ಬೆಂಗಳೂರು: ಟ್ವಿಟ್ಟರ್ ಖಾತೆಯ ಫಾಲೋವರ್ಸ್ ಸಂಖ್ಯೆ ನಾಲ್ಕು ಲಕ್ಷ ದಾಟಿರುವುದಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಂಚಿಕೊಂಡಿದ್ದು, ಟ್ವಿಟ್ಟರ್‌ನಲ್ಲಿ ಈ ಮೈಲಿಗಲ್ಲು ತಲುಪಲು ಕಾರಣೀಕರ್ತರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವ ನನ್ನಂತಹ ಜನಪ್ರತಿನಿಧಿಗಳಿಗೆ ಜನರ ಅಭಿಪ್ರಾಯ ತುಂಬಾನೇ ಮುಖ್ಯವಾಗುತ್ತದೆ. ಜನ ತೋರುವ ಪ್ರೀತಿ-ಅಭಿಮಾನ ಇನ್ನಷ್ಟು ಕೆಲಸ ಮಾಡಲು ಹುರುಪು ನೀಡುತ್ತದೆ. ಅವರು ಮಾಡುವ ಟೀಕೆ-ಟಿಪ್ಪಣೆಗಳು ತಪ್ಪನ್ನು ತಿದ್ದಿಕೊಳ್ಳಲು, ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಸಹಾಯವಾಗುತ್ತವೆ ಎಂದು ಬರೆದುಕೊಂಡಿದ್ದಾರೆ.
-
Today, a number of my colleagues congratulated me for reaching 400k followers on twitter. For me, as a samaj sevak, getting people’s love is most prized treasure.
— Sadananda Gowda (@DVSadanandGowda) November 17, 2020 " class="align-text-top noRightClick twitterSection" data="
I am overwhelmed & feeling very happy to receive warm affection from you all.
Thanks to my 400k twitter family🙏
">Today, a number of my colleagues congratulated me for reaching 400k followers on twitter. For me, as a samaj sevak, getting people’s love is most prized treasure.
— Sadananda Gowda (@DVSadanandGowda) November 17, 2020
I am overwhelmed & feeling very happy to receive warm affection from you all.
Thanks to my 400k twitter family🙏Today, a number of my colleagues congratulated me for reaching 400k followers on twitter. For me, as a samaj sevak, getting people’s love is most prized treasure.
— Sadananda Gowda (@DVSadanandGowda) November 17, 2020
I am overwhelmed & feeling very happy to receive warm affection from you all.
Thanks to my 400k twitter family🙏
ಇತ್ತೀಚಿನ ವರ್ಷಗಳಲ್ಲಿ ಮುಂಚೂಣಿಗೆ ಬಂದಿರುವ ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದೆ. ಕ್ಷಣಾರ್ಧದಲ್ಲಿ ಮಾಹಿತಿಗಳನ್ನು ಪಸರಿಸಬಹುದು. ಅದರ ಉಪಯೋಗ ಮತ್ತು ದುರುಪಯೋಗ ಎರಡೂ ಇವೆ. ನಾವೆಲ್ಲರೂ ಆದಷ್ಟು ಈ ಆಧುನಿಕ ಸಂವಹನ ಸಾಧನಗಳನ್ನು ಸಮಾಜದ ಒಳಿತಿಗಾಗಿ, ದೇಶದ ಹಿತಕ್ಕಾಗಿ, ಪ್ರಜಾತಂತ್ರವನ್ನು ಗಟ್ಟಿಗೊಳಿಸುವುದಕ್ಕಾಗಿ ಬಳಸೋಣ. ಉತ್ತಮ ವಿಚಾರಗಳನ್ನು ಹಂಚಿಕೊಳ್ಳಲು, ಜ್ಞಾನವನ್ನು ಪಸರಿಸಲು, ಜನರಿಗೆ ಪ್ರಸ್ತುತವಾದ, ಸಮೃದ್ಧವಾದ ಹಾಗೂ ಸತ್ಯವಾದ ಮಾಹಿತಿಗಳನ್ನಷ್ಟೇ ಹಂಚಿಕೊಳ್ಳಲು ಈ ವೇದಿಕೆಗಳನ್ನು ಉಪಯೋಗಿಸೋಣ ಎಂದು ಕೇಂದ್ರ ಸಚಿವ ಡಿವಿಎಸ್ ಕರೆ ನೀಡಿದ್ದಾರೆ.