ETV Bharat / state

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯಿಂದ ಲಸಿಕೆ ಮಾರಾಟ - sell vaccine

ಹೆಬ್ಬಗೋಡಿ ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿ 300 ರೂಗೆ ಲಸಿಕೆ ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆಸ್ಪತ್ರೆ ಮುಂದೆ ಜನರು ಲಸಿಕೆಗಾಗಿ ಕಾದು ಕಾದು ಸುಸ್ತಾದರೆ ಅತ್ತ ಲಸಿಕೆ ಮಾರಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Vaccine sales by government hospital staff
ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದ ಲಸಿಕೆ ಮಾರಾಟ
author img

By

Published : Sep 7, 2021, 11:37 PM IST

Updated : Sep 8, 2021, 1:50 AM IST

ಆನೇಕಲ್ : ಸರ್ಕಾರ ಲಸಿಕೆಯನ್ನ ಉಚಿತವಾಗಿ ನೀಡುತ್ತಿದ್ದರೆ, ಇತ್ತ ಸರ್ಕಾರಿ ಆಸ್ಪತ್ರೆಯೊಂದರ ಸಿಬ್ಬಂದಿ ಅಕ್ರಮವಾಗಿ 300 ರೂಪಾಯಿಗಳಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನ ಅಂಗಳದಲ್ಲೇ ಲಸಿಕೆ ಕಳ್ಳತನದ ಮಾರಾಟಕ್ಕೆ ಜನ ಛೀಮಾರಿ ಹಾಕುತ್ತಿದ್ದಾರೆ. ಹೆಬ್ಬಗೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಪ್ರತಿ ದಿನ ಜನರಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರೂ ಅವರಿಗೆ ಪ್ರಮುಖ ಆಧ್ಯತೆ ನೀಡದೆ ಕಾಳದಂಧೆಯಲ್ಲಿ ಲಸಿಕೆ ಮಾರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯಿಂದ ಲಸಿಕೆ ಮಾರಾಟ

ಇಲ್ಲಿನ ಸಿಬ್ಬಂದಿ ಕಳ್ಳಾಟದ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು, ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Last Updated : Sep 8, 2021, 1:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.