ಬೆಂಗಳೂರು: ಇಂದು ಕೂಡಾ ನಗರದ ಕೆ.ಸಿ ಜನರಲ್ ಆಸ್ಪತ್ರೆಯ ಮುಂಭಾಗ ವ್ಯಾಕ್ಸಿನ್‌ಗಾಗಿ ಜನರ ಗೋಳು ಮುಂದುವರೆದಿದೆ. ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡ ಜನರು ಬೆಳಗ್ಗೆ ಸುಮಾರು 5.30 ರಿಂದ ಕಾದು ಕುಳಿತಿದ್ದರು.
ಟೋಕನ್ ಇಲ್ಲ ಎಂದು ಹೇಳುವ ಸಿಬ್ಬಂದಿ ಮತ್ತು ಟೋಕನ್ ಸಿಗದೆ ರೊಚ್ಚಿಗೆದ್ದ ಜನರ ಜಟಾಪಟಿಯೂ ಈ ಸಂದರ್ಭದಲ್ಲಿ ನಡೆಯಿತು. ನಾಲ್ಕು ದಿನಗಳಿಂದ ಅಲೆದಾಡಿದರೂ ನಾಳೆ ಬನ್ನಿ ಎಂಬ ಸಿದ್ದ ಉತ್ತರ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಭೂಪತಿ' vs ಉಮಾಪತಿ ಮನಸ್ತಾಪಕ್ಕೆ ಪೂರ್ಣವಿರಾಮ: 'ಲೇಡಿ' ವಿರುದ್ಧ ಸಮರಕ್ಕೆ 'ದುರ್ಯೋಧನ'ನ ತಯಾರಿ