ಬೆಂಗಳೂರು : ಕೋವಿಡ್-19 ಎರಡನೇ ಅಲೆಯ ಅವಧಿಯಲ್ಲಿ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಗೆ ವ್ಯಾಕ್ಸಿನೇಷನ್ ನೀಡುವ ಸಲುವಾಗಿ ನಿಗಮದ ವತಿಯಿಂದ ಬಸ್‌ಗಳನ್ನು ಒದಗಿಸುವಂತೆ ವಿವಿಧ ಜಿಲ್ಲಾಡಳಿತ/ಆರೋಗ್ಯ ಇಲಾಖೆಗಳಿಂದ ಬೇಡಿಕೆ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಕಿ.ಲೋ ಮೀಟರ್ ಆಧಾರದಲ್ಲಿ ಜಿಲ್ಲಾಡಳಿತಗಳಿಗೆ ರಿಯಾಯಿತಿ ದರದಲ್ಲಿ ಬಸ್ಗಳನ್ನ ಒದಗಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.
ಪ್ರತಿ ಕಿ.ಮೀ ಗೆ 39/- ನಂತೆ ಬಸ್‌ಗಳನ್ನ ನೀಡಲು ಕೆಎಸ್ಆರ್ಟಿಸಿ ಗ್ರೀನ್ ಸಿಗ್ನಲ್ ನೀಡಿದೆ. ಬೇಡಿಕೆಗೆ ತಕ್ಕಂತೆ ಬಸ್ಗಳನ್ನ ಒದಗಿಸಲು ಕೆಎಸ್ಆರ್ಟಿಸಿ ಎಂ.ಡಿ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.