ETV Bharat / state

ಪುನೀತ್​​ ರಾಜ್​​ಕುಮಾರ್​​ ನಿಧನ ಭಾರತೀಯ ಚಿತ್ರರಂಗವನ್ನು ಸ್ತಬ್ಧಗೊಳಿಸಿದೆ: ಕೇಂದ್ರ ಸಚಿವ ಜೋಶಿ - ಪುನೀತ್​​ ರಾಜ್​​ಕುಮಾರ್​​ ನಿಧನ ಭಾರತೀಯ ಚಿತ್ರರಂಗವನ್ನು ಸ್ತಬ್ಧಗೊಳಿಸಿದೆ

ನಟ ಪುನೀತ್​​ ರಾಜ್​​ಕುಮಾರ್​​ ನಯ, ವಿನಯ, ಜತೆಗೆ ಸೃಜನಶೀಲ ನಟನಾಗಿ ಗುರುತಿಸಿಕೊಂಡಿದ್ದರು. ಸಹಾಯ ಕೇಳಿ ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಜನರು ಶಾಂತಿಯಿಂದ ಪುನೀತ್ ಅವರ ಅಂತಿಮ ದರ್ಶನ ಪಡೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ.

pralhad joshi
ಪ್ರಹ್ಲಾದ್ ಜೋಶಿ
author img

By

Published : Oct 30, 2021, 2:17 PM IST

ಬೆಂಗಳೂರು: ಪವರ್​​ ಸ್ಟಾರ್​​ ಪುನೀತ್​​ ರಾಜ್​ಕುಮಾರ್​​ ಅಕಾಲಿಕ ನಿಧನ ಭಾರತೀಯ ಚಿತ್ರರಂಗವನ್ನು ಸ್ತಬ್ಧಗೊಳಿಸಿದೆ. ಯಾರೂ ಊಹಿಸಲಾರದ ಘಟನೆ ಇದಾಗಿದೆ‌ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಅಪ್ಪು ಇದುವರೆಗೂ ಅಭಿನಯಿಸಿದ ಎಲ್ಲಾ ಚಲನಚಿತ್ರಗಳು ಕುಟುಂಬ ಸಮೇತ ವೀಕ್ಷಿಸಬಹುದಾದ ಚಿತ್ರಗಳಾಗಿವೆ. ಮನರಂಜನೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿದ್ದರು‌. 46ನೇ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಬಾರದಿತ್ತು‌. ನಯ, ವಿನಯ, ಜತೆಗೆ ಸೃಜನಶೀಲ ನಟ ಹಾಗೂ ನಾಗರೀಕನಾಗಿ ಅವರು ಗುರುತಿಸಿಕೊಂಡಿದ್ದರು ಎಂದರು.

ಸಹಾಯ ಕೇಳಿ ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಜನರು ಶಾಂತಿಯಿಂದ ಪುನೀತ್ ಅವರ ಅಂತಿಮ ದರ್ಶನ ಪಡೆಯಬೇಕು ಎಂದು ಜೋಶಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ತಂದೆ-ತಾಯಿ ಪಕ್ಕದಲ್ಲೇ 'ಅಪ್ಪು' ಸಮಾಧಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.