ETV Bharat / state

ತುರ್ತು ವೈದ್ಯಕೀಯ ಸೇವೆಗೆ ಓಲಾ, ಊಬರ್ ಬಳಕೆ: ಶ್ರೀರಾಮುಲು ಚಾಲನೆ - Sriramulu

ತುರ್ತು ವೈದ್ಯಕೀಯ ಸೇವೆಗಾಗಿ 200 ಓಲಾ ಹಾಗೂ ಉಬರ್ ಕಾರುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಮಂಗಳವಾರ ಈ ಸೇವೆಗೆ ಚಾಲನೆ ನೀಡಿದ್ರು.

ಆರೋಗ್ಯ ಸಚಿವರಾದ ಶ್ರೀರಾಮುಲು
ಆರೋಗ್ಯ ಸಚಿವರಾದ ಶ್ರೀರಾಮುಲು
author img

By

Published : Apr 7, 2020, 11:37 PM IST

ಬೆಂಗಳೂರು: ಆ್ಯಂಬುಲೆನ್ಸ್​​ಗಳ ಕೊರತೆ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಯ ಮೊರೆ ಹೋಗಿರುವ ಆರೋಗ್ಯ ಇಲಾಖೆ 200 ವಾಹನಗಳನ್ನು ಆ್ಯಂಬುಲೆನ್ಸ್​​​ಗಳ ರೀತಿ ಬಳಸಿಕೊಳ್ಳುತ್ತಿದ್ದು, ಆರೋಗ್ಯ ಸಚಿವ ಬಿ. ಶ್ರೀರಾಮುಲು ಈ ಸೇವೆಗೆ ಚಾಲನೆ ನೀಡಿದರು.

ಸೆವೆನ್ ಮಿನಿಸ್ಟರ್ ಕ್ವಾಟ್ರಸ್​​ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಓಲಾ ಹಾಗು ಉಬರ್ ಕಾರುಗಳಿಗೆ ಸಚಿವ ಶ್ರೀರಾಮುಲು ಹಸಿರು ನಿಶಾನೆ ತೋರುವ ಮೂಲಕ ಸಾಂಕೇತಿಕ ಚಾಲನೆ ನೀಡಿದರು. ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಓಲಾ, ಉಬರ್ ಕ್ಯಾಬ್​​​ಗಳು ರಸ್ತೆಗೆ ಇಳಿದಿದ್ದು, ಇಂದಿನಿಂದ 100 ಓಲಾ, 100 ಉಬರ್ ಕ್ಯಾಬ್​​​ಗಳು ನಗರದಲ್ಲಿ ಸಂಚಾರ ನಡೆಸಲಿವೆ.

ಈ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, 108 ಆ್ಯಂಬುಲೆನ್ಸ್​​ಗಳು ಕೊರೊನಾ ವೈರಸ್ ರೋಗಿಗಳಿಗೆ ಬಳಕೆಯಾಗುತ್ತಿವೆ. ಹೀಗಾಗಿ ಸಾಮಾನ್ಯ ರೋಗಿಗಳಿಗೆ ತೊಂದರೆಯಾಗಬಾರದು. ‌ಆ ಕಾರಣಕ್ಕೆ ಓಲಾ, ಉಬರ್ ಕ್ಯಾಬ್ ಬಳಸಿಕೊಳ್ಳುತ್ತಿದ್ದೇವೆ. ಟೋಲ್ ಫ್ರೀ ನಂಬರ್ ಕೂಡ ಕೊಟ್ಟಿದ್ದೇವೆ.‌ 100 ಓಲಾ, 100 ಊಬರ್ ವಾಹನಗಳಿಗೆ ಚಾಲನೆ ನೀಡಿದ್ದೇನೆ. ಬೇರೆ ಸಾಮಾನ್ಯ ರೋಗಿಗಳು, ಸಾಮಾನ್ಯರ ಆರೋಗ್ಯ ದೃಷ್ಠಿಯಿಂದ ಇವು ಬಳಕೆಯಾಗಲಿವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.