ETV Bharat / state

ಫೆ.1 ರಂದು ಕೇಂದ್ರ ಬಜೆಟ್​: ತೆರಿಗೆದಾರರ ನಿರೀಕ್ಷೆಗಳೇನು?

ಕೇಂದ್ರ ಸರ್ಕಾರದ ಬಜೆಟ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಯಾವ ಯಾವ ಕ್ಷೇತ್ರಗಳ ನಿಯಮಗಳು ಬದಲಾಗಲಿವೆ?, ಆದಾಯ ತೆರಿಗೆ ಏರಿಕೆಯಾಗುತ್ತಾ?. ಎಂಬೆಲ್ಲ ವಿಚಾರಗಳು ಜನರನ್ನು ಕಾಡುತ್ತಿವೆ.

Some information about Budget 2023
2023 ರ ಬಜೆಟ್​ ಕುರಿತಾದ ಒಂದಿಷ್ಟು ಮಾಹಿತಿ
author img

By

Published : Jan 24, 2023, 1:37 PM IST

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬಜೆಟ್​ ಮಂಡನೆ ಮಾಡಲಿದ್ದು, ಇದು ಪ್ರಸ್ತುತ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಆಗಿರಲಿದೆ. ಹೀಗಾಗಿ, ಸಹಜವಾಗಿಯೇ ಜನರಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಪ್ರಸಕ್ತ ಬಜೆಟ್‌ನಲ್ಲಿ ಉದ್ಯೋಗ, ಮಕ್ಕಳ ಶಿಕ್ಷಣ, ಗೃಹ ಸಾಲ, ಆರೋಗ್ಯ ವಿಮೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಏರಿಕೆಯಾಗುವ ಸಂಭವ ಗೋಚರಿಸಿದೆ.

2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದೆ. ಇದು ದೇಶದ ಆರ್ಥಿಕಾಭಿವೃದ್ಧಿ ಉತ್ತೇಜಿಸುವ ಜೊತೆಗೆ ಜನರ ನಿರೀಕ್ಷೆಗಳನ್ನೂ ಈಡೇರಿಸಲಿದೆ ಎಂಬ ನಂಬಿಕೆ ಜನರದ್ದು. ಕೋವಿಡ್‌ ಸೋಂಕಿನಿಂದ ತತ್ತರಿಸಿರುವ ದೇಶ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಬಜೆಟ್‌ ಮೂಲಕ ಹಲವು ಬದಲಾವಣೆಗಳು ನಡೆಯಬಹುದು.

ಕಳೆದ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸುವ ಮತ್ತು ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿ ಹೆಚ್ಚಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಸಂಬಳ ಪಡೆಯುವ ವರ್ಗಕ್ಕೆ ಕೆಲವು ಬದಲಾವಣೆಗಳನ್ನು ತಂದಿತ್ತು. ಆದರೆ, ಇದರಿಂದ ಸಂಬಳ ಪಡೆಯುವ ಆದಾಯ ತೆರಿಗೆ ಪಾವತಿದಾರರಿಗೆ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಬರುತ್ತಿರುವ ಕೇಂದ್ರ ಸರ್ಕಾರದ ಕೊನೆಯ ಬಜೆಟ್-2.0 ಮೇಲೆ ಆಶಾಭಾವನೆ ಇಟ್ಟುಕೊಳ್ಳಲಾಗಿದೆ.

ಮುಂಬರುವ ಬಜೆಟ್‌ನಲ್ಲಿ ಸರ್ಕಾರವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಆದಾಯ ತೆರಿಗೆಯ ವಾರ್ಷಿಕ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬುದು ಉದ್ಯೋಗಿಗಳೂ ಸೇರಿದಂತೆ ಜನಸಾಮಾನ್ಯರ ಆಶಯ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೈಯಕ್ತಿಕ ತೆರಿಗೆದಾರರಿಗೆ ಹಳೆ ಮತ್ತು ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಚಾಲ್ತಿಯಲ್ಲಿರುವ 2.5 ಲಕ್ಷ ರೂ. ಆದಾಯ ತೆರಿಗೆ ವಾರ್ಷಿಕ ವಿನಾಯಿತಿ ಮಿತಿಯಲ್ಲಿ 2014 -15 ರಿಂದಲೂ ಯಾವುದೇ ಬದಲಾವಣೆ ಮಾಡಿಲ್ಲ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ತೆರಿಗೆ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರ ಸಂಖ್ಯೆ, ಸರ್ಕಾರ ಬಿಟ್ಟುಕೊಟ್ಟಿರುವ ತೆರಿಗೆ ಆದಾಯ ಮತ್ತಿತರ ಹಲವಾರು ಅಂಶಗಳನ್ನು ಪರಿಗಣಿಸಿ ಮೋದಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿ ಮರುಪರಿಶೀಲಿಸಬಹುದು ಎಂಬ ವಿಶ್ವಾಸವಿದೆ.

ಸ್ಟ್ಯಾಂಡರ್ಡ್ ಡಿಡಕ್ಷನ್ ಯೋಜನೆಯನ್ನು ಪರಿಚಯಿಸುವ ಮೂಲಕ 2018-19 ನೇ ಹಣಕಾಸು ವರ್ಷದಿಂದ ತೆರಿಗೆಮುಕ್ತ ವೈದ್ಯಕೀಯ ಮರುಪಾವತಿ ಮತ್ತು ಪ್ರಯಾಣ ಭತ್ಯೆ ವಿನಾಯಿತಿಯನ್ನು ಹಿಂಪಡೆಯಲಾಗಿದೆ. ಅಂದಿನಿಂದ ಕಡಿತದ ಮೊತ್ತ ಸ್ಥಿರವಾಗಿದೆ. ಆದರೆ, ವೈದ್ಯಕೀಯ ವೆಚ್ಚ ಮತ್ತು ಇಂಧನದ ವೆಚ್ಚವು ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ 50 ಸಾವಿರ ರೂ.ದಿಂದ 1 ಲಕ್ಷ ರೂ. ವರೆಗೆ ಹೆಚ್ಚಿಸಲು ಸರ್ಕಾರವು ಪರಿಗಣಿಸಬಹುದು.

ಇದರ ಹೊರತಾಗಿ, ಹೊಸ ಪರ್ಯಾಯ ತೆರಿಗೆ ಪದ್ಧತಿಯಡಿ ತೆರಿಗೆಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೂ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಪ್ರಯೋಜನ ಒದಗಿಸಲು ನಿರ್ಣಯಿಸಬಹುದು. ಏಕೆಂದರೆ ಈ ವೆಚ್ಚಗಳು ಯಾವುದೇ ಸಂಬಳದ ತೆರಿಗೆದಾರರಿಗೆ ಅವಶ್ಯಕ. ಇನ್ನು ವಿಮೆ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಪ್ರಸ್ತುತ ವೈಯಕ್ತಿಕ, ಸಂಗಾತಿ ಮತ್ತು ಅವಲಂಬಿತ ಮಕ್ಕಳನ್ನು ಒಳಗೊಂಡ ಆರೋಗ್ಯ ವಿಮಾ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಮಿತಿಯು 25 ಸಾವಿರ ರೂ.ನಷ್ಟಿದೆ.

ಅಲ್ಲದೇ, ಪೋಷಕರಿಗೆ 50 ಸಾವಿರ ರೂ.ಗಳ ಮಿತಿ ಇದೆ. ಅವರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿರಬೇಕು. ಆಸ್ಪತ್ರೆಯ ವೆಚ್ಚ ಮತ್ತು ವೈದ್ಯಕೀಯ ವೆಚ್ಚಗಳು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿರುವುದನ್ನು ಪರಿಗಣಿಸಿ, ಈ ಮಿತಿಗಳನ್ನು ಕ್ರಮವಾಗಿ 50 ಸಾವಿರ ರೂ. ಮತ್ತು 1 ಲಕ್ಷ ರೂ.ಗೆ ಹೆಚ್ಚಿಸಬಹುದು.

ಶಿಕ್ಷಣ ವೆಚ್ಚಕ್ಕೆ ತೆರಿಗೆ ವಿನಾಯಿತಿ?: ಮಕ್ಕಳ ಶಿಕ್ಷಣ ಭತ್ಯೆ ಅಡಿಯಲ್ಲಿ, ಪ್ರಸ್ತುತ ಗರಿಷ್ಠ ಎರಡು ಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ವೆಚ್ಚಗಳಿಗೆ ಪ್ರತಿ ಮಗುವಿಗೆ ತಿಂಗಳಿಗೆ 400 ರೂ. (ಶಿಕ್ಷಣ ವೆಚ್ಚ100 ರೂ. ಮತ್ತು ಹಾಸ್ಟೆಲ್‌ ವೆಚ್ಚ 300 ರೂ.) ವರೆಗೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಿದೆ. ಈ ವಿನಾಯಿತಿ ಮಿತಿಗಳನ್ನು ಸುಮಾರು ಎರಡು ದಶಕಗಳ ಹಿಂದೆ ನಿಗದಿಪಡಿಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಶಿಕ್ಷಣ ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ. ಆದ್ದರಿಂದ ಇತ್ತೀಚಿನ ಶಿಕ್ಷಣದ ವೆಚ್ಚಗಳನ್ನು ಪರಿಗಣಿಸಿ, ಈ ವಿನಾಯಿತಿ ಮಿತಿಗಳನ್ನು ಪ್ರತಿ ಮಗುವಿಗೆ ಅನುಕ್ರಮವಾಗಿ ಕನಿಷ್ಠ 1 ಸಾವಿರ ರೂ. ಮತ್ತು 3 ಸಾವಿರ ರೂ.ಗಳಿಗೆ ಹೆಚ್ಚಿಸುವ ನಿರೀಕ್ಷೆ ಇದೆ.

ಗೃಹ ಸಾಲ ಮೇಲಿನ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಪ್ರಸ್ತುತ 2 ಲಕ್ಷ ರೂ. ಇದೆ. ಆದರೆ, ಕಳೆದ ಒಂದು ವರ್ಷದಲ್ಲಿ ಬಡ್ಡಿದರಗಳು ಹೆಚ್ಚು ಏರಿಕೆ ಆಗಿದೆ. ವಸತಿ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ಬಡ್ಡಿಗೆ ಲಭ್ಯವಿರುವ ಕಡಿತವನ್ನು 2 ಲಕ್ಷ ರೂ.ಗೆ ಮಿತಿಗೊಳಿಸಿದರೆ, ಗೃಹ ಸಾಲ ಪಡೆದಿರುವವರಿಗೆ ಬಡ್ಡಿ ಹೊರೆ ಜೊತೆ ತೆರಿಗೆ ಹೊರೆಯೂ ಹೆಚ್ಚಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಬಡ್ಡಿ ವೆಚ್ಚದ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಪ್ರಸ್ತುತ ಇರುವ 2 ಲಕ್ಷ ರೂ. ನಿಂದ 5 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.

ರಾಜ್ಯದ ಪ್ರಸ್ತಾವನೆ: ಕೇಂದ್ರದ ಬಜೆಟ್ ಬೇಡಿಕೆ ಕುರಿತು ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಜಲಸಂಪನ್ಮೂಲ ಹಾಗೂ ಹಣಕಾಸು ಇಲಾಖೆಗೆ ಸಂಬಂಧಿಸಿದ ಯೋಜನೆಗಳತ್ತ ಹೆಚ್ಚು ಗಮನಸೆಳೆದಿದೆ. ಮೂಲ ಸವಲತ್ತು ಅಭಿವೃದ್ಧಿ, ಕೃಷಿ ಉತ್ಪನ್ನಗಳ ರಪ್ತಿಗೆ ಉತ್ತೇಜನ, 15ನೇ ಹಣಕಾಸು ಯೋಜನೆ ಶಿಫಾರಸು ಪ್ರಕಾರ ಬಾಕಿ ಹಣ ಪಾವತಿ ಬಗ್ಗೆಯೂ ಪ್ರಸ್ತಾಪಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದ ನಿರೀಕ್ಷೆಗಳೇನು?: ರಾಜ್ಯದಲ್ಲಿ ಚುನಾವಣೆ ವರ್ಷವಾಗಿರುವ ಹಿನ್ನೆಲೆಯಲ್ಲಿ ಕೇಂದ್ರದ ಬಜೆಟ್ ನಲ್ಲಿ ದೊಡ್ಡ ನಿರೀಕ್ಷೆ ಹೊಂದಲಾಗಿದೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಫಿನ್‌ಟೆಕ್‌ ಸಿಟಿ ಮಂಜೂರು ಮಾಡುವ ಸಾಧ್ಯತೆ ಇದೆ. ಮೆಟ್ರೋ ವಿಸ್ತರಣೆ, ಮೂಲ ಸವಲತ್ತು ಸುಧಾರಣೆ ಸೇರಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಸಾಧ್ಯತೆ ಗೋಚರಿಸಿದೆ. ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್), ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ಸಿಗುವ ನಿರೀಕ್ಷೆ ಇದೆ.

ಮೈಸೂರು-ಬೆಂಗಳೂರು-ತುಮಕೂರಿಗೆ ಹೈಸ್ಪೀಡ್ ರೈಲ್ವೆ ಯೋಜನೆ, ಆಹಾರ ಸಂಸ್ಕರಣೆ, ಬಲ್ಕ್ ಡ್ರಗ್ ಪಾರ್ಕ್, ಮೆಗಾ ಜವಳಿ ಪಾರ್ಕ್, ಶಿವಮೊಗ್ಗ, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ಸಾಧ್ಯತೆ ಇದೆ. ನೀರಾವರಿ ಕಾಲುವೆಗಳ ಜಾಲಗಳ ನವೀಕರಣ, ಆಧುನೀಕರಣಕ್ಕೆ ನೆರವು. ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯದ ಇನ್ನಷ್ಟು ನಗರಗಳ ಸೇರ್ಪಡೆಯಾಗಬಹುದು.

ಹಸಿರು ಇಂಧನ ಉತ್ಪಾದನೆಗೆ ಪ್ರೋತ್ಸಾಹಕಗಳು, ಹೆಚ್ಚಿನ ಅನುದಾನ, ಹಸಿರು ಬಂದರುಗಳ ಅಭಿವೃದ್ಧಿ, ಕರಾವಳಿ ಉದ್ಯೋಗ ವಲಯ ಸೃಷ್ಟಿ, ಕಲ್ಯಾಣ-ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ವಲಯವಾಗಿ ಪರಿಗಣನೆ ಜೊತೆಗೆ ಆಟೋಮೊಬೈಲ್, ತಯಾರಿಕಾ ವಲಯಗಳಿಗೆ ವಿಶೇಷ ಉತ್ತೇಜನಕ್ಕೆ ಒತ್ತು ನೀಡಬಹುದು.

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಜನರಿಗೆ ಎಷ್ಟು ಪರಿಹಾರ ಸಿಗಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಸರ್ಕಾರದ ಈ ಬಜೆಟ್‌ನಿಂದ ಯಾವ ಕ್ಷೇತ್ರಕ್ಕೆ ಎಷ್ಟು ಕೊಡುಗೆ ಸಿಕ್ಕಿದೆ ಎಂಬುದು ಬಜೆಟ್ ಮಂಡನೆ ನಂತರವಷ್ಟೇ ತಿಳಿಯಲಿದೆ. ಸರ್ಕಾರ ಜನರ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನೋಟಿನ ಮಳೆ: ಕೆ ಆರ್ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ನೋಟು ತೂರಿದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.