ETV Bharat / state

ಇನ್‌ಸ್ಟಾಗ್ರಾಂನಲ್ಲಿ ಬಾಲಕಿಯ ಸ್ನೇಹ ಬೆಳೆಸಿದ ಅಪರಿಚಿತ: ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ಕಳಿಸಿ ವಿಕೃತಿ - ಅಪರಿಚಿತನಿಂದ ಬಾಲಕಿಗೆ ಬ್ಲಾಕ್​ಮೇಲ್

ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಕ್ಲಾಸ್​ಗಳು ನಡೆಯುತ್ತಿವೆ. ಇದರಿಂದ ಮಕ್ಕಳಿಗೆ ಮೊಬೈಲ್​ ಕೊಡಿಸುವುದು ಪೋಷಕರಿಗೆ ಅನಿವಾರ್ಯವಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅಪರಿಚಿತನೋರ್ವ ಬಾಲಕಿಯ ಸ್ನೇಹ ಬೆಳೆಸಿ ಬಳಿಕ ಬ್ಲ್ಯಾಕ್​ಮೇಲ್​​ ಮಾಡಿರುವ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಹಾಗಾಗಿ ತಂದೆ-ತಾಯಿಗಳು ತಮ್ಮ ಮಕ್ಕಳು ಮೊಬೈಲ್​ ಬಳಸುವಾಗ ಒಂದೊಮ್ಮೆ ಗಮನ ಹರಿಸುವುದು ಉತ್ತಮ.

ಇನ್‌ಸ್ಟಾಗ್ರಾಂನಲ್ಲಿ ಸ್ನೇಹ ಬೆಳಸಿ ಅಪರಿಚಿತನಿಂದ ಬಾಲಕಿಗೆ ಬ್ಲಾಕ್​ಮೇಲ್
Unknown person blackmailing a girl
author img

By

Published : Dec 21, 2020, 8:54 AM IST

ಬೆಂಗಳೂರು: ಆನ್​​ಲೈನ್ ಕ್ಲಾಸ್​ಗಾಗಿ ಮಕ್ಕಳಿಗೆ ಮೊಬೈಲ್​ ಕೊಡಿಸಿರುವ ಪೋಷಕರು ಜಾಗೃತರಾಗಿರಬೇಕು. ಯಾಕೆಂದರೆ ಬಾಲಕಿವೋರ್ವಳು ಇನ್‌ಸ್ಟಾಗ್ರಾಮ್​ ಮೂಲಕ ಅಪರಿಚಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ, ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಕಿಡಿಗೇಡಿವೋರ್ವ ಬಾಲಕಿಗೆ ಬ್ಲ್ಯಾಕ್​ಮೇಲ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಸುಮಾರು 13 ವರ್ಷದ ಸಂತ್ರಸ್ತ ಬಾಲಕಿ ಆನ್​ಲೈನ್​ ಕ್ಲಾಸ್​ಗಾಗಿ ತೆಗೆದುಕೊಂಡಿದ್ದ ಮೊಬೈಲ್​ನಲ್ಲಿ ಇನ್‌ಸ್ಟಾಗ್ರಾಮ್​ ಬಳಸುತ್ತಿದ್ದಳು. ಈಕೆಗೆ ಕೆಲ ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯ ಪರಿಚಯವಾಗಿ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದ. ದಿನ ಕಳೆದಂತೆ ತನ್ನ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಬಾಲಕಿಗೆ ರವಾನಿಸಿ ವಿಕೃತಿ ಮೆರೆಯಲು ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೆ ಬಾಲಕಿಗೂ ಆಕೆಯ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ರವಾನಿಸುವಂತೆ ಸಂದೇಶ ಕಳುಹಿಸಿ ಬ್ಲ್ಯಾಕ್​ಮೇಲ್‌ ಮಾಡಿದ್ದಾನೆ.

ಇದರಿಂದ ಗಾಬರಿಗೊಂಡ ಬಾಲಕಿ ಅಪರಿಚಿತ ಕಳುಹಿಸಿದ್ದ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಳು. ಇದಾದ ಬಳಿಕವೂ ನಿರಂತರವಾಗಿ ಸಂದೇಶ ಕಳುಹಿಸಿ ನಗ್ನ ಫೋಟೋ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ಅಪರಿಚಿತನ ಇನ್‌ಸ್ಟಾಗ್ರಾಮ್ ಖಾತೆಯನ್ನು ರಿಪೋರ್ಟ್ ಮಾಡಿ ಬಾಲಕಿ ಪೋಷಕರು‌ ಸುಮ್ಮನಾಗಿದ್ದರು. ಇಷ್ಟಕ್ಕೆ ಸುಮ್ಮನಾಗದ ವ್ಯಕ್ತಿ ಮತ್ತೊಂದು ನಕಲಿ ಖಾತೆ ಸೃಷ್ಟಿಸಿಕೊಂಡು ಲೈಂಗಿಕವಾಗಿ ಸಹಕರಿಸುವಂತೆ ಬಾಲಕಿಗೆ ಆಡಿಯೋ ಸಂದೇಶಗಳನ್ನು ಕಳುಹಿಸಿ ಒತ್ತಡ ಹಾಕಿದ್ದಾನೆ.

ಈ ವಿಚಾರ ತಿಳಿದ ಬಾಲಕಿ ಪೋಷಕರು, ಇಮೇಲ್ ಮೂಲಕ ದಕ್ಷಿಣ ವಿಭಾಗದ ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕೊರೊನಾ ಸಂಬಂಧ ಮಕ್ಕಳಿಗೆ ಆನ್​ಲೈನ್​ ತರಗತಿಗಳು ಆರಂಭವಾಗಿವೆ. ಮಕ್ಕಳಿಗೆ ಪೋಷಕರು ಮೊಬೈಲ್​ ಕೊಡಿಸುವುದು ಅನಿವಾರ್ಯವಾಗಿದೆ. ಆದರೆ ಮೊಬೈಲ್​ನಲ್ಲಿ ತರಗತಿ ಕೇಳುವ ಜೊತೆಗೆ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕೆಲ ಮಕ್ಕಳು ತೊಡಗಿಸಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳು ಮೊಬೈಲ್​ ಬಳಸುವಾಗ ಒಂದೊಮ್ಮೆ ಗಮನ ಹರಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.