ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರು ಹಾಗು ಪದಾಧಿಕಾರಿಗಳ ಸ್ಥಾನಕ್ಕಾಗಿ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಸಬೇಕು ಎಂದಾಗ ಫಿಲ್ಮ್ ಚೇಂಬರ್ ಕೊರೊನಾ, ಒಮಿಕ್ರಾನ್ ಅಂತಾ ಸುಳ್ಳು ಹೇಳಿ ಫಿಲ್ಮ್ ಚೇಂಬರ್ ಚುನಾವಣೆಯನ್ನ ಮುಂದಕ್ಕೆ ಹಾಕುತ್ತಿದೆ ಎಂದು ನಿರ್ಮಾಪಕ ಭಾ. ಮಾ. ಹರೀಶ್ ಸೇರಿದಂತೆ 30ಕ್ಕೂ ಹೆಚ್ಚು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾ. ಮಾ. ಹರೀಶ್ ನೇತೃತ್ವದಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಹಾಗು ಉಪಾಧ್ಯಕ್ಷ ಇಲ್ಲದ ಕಾರಣ, ಗೌರವ ಕಾರ್ಯದರ್ಶಿ ಎನ್, ಎಂ ಸುರೇಶ್ ಕೂಡಲೇ ಚುನಾವಣೆ ನಡೆಸುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಕೂಡಲೇ ಫಿಲ್ಮ್ ಚೇಂಬರ್ ಚುನಾವಣೆ ನಡೆಸೋದಕ್ಕೆ ಹೇಳಿದ್ರೂ ಕೂಡ ಫಿಲ್ಮ್ ಚೇಂಬರ್ನಲ್ಲಿ ರಾಜಕೀಯ ಮಾಡಲಾಗುತ್ತಿದೆ ಅಂತಾ ಭಾ. ಮಾ ಹರೀಶ್ ಹಾಗು ಕೆಲ ನಿರ್ಮಾಪಕರು ಎನ್, ಎಂ ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರಿಬ್ಬರು ಗಲಾಟೆ ಮಾಡಿಕೊಂಡರು.
ಅವಾಚ್ಯ ಶಬ್ಧಗಳಿಂದ ನಿಂದನೆ.. ಈ ಮಾತಿನ ಚಕಮಕಿ ನಡುವೆ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್. ಸುರೇಶ್, ವಿತರಕ ವಲಯದ ಕಾರ್ಯದರ್ಶಿ ಎ. ಗಣೇಶ್ ಹಾಗೂ ಫಿಲ್ಮ್ ಚೇಂಬರ್ ಉಚ್ಛಾಟಿತ ಸದಸ್ಯ ಶ್ರೀನಿವಾಸ್ ಜೆ. ಜೆ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಫಿಲ್ಮ್ ಚೇಂಬರ್ನಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸುವ ಮಟ್ಟಕ್ಕೆ ನಿರ್ಮಾಪಕ ಶ್ರೀನಿವಾಸ್ ಹಾಗು ಎ. ಗಣೇಶ್ ನಡುವೆ ಏರ್ಪಟ್ಟಿತ್ತು.
ಕೊನೆಗೆ ಎ. ಗಣೇಶ್ ಹಾಗೂ ಶ್ರೀನಿವಾಸ್ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ಹೋಯಿತು. ಏಕಾಏಕಿ ನನ್ನನ್ನು ಯಾಕೆ ಉಚ್ಛಾಟಿಸಿದ್ದಿರಿ ಅದಕ್ಕೆ ಒಂದು ನಡಾವಳಿ ಕೊಡಿ ಎಂದು ಶ್ರೀನಿವಾಸ್ ಪಟ್ಟು ಹಿಡಿದರು. ನಾವು ಲಕ್ಷಾಂತರ ರೂ. ಕಟ್ಟಿ ಫಿಲ್ಮ್ ಚೇಂಬರ್ ಸದಸ್ಯರಾಗಿದ್ದೀವಿ. ಮೂರು ವರ್ಷಗಳಿಂದ ಇಲ್ಲಿ ಎಲೆಕ್ಷನ್ ಮಾಡಿಲ್ಲ. ಎಲೆಕ್ಷನ್ ಮಾಡಿ ಎಂದು ಕೇಳಿದ್ದಕ್ಕೆ ನನ್ನನ್ನು ಉಚ್ಛಾಟಿಸಿದ್ದಾರೆ ಎಂದು ಆರೋಪಿಸಿದರು.
ಮೇ ತಿಂಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸಲು ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ, ಫಿಲ್ಮ್ ಚೇಂಬರ್ ಚುನಾವಣೆಯನ್ನ ಮುಂದೂಡುತ್ತಿದೆ ಅಂತಾ ಎಲ್ಲಾ ನಿರ್ಮಾಪಕರು ಆರೋಪಿಸಿದ್ದಾರೆ.
ಓದಿ: "ದಿ ಕಾಶ್ಮೀರ್ ಫೈಲ್ಸ್" ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ ಅಮಿರ್ ಖಾನ್