ETV Bharat / state

ಇಂದಿನಿಂದ ಅನ್ ಲಾಕ್-2 ಜಾರಿ: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೊಲೀಸ್​​ ಆಯುಕ್ತರು - corona Unlock 2 in bengaluru

ಇಂದಿನಿಂದ ಅನ್ ಲಾಕ್-2 ಆರಂಭವಾಗಿದ್ದು,‌ ಸರ್ಕಾರ‌ದ ಸೂಚನೆಯಂತೆ ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿ ಆದೇಶಿಸಿದ್ದಾರೆ.

unlock-2-in-bengaluru
ಇಂದಿನಿಂದ ಅನ್ ಲಾಕ್-2
author img

By

Published : Jul 1, 2020, 8:26 AM IST

ಬೆಂಗಳೂರು: ಇಂದಿನಿಂದ ಅನ್ ಲಾಕ್-2 ಆರಂಭವಾಗಿದ್ದು,‌ ಸರ್ಕಾರ‌ದ ಸೂಚನೆಯಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಅನ್​​ಲಾಕ್ -2ದ ಹೊಸ ನಿಯಮಾನುಸಾರ ಜುಲೈ 31ರವರೆಗೆ ನಗರದಲ್ಲಿ ನೀಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

unlock-2-in-bengaluru: strict order by police commissioner
ಆದೇಶ ಪ್ರತಿ

ನಿತ್ಯ ರಾತ್ರಿ 8ರಿಂದ ಬೆಳ್ಳಗ್ಗೆ 5ಗಂಟೆಯವರೆಗೆ ಲಾಕ್​ಡೌನ್ ಇರುತ್ತೆ. ಹಾಗೆ ಪ್ರತಿ ಭಾನುವಾರ ಸಿಟಿ ಕಂಪ್ಲೀಟ್ ಲಾಕ್ ಡೌನ್ ಆಗಿರುತ್ತೆ ಈ ಸಂದರ್ಭದಲ್ಲಿ ಯಾರೂ ಓಡಾಟ ಮಾಡುವಂತಿಲ್ಲ. ಹಾಗೆ ಹಗಲು ಹೊತ್ತು ಸಿಟಿಯಲ್ಲಿ ಹಿರಿಯ ಅಧಿಕಾರಿಗಳ‌ ನೇತೃತ್ವದಲ್ಲಿ ಪೊಲೀಸರು ಸಿಟಿ ರೌಂಡ್ಸ್ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್​​, ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ, ನಿಯಮ ಉಲ್ಲಂಘನೆ ಮಾಡಿದರೆ ಅಂತವರ ಮೇಲೆ‌ ಎನ್​ಡಿಎಂಎ ಆ್ಯಕ್ಟ್ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಅನ್​ಲಾಕ್-2 ಜಾರಿಯಾಗಿದ್ದರಿಂದ ‌ನಗರದ ಎಲ್ಲ‌ ಕಡೆ ಈ ಬಾರಿ ಖಾಕಿ ಅಲರ್ಟ್ ಆಗಿರಲಿದೆ. ಕೊರೊನಾ ಸೋಂಕು‌ ಅತಿ‌ ಹೆಚ್ಚಾಗಿ ಕಂಡು ಬಂದಿರುವ ಸಿದ್ದಾಪುರ, ವಿ.ವಿ.ಪುರಂ, ಚಿಕ್ಕಪೇಟೆ, ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ ಹೀಗೆ ಹಲವು ಕಡೆ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗಿದ್ದು. ಈ ಪ್ರದೇಶದಲ್ಲಿ ಇನ್ನಷ್ಟು ಮುಂಜಾಗ್ರತೆ ಕೈಗೊಳ್ಳಲಿದ್ದಾರೆ ಎಂದು ‌ಆಯುಕ್ತರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.