ETV Bharat / state

ವೈಕುಂಠ ಏಕಾದಶಿ ವಿಶೇಷ: ಆನ್‌ಲೈನ್‌ನಲ್ಲಿ ಭಕ್ತರಿಗೆ ದರ್ಶನ ಭಾಗ್ಯ - Special pooja in ISKCON Temple

ವೈಕುಂಠ ಏಕಾದಶಿ ಹಿನ್ನೆಲೆ ರಾಜಧಾನಿಯ ಇಸ್ಕಾನ್‌, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ವೈಯಾಲಿ ಕಾವಲ್​​ನ ಟಿಟಿಡಿ ಸೇರಿ ಎಲ್ಲ ದೇಗುಲಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಕೋವಿಡ್ ಟೈಟ್​ ರೂಲ್ಸ್​ನಿಂದ ದೇಗುಲಕ್ಕೆ ಭಕ್ತರು ಪ್ರವೇಶ ಮಾಡುವಂತಿಲ್ಲ. ಭಕ್ತರಿಗೆ ಆನ್‌ಲೈನ್‌ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಅಭಿಷೇಕ, ಪೂಜೆ ಎಂದಿನಂತೆ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ.

ವೈಕುಂಠ ಏಕಾದಶಿ ವಿಶೇಷ
ವೈಕುಂಠ ಏಕಾದಶಿ ವಿಶೇಷ
author img

By

Published : Jan 13, 2022, 11:31 AM IST

ಬೆಂಗಳೂರು /ಕೊಪ್ಪಳ: ಬೆಂಗಳೂರಿನಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆ ಅದ್ಧೂರಿ ಆಚರಣೆಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸಾಕಷ್ಟು ನಿರ್ಬಂಧ ಹೇರಿರುವುದರಿಂದ ಭಕ್ತರು ಆನ್‌ಲೈನ್‌ ಮೂಲಕ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ರಾಜಧಾನಿಯ ಇಸ್ಕಾನ್‌, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ವೈಯಾಲಿ ಕಾವಲ್​​ನ ಟಿಟಿಡಿ ಸೇರಿ ಎಲ್ಲ ದೇಗುಲಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಕೋವಿಡ್ ಟೈಟ್​ ರೂಲ್ಸ್​ನಿಂದ ದೇಗುಲಕ್ಕೆ ಭಕ್ತರು ಪ್ರವೇಶ ಮಾಡುವಂತಿಲ್ಲ. ಭಕ್ತರಿಗೆ ಆನ್‌ಲೈನ್‌ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಅಭಿಷೇಕ, ಪೂಜೆ, ಅಲಂಕಾರಗಳು ಎಂದಿನಂತೆ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ.

ಇಸ್ಕಾನ್ ದೇಗುಲದಲ್ಲಿ ವಿಶೇಷ ಪೂಜೆ:

ಇಸ್ಕಾನ್ ದೇಗುಲದಲ್ಲಿ ವೈಕುಂಠ ಏಕಾದಶಿ ಆಚರಣೆ ನಡೆಯುತ್ತಿದೆ. ಆದರೆ, ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಮತ್ತು ಸರ್ಕಾರ ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ವೈಕುಂಠ ದ್ವಾರ ನಿರ್ಮಾಣ
ವೈಕುಂಠ ದ್ವಾರ ನಿರ್ಮಾಣ

ದೇಗುಲದಲ್ಲಿ ವಿಶೇಷ ಆಹ್ವಾನಿತರಿಗೆ ಮಾತ್ರ ದರ್ಶನದ ಅವಕಾಶವಿದೆ. ಸುರಕ್ಷತೆಯ ಎಲ್ಲ ನಿಯಮಗಳನ್ನು ಪಾಲಿಸಿ ಸ್ಥಾನಿಕ ಭಕ್ತವೃಂದ ಬೆಳಗ್ಗೆ 5.30ಕ್ಕೆ ವೈಕುಂಠ ದ್ವಾರ ತೆಗೆದು ಉತ್ಸವ ಆಚರಿಸುತ್ತಿದೆ. ಇಡೀ ಉತ್ಸವದ ನೇರಪ್ರಸಾರ ದೇವಸ್ಥಾನದ ಅಧಿಕೃತ ಜಾಲತಾಣ (www.iskconbangalore.org) ಮತ್ತು ಇಸ್ಕಾನ್ ಬೆಂಗಳೂರು ಯೂಟ್ಯೂಬ್ ಚಾನೆಲ್​​ನಲ್ಲಿ ಲಭ್ಯವಿದೆ.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವೈಯಾಲಿ ಕಾವಲ್​ನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆಡೆಯುತ್ತಿದೆ. ಮಧ್ಯರಾತ್ರಿ 1:30 ಕ್ಕೆ ದೇಗುಲ ಓಪನ್ ಮಾಡಲಾಗಿದ್ದು, ಸುಪ್ರಭಾತ, ತೋಮಾಲ ಸೇವಾದೊಂದಿಗೆ ಪ್ರಾರಂಭವಾಗಿ 3 ಗಂಟೆಗೆ ಮೊದಲ ನೈವೇದ್ಯ ನೆಡೆಯಿತು.

ಮುಂಜಾನೆ 4 ಗಂಟೆಗೆ ಅಸ್ತನಾಮ ಪೂಜೆ, ವೈಕುಂಠ ದ್ವಾರ ಪೂಜೆ , 5 ಗಂಟೆಗೆ ವೈಕುಂಠ ದ್ವಾರ ತೆರೆಯಲಾಯಿತು. ದೇವಾಲಯದಲ್ಲಿ ಸಂಪ್ರದಾಯಕ್ಕಾಗಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ.

ಈ ಬಾರಿ ಕೋವಿಡ್ ಕಾರಣಕ್ಕೆ ವೆಂಕಟೇಶ್ವರ ದೇವಾಲಯದಲ್ಲಿ ಸರಳವಾಗಿ ಆಚರಣೆ ನೆಡೆಯುತ್ತಿದೆ. ಕೋವಿಡ್ ನಿಯಮದ ಪ್ರಕಾರ, ದೇವರ ದರ್ಶನ ಪಡೆಯಲು ಕೆಲವೇ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಸಾರಿ 50 ಜನರಿಗೆ ಮಾತ್ರ ದೇವಾಲಯಕ್ಕೆ ಮಾತ್ರ ಅವಕಾಶ ಮಾಡಿ ಕೊಡಲಾಗುತ್ತಿದೆ.

ಕೊಪ್ಪಳ ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ

ಕೊಪ್ಪಳದಲ್ಲಿ ಕಳೆಗಟ್ಟಿದ ಸಂಭ್ರಮ:

ಕೊಪ್ಪಳದಲ್ಲಿ ಸಹ ವೈಕುಂಠ ಏಕಾದಶಿಯ ಸಂಭ್ರಮ ಕಳೆಗಟ್ಟಿದೆ. ಕೊಪ್ಪಳ ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಕೊರೊನಾ ಸೋಂಕಿನ ಭೀತಿ ಇರುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಆದರೂ ಕೆಲ ಭಕ್ತರು ಮಾಸ್ಕ್ ಧರಿಸಿ ಶ್ರೀ ವೆಂಕಟೇಶ್ವರ ದರ್ಶನ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.