ಬೆಂಗಳೂರು: ಇಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ನೇತಾಜಿ ಸುಭಾಷ್ ಕೇಂದ್ರವು ಕ್ರೀಡಾಪಟುಗಳ ಕಾರ್ಯಕ್ಷಮತೆಯ ಮೌಲ್ಯಮಾಪನ, ಚೇತರಿಕೆ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಸಮಗ್ರ ನೆರವನ್ನು ನೀಡುತ್ತದೆ. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತಿದೆ, ಶೀಘ್ರದಲ್ಲೇ ಸ್ಪೋರ್ಟ್ಸ್ ಹಬ್ ಆಫ್ ಇಂಡಿಯಾ ಆಗಲಿದೆ ಎಂದು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಸುಭಾಷ್ ಕೇಂದ್ರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾ ಭೇಟಿ ನೀಡಿದರು. ₹69.35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪುರುಷರ ವಸತಿ ನಿಲಯ, ಮಹಿಳೆಯರ ವಸತಿ ನಿಲಯ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುತ್ತಿದೆ. ಇದು ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸಹ ಹೊಂದಿದೆ, ಕ್ರೀಡಾಪಟುಗಳ ಕಾರ್ಯಕ್ಷಮತೆಯ ಮೌಲ್ಯಮಾಪನ, ಚೇತರಿಕೆ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಸಮಗ್ರ ನೆರವು ನೀಡುತ್ತದೆ. ಖೇಲೋ ಇಂಡಿಯಾ ಯೋಜನೆಯಡಿ ಗುರುತಿಸಲ್ಪಟ್ಟ ಉದಯೋನ್ಮುಖ ಪ್ರತಿಭೆಗಳು ತಮ್ಮ ಹಿರಿಯರಿಂದ ಅಮೂಲ್ಯವಾದ ಅನುಭವ ಪಡೆಯುವುದರೊಂದಿಗೆ ಇಲ್ಲಿರುವ ಸೌಲಭ್ಯಗಳ ಮೂಲಕ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದರು.
-
#WATCH | Bengaluru, Karnataka: Union Minister Anurag Thakur says, "They (suspended MPs) are suspended because of the activities they have been involved in, which were barred by the Speaker on the first day... After the poor performance by the Congress and the alliance in the 3… pic.twitter.com/PPu0yej0Zz
— ANI (@ANI) December 23, 2023 " class="align-text-top noRightClick twitterSection" data="
">#WATCH | Bengaluru, Karnataka: Union Minister Anurag Thakur says, "They (suspended MPs) are suspended because of the activities they have been involved in, which were barred by the Speaker on the first day... After the poor performance by the Congress and the alliance in the 3… pic.twitter.com/PPu0yej0Zz
— ANI (@ANI) December 23, 2023#WATCH | Bengaluru, Karnataka: Union Minister Anurag Thakur says, "They (suspended MPs) are suspended because of the activities they have been involved in, which were barred by the Speaker on the first day... After the poor performance by the Congress and the alliance in the 3… pic.twitter.com/PPu0yej0Zz
— ANI (@ANI) December 23, 2023
ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದ್ದು, ಹೆಮ್ಮೆಯ ಕ್ಷಣವಾಗಿದೆ. 300 ಹಾಸಿಗೆಯ ಪುರುಷರ ಹಾಸ್ಟೆಲ್ ಮತ್ತು 8 ಲೇನ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅನ್ನು ಉದ್ಘಾಟಿಸಿದ್ದೇನೆ. ಇವೆರಡನ್ನೂ ಭಾರತ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಹೆಚ್ಚುವರಿಯಾಗಿ 330 ಹಾಸಿಗೆಗಳ ಮಹಿಳಾ ಹಾಸ್ಟೆಲ್ ಅನ್ನು ಅನಾವರಣಗೊಳಿಸಲಾಗಿದೆ. ಒಟ್ಟು ₹69.35 ಕೋಟಿ ವೆಚ್ಚದಲ್ಲಿ ಈ ಸೌಲಭ್ಯಗಳನ್ನು ನಿರ್ಮಿಸಲಾಗಿದೆ ಎಂದಿದ್ದಾರೆ.
ಇಂದು ಉದ್ಘಾಟಿಸಿದ ಹೊಸ ಸೌಲಭ್ಯಗಳ ಸೇರ್ಪಡೆಯಿಂದಾಗಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ತರಬೇತಿ ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ವೃದ್ಧಿಸುತ್ತದೆ, ಅಥ್ಲೆಟಿಕ್ಸ್, ಹಾಕಿ, ಪ್ಯಾರಾ - ಕ್ರೀಡೆಗಳಿಗೆ ಪ್ರಮುಖ ಕೇಂದ್ರವಾಗಿದೆ ಮತ್ತು ರಾಷ್ಟ್ರೀಯ ಮಹಿಳಾ ಮತ್ತು ಪುರುಷರ ಹಾಕಿ ತಂಡಗಳ ತರಬೇತಿ ಮೈದಾನವಾಗಿದೆ ಎಂದು ತಿಳಿಸಿದರು.
ಸಂಸದರ ಅಮಾನತು ಕ್ರಮ ಸಮರ್ಥಿಸಿದ ಅನುರಾಗ್: ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನುರಾಗ್ ಠಾಕೂರ್, ಲೋಕಸಭೆ ಮತ್ತು ರಾಜ್ಯಸಭೆ ಕಲಾಪದಲ್ಲಿ ಗದ್ದಲದಲ್ಲಿ ತೊಡಗಿಸಿಕೊಂಡ ಕಾರಣಕ್ಕಾಗಿ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ಕಳಪೆ ಪ್ರದರ್ಶನದ ನಂತರ ಅವರ ನೈತಿಕ ಸ್ಥೈರ್ಯ ಕುಸಿಯಿತು. ಅದಕ್ಕಾಗಿ ಅವರೆಲ್ಲಾ ಅಧಿವೇಶನವನ್ನು ಬಹಿಷ್ಕರಿಸಲು ಕಾರಣ ಹುಡುಕುತ್ತಾ ಹೀಗೆಲ್ಲಾ ಗದ್ದಲ ಮಾಡಿದ್ದಾರೆ ಎಂದು ಸಂಸದರ ಅಮಾನತು ಕ್ರಮವನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ: ಆರೋಪಿ ಮಹೇಶ್ ಕುಮಾವತ್ ಪೊಲೀಸ್ ಕಸ್ಟಡಿ ವಿಸ್ತರಣೆ