ETV Bharat / state

ಕೆ.ಆರ್.ಪುರದ ಐಟಿಐ ಆಸ್ಪತ್ರೆಗೆ ಕೇಂದ್ರ ಸಚಿವ ಡಿವಿಎಸ್ ಭೇಟಿ, ಪರಿಶೀಲನೆ - Union Minister DV Sadananda Gowda visits ITI Hospital

ಒಂದು ತಿಂಗಳೊಳಗೆ ಐಟಿಐ ಆಸ್ಪತ್ರೆಯನ್ನು 100 ಬೆಡ್ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತದೆ. ಅಲ್ಲದೇ 20 ಬೆಡ್​ಗಳನ್ನು ಇತರ ಚಿಕಿತ್ಸೆಗೆ ಬಳಸಲಾಗುತ್ತದೆ. ಮುಚ್ಚಿ ಹೋಗಿದ್ದ ಐಟಿಐ ಆಸ್ಪತ್ರೆಯನ್ನು ರೋಟರಿ ಕ್ಲಬ್ ಸಹಯೋಗದೊಂದಿಗೆ ಕೋವಿಡ್​​​ ಸೋಂಕಿತರ ಹಾರೈಕೆಗಾಗಿ ಬಳಸಲಾಗುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

Union Minister DV Sadananda Gowda
Union Minister DV Sadananda Gowda
author img

By

Published : May 14, 2021, 7:56 PM IST

ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಬೆಡ್​​ಗಳನ್ನು ಹೆಚ್ಚಿಸುವ ಉದ್ದೇಶದಿಂದ ಕೆ.ಆರ್.ಪುರದ ಐಟಿಐ ಆಸ್ಪತ್ರೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆ.ಆರ್.ಪುರದ ಐಟಿಐ ಆಸ್ಪತ್ರೆಗೆ ಕೇಂದ್ರ ಸಚಿವ ಡಿವಿಎಸ್ ಭೇಟಿ, ಪರಿಶೀಲನೆ

ಬಳಿಕ ಮಾತನಾಡಿದ ಅವರು, ಒಂದು ತಿಂಗಳೊಳಗೆ ಐಟಿಐ ಆಸ್ಪತ್ರೆಯನ್ನು 100 ಬೆಡ್ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತದೆ. ಅಲ್ಲದೇ 20 ಬೆಡ್​ಗಳನ್ನು ಇತರ ಚಿಕಿತ್ಸೆಗೆ ಬಳಸಲಾಗುತ್ತದೆ. ಮುಚ್ಚಿ ಹೋಗಿದ್ದ ಐಟಿಐ ಆಸ್ಪತ್ರೆಯನ್ನು ರೋಟರಿ ಕ್ಲಬ್ ಸಹಯೋಗದೊಂದಿಗೆ ಕೋವಿಡ್​​​ ಸೋಂಕಿತರ ಹಾರೈಕೆಗಾಗಿ ಬಳಸಲಾಗುತ್ತಿದೆ. ಇದಕ್ಕೆ ಕೇಂದ್ರ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಆಕ್ಸಿಜನ್ ಸಪ್ಲೈಗೆ ಬೇಕಾದ ಜನರೇಟರ್ ಸಹ ಅಳವಡಿಸಿಕೊಳ್ಳಲಾಗುತ್ತಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲಿದೆ. ಕೋವಿಡ್ ಮೂರನೇ ಅಲೆಗೆ ತಯಾರಿ ಸಹ ಮಾಡಿಕೊಳ್ಳುತ್ತಿದ್ದೇವೆ‌ ಎಂದರು.

ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್, ಆರ್​ಟಿಪಿಸಿಆರ್​ ಟೆಸ್ಟಿಂಗ್ ಲ್ಯಾಬ್ ಸಹ ನಿರ್ಮಾಣ ಮಾಡುತ್ತಿದ್ದು, ತಪಾಸಣೆಯಿಂದ ಗುಣಮುಖವಾಗುವವರೆಗೆ ಎಲ್ಲ ರೀತಿಯ ಸೌಲಭ್ಯ ಇಲ್ಲೇ ಸಿಗುತ್ತದೆ. ಪ್ರಾರಂಭದಲ್ಲಿ ಪ್ರಕರಣಗಳು ಹೆಚ್ಚಾದಾಗ ಕೇಂದ್ರ ಸರ್ಕಾರದಿಂದ ಸಮಸ್ಯೆಯಿತ್ತು. ಆದರೆ, ಕಳೆದ ಹತ್ತು ದಿನಗಳಿಂದ ಕೇಂದ್ರದಿಂದ ಮೆಡಿಸನ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಸಿಗುತ್ತಿದ್ದು, ಸದ್ಯ ಯಾವುದೇ ಸಮಸ್ಯೆಯಿಲ್ಲ. ನನ್ನ ಪ್ರಕಾರ 10 ದಿನಗಳೊಳಗೆ ಕೋವಿಡ್ ನಿಯಂತ್ರಣಕ್ಕೆ ಬರುತ್ತದೆ. ಜೀವ ಉಳಿಸಲು ಪ್ರಥಮ ಆದ್ಯತೆ. ಬಳಿಕ ಜೀವನ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.