ಆನೇಕಲ್ (ಬೆಂಗಳೂರು ನಗರ): ಪ್ರಾಯೋಗಿಕವಾಗಿ ಕೊರೊನಾ ಲಸಿಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಲಸಿಕೆಯ ಕಾರ್ಯವಿಧಾನ ತಾಳೆಯಾಗಲಿದೆಯೇ ಎನ್ನುವ ಮಾಹಿತಿ ಪರಿಶೀಲಿಸಲು ಈ ಪ್ರಕ್ರಿಯೆ ಆಯೋಜಿಸಲಾಗುತ್ತಿದೆ.
ಇದಕ್ಕಾಗಿ 25 ಮಂದಿಯನ್ನು ಆಯ್ದುಕೊಳ್ಳಲಾಗಿದೆ. ಆನೇಕಲ್‌ನ ಹಾರಗದ್ದೆಯಲ್ಲಿನ ವೈದ್ಯಕೀಯ ಇಲಾಖೆಯಲ್ಲಿ ಬೆಂಗಳೂರು ನಗರ ಸರ್ವೆಲೆನ್ಸ್ ಆಫೀಸರ್ ಡಾ. ಮನೋಹರ್ ನೇತೃತ್ವದಲ್ಲಿ ಪರೀಕ್ಷಾ ಹಂತದ ಡ್ರೈ ರನ್ ನಡೆಯುತ್ತಿದೆ.
ಯಾರಿಗೂ ಕೂಡ ವ್ಯಾಕ್ಸಿನ್ ನೀಡದೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಶುರು: ಹೀಗಿದೆ ಲಸಿಕೆ ನೀಡುವ ಪ್ರಕ್ರಿಯೆ!