ETV Bharat / state

ಎಸ್​ಎಸ್​ಎಲ್‌ಸಿ ಪರೀಕ್ಷೆಯನ್ನು ಶಾಲಾ ಹಂತದಲ್ಲೇ ನಡೆಸುವಂತೆ ಒತ್ತಾಯ

ಎಸ್​ಎಸ್​ಎಲ್​​ಸಿ ಪರೀಕ್ಷೆಯು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವುದರಿಂದ ಯಾವುದಾದರೊಂದು ರೀತಿಯಲ್ಲಿ ಪರೀಕ್ಷೆ ನಡೆಸುವುದು ಅನಿವಾರ್ಯ. ಹಾಗಾಗಿ ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಎಸ್​ಒಪಿ ಜಾರಿ ಮಾಡಲಿ. ಆಯಾ ಶಾಲೆಯಲ್ಲೇ ಪರೀಕ್ಷೆ ನಡೆಸಲು ಅನುಮತಿ ಕೊಡಲಿ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ. ‌

SSLC exam
ಎಸ್​ಎಸ್​ಎಲ್‌ಸಿ ಪರೀಕ್ಷೆ
author img

By

Published : May 25, 2021, 1:04 PM IST

ಬೆಂಗಳೂರು: ಕೋವಿಡ್​ ಎರಡನೇ ಅಲೆಯು ಭವಿಷ್ಯದ ಕನಸು ಕಾಣುತ್ತಿರುವವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.‌ ನಿತ್ಯ ಸಾವಿರಾರು ಮಂದಿಗೆ ಸೋಂಕು ಪತ್ತೆಯಾಗುತ್ತಿದ್ದು, ಸದ್ಯ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯಾವುದಾದರು ಒಂದು ಮಾದರಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದೆ. ಮೊನ್ನೆ ಕೇಂದ್ರ ಶಿಕ್ಷಣ ಇಲಾಖೆ ಸಚಿವರು ಎಲ್ಲ ರಾಜ್ಯಗಳ ಸಭೆಯನ್ನು ನಡೆಸಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಈ ಮಧ್ಯೆ ಎಸ್ಎಸ್ಎಲ್​ಸಿ ಪರೀಕ್ಷೆಯನ್ನೂ ನಡೆಸುವಂತೆ ರಾಜ್ಯದ ಖಾಸಗಿ ಶಾಲಾ ಸಂಘಟನೆಗಳು ಒತ್ತಾಯ ಮಾಡಿವೆ.

ಎಸ್​ಎಸ್​ಎಲ್​​ಸಿ ಬೋರ್ಡ್ ಪರೀಕ್ಷೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯವಿರುವುದರಿಂದ ಯಾವುದಾದರೊಂದು ರೀತಿಯಲ್ಲಿ ನಡೆಸುವುದು ಅನಿವಾರ್ಯ. ಸರ್ಕಾರಕ್ಕೆ ಪರೀಕ್ಷೆ ನಡೆಸುವುದು ಕಷ್ಟವಾದರೆ, ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಎಸ್​ಒಪಿ ಜಾರಿ ಮಾಡಲಿ. ಆಯಾ ಶಾಲೆಯಲ್ಲೇ ಪರೀಕ್ಷೆ ನಡೆಸಲು ಅನುಮತಿ ಕೊಡಲಿ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ. ‌

ಇದನ್ನೂ ಓದಿ: ಹಳ್ಳಿಗಳಲ್ಲಿ ಸೋಂಕು ನಿಯಂತ್ರಣ: ಗ್ರಾ.ಪಂ ಪ್ರತಿನಿಧಿಗಳ ಜೊತೆ ನಾಳೆ ಸಿಎಂ ವಿಡಿಯೋ ಸಂವಾದ

ಪರೀಕ್ಷೆಯಿಲ್ಲದೇ ಪಾಸ್ ಮಾಡುವುದಕ್ಕಿಂತ, ಆಯಾ ಶಾಲೆಯಲ್ಲೇ ಮಕ್ಕಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಆನ್​ಲೈನ್ ಅಥವಾ ಆಫ್​ಲೈನ್​​ನಲ್ಲಿಯಾದರೂ ಪರೀಕ್ಷೆ ನಡೆಸುವುದು ಸೂಕ್ತ ಎಂದರು. ಮುಂದಿನ ಹೆಚ್ಚುವರಿ ಶಿಕ್ಷಣಕ್ಕೆ ಪರೀಕ್ಷೆಗಳು ಬೇಕು. ಯಾವುದೇ ಮಾನದಂಡವಿಲ್ಲದೇ ಪಾಸ್ ಮಾಡುವುದು ಸರಿಯಲ್ಲ. ಸರಳ ಮಾರ್ಗದಲ್ಲಿಯಾದರೂ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.