಇದೀಗ ವೈಕುಂಠ ಏಕಾದಶಿ ಆಚರಣೆಗೂ ಅಡ್ಡಿಯುಂಟಾಗಿದ್ದು, ವೈಕುಂಠ ಏಕಾದಶಿ ಆಚರಣೆಗೆ ಬ್ರೇಕ್ ಹಾಕಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ.
![Vaikuntha Ekadashi celebration](https://etvbharatimages.akamaized.net/etvbharat/prod-images/9955386_393_9955386_1608549232405.png)
![Vaikuntha Ekadashi celebration](https://etvbharatimages.akamaized.net/etvbharat/prod-images/ka-bng-04-no-vykunta-celebration-ka10033_21122020154456_2112f_1608545696_89.jpg)
ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇಗುಲದಲ್ಲಿ ಈ ಬಾರಿ ವೈಕುಂಟ ಏಕಾದಶಿಯಂದು ದೇವರ ದರ್ಶನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇದೇ ಡಿಸೆಂಬರ್ 25ಕ್ಕೆ ವೈಕುಂಠ ಏಕಾದಶಿ ಆಚರಣೆಯಿದ್ದು, ನಗರದ ದೇವಸ್ಥಾನಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತೆ. ಆದ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ವೈಕುಂಠ ಏಕಾದಶಿ ದಿನ ನಡೆಯುವ ಕಾರ್ಯಕ್ರಮಗಳು ಅರ್ಚಕರ ನೇತೃತ್ವದಲ್ಲಿ ಮಾತ್ರ ನಡೆಯಬೇಕೆಂದು ತಿಳಿಸಲಾಗಿದ್ದು, ಬೆಂಗಳೂರಿನ ಕಲಾಸಿಪಾಳ್ಯದ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯದಲ್ಲಿ ಕೊರೊನಾ ಹರಡುವಿಕೆ ತಡೆಯಲು ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.