ETV Bharat / state

ಲಾಕ್‌ಡೌನ್ ಬರೆ: ತಿಂಗಳ ಕರುನಾಡ ಲಾಕ್​ಡೌನ್​ಗೆ ಹೆಚ್ಚಾಯಿತು ನಿರುದ್ಯೋಗ ಪ್ರಮಾಣ! - lockdown effect in karnataka

ಈ ಬಾರಿಯ ಒಂದು ತಿಂಗಳ ಲಾಕ್‌ಡೌನ್​ನಿಂದ ರಾಜ್ಯದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ತಬ್ದವಾಗಿದೆ. ಮೇ ತಿಂಗಳಿನಿಂದ ಕರುನಾಡು ಲಾಕ್‌ಡೌನ್ ಎಂಬ ಆರ್ಥಿಕ ವಿಪತ್ತನ್ನು ಎದುರಿಸುತ್ತಿದೆ. ಇದರ ನೇರ ಹೊಡೆತ ಬಿದ್ದಿರುವುದು ಅಸಂಘಟಿತ ವಲಯಗಳ ಮೇಲೆ. ಮೇ ತಿಂಗಳ ಲಾಕ್‌ಡೌನ್ ರಾಜ್ಯಕ್ಕೆ ಯಾವ ರೀತಿ ಹೊಡೆತ ನೀಡಿದೆ ಎಂಬುದಕ್ಕೆ ಸಿಎಂಐಇ ದತ್ತಾಂಶ ತೋರಿಸಿರುವ ನಿರುದ್ಯೋಗ ಪ್ರಮಾಣ ಕೈಗನ್ನಡಿಯಾಗಿದೆ.

Migrant workers
ವಲಸೆ ಕಾರ್ಮಿಕರು
author img

By

Published : Jun 3, 2021, 7:46 PM IST

ಬೆಂಗಳೂರು: ಕೊರೊನಾ 2ನೇ ಅಲೆ ಇಡೀ ಕರುನಾಡನ್ನು ಹಿಂಡಿ ಹಿಪ್ಪೆಯಾಗಿಸಿದೆ. ಕೊರೊನಾ ವೇಗಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ತಿಂಗಳಿಗೂ ಹೆಚ್ಚು ಕಾಲ ಸರ್ಕಾರ ಲಾಕ್‌ಡೌನ್ ಹೇರಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆ ಸ್ತಬ್ಧಗೊಂಡು ರಾಜ್ಯದಲ್ಲಿ ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದೆ.

ಲಾಕ್‌ಡೌನ್ ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ಹಿಂದೆಂದೂ‌ ಕಾಣದ ಹೊಡೆತ ನೀಡಿದೆ. ಮೊದಲ‌ ಲಾಕ್‌ಡೌನ್ ಹೊಡೆತದಿಂದ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದ ವಿವಿಧ ವಲಯಗಳಿಗೆ ಮತ್ತೊಂದು ನಿರ್ಬಂಧ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎಷ್ಟಿದೆ ರಾಜ್ಯದ ನಿರುದ್ಯೋಗ ಪ್ರಮಾಣ?: ದೇಶದ ಪ್ರತಿಷ್ಠಿತ ಸೆಂಟರ್ ಆಫ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (CMIE) ಸಂಸ್ಥೆ ರಾಜ್ಯದಲ್ಲಿನ ನಿರುದ್ಯೋಗದ ವಸ್ತುಸ್ಥಿತಿಯನ್ನು ಮುಂದಿಟ್ಟಿದೆ.

ಹೋಟೆಲ್​ ಸಂಘದ ಅಧ್ಯಕ್ಷ ಪಿ ಸಿ ರಾವ್​ ಮಾತನಾಡಿದರು

ಈ ಬಾರಿಯ ಒಂದು ತಿಂಗಳ ಲಾಕ್‌ಡೌನ್​​​​​​ನಿಂದ ರಾಜ್ಯದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ತಬ್ದವಾಗಿದೆ. ಮೇ ತಿಂಗಳಿನಿಂದ ಕರುನಾಡು ಲಾಕ್‌ಡೌನ್ ಎಂಬ ಆರ್ಥಿಕ ವಿಪತ್ತನ್ನು ಎದುರಿಸುತ್ತಿದೆ. ಇದರ ನೇರ ಹೊಡೆತ ಬಿದ್ದಿರುವುದು ಅಸಂಘಟಿತ ವಲಯಗಳ ಮೇಲೆ. ಮೇ ತಿಂಗಳ ಲಾಕ್‌ಡೌನ್ ರಾಜ್ಯಕ್ಕೆ ಯಾವ ರೀತಿ ಹೊಡೆತ ನೀಡಿದೆ ಎಂಬುದಕ್ಕೆ ಸಿಎಂಐಇ ದತ್ತಾಂಶ ತೋರಿಸಿರುವ ನಿರುದ್ಯೋಗ ಪ್ರಮಾಣ ಕೈಗನ್ನಡಿಯಾಗಿದೆ.

ಮೇ ತಿಂಗಳಲ್ಲಿ ಕರುನಾಡ ನಿರುದ್ಯೋಗ ಪ್ರಮಾಣ ಶೇ5.3ಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ 2 ರಷ್ಟು ಇತ್ತು. ಇದೀಗ ಮೇ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಹಾಕಿರುವ ಹಿನ್ನೆಲೆ ನಿರುದ್ಯೋಗ ಪ್ರಮಾಣ ಶೇ5.3ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಹೇರಲಾದ ರಾಷ್ಟ್ರೀಯ ಲಾಕ್‌ಡೌನ್ ನಿಂದ ಚೇತರಿಸಿಕೊಳ್ಳುತ್ತಿದ್ದ ನಿರುದ್ಯೋಗ ಪ್ರಮಾಣಕ್ಕೆ ಮತ್ತೊಂದು ಲಾಕ್‌ಡೌನ್ ನಿರೀಕ್ಷೆಯಂತೆ ಮತ್ತೆ ಹೆಚ್ಚಿಸುವಂತೆ ಮಾಡಿದೆ.

ಕಳೆದ ವರ್ಷದ ಲಾಕ್​ಡೌನ್​ನಿಂದ ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ29.8ಕ್ಕೆ ದಾಖಲೆ ಏರಿಕೆ ಕಂಡಿತ್ತು. ಅದೇ ಮೇ ತಿಂಗಳಲ್ಲಿ ಅಲ್ಪ ಮಟ್ಟಿನ ಲಾಕ್‌ಡೌನ್ ಸಡಿಲಿಕೆಯಾದ ಹಿನ್ನೆಲೆ ನಿರುದ್ಯೋಗ ಪ್ರಮಾಣ ಶೇ20.4ಕ್ಕೆ ಅಲ್ಪ ಇಳಿಕೆ ಕಂಡಿತು. ಜೂನ್ ತಿಂಗಳಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾದ ಕಾರಣ ನಿರುದ್ಯೋಗ ಪ್ರಮಾಣದಲ್ಲಿ ಚೇತರಿಕೆ ಕಾಣತೊಡಗಿತು.

ಕಳೆದ ವರ್ಷ ಅನ್​ಲಾಕ್ ಆದ ಬಳಿಕ ರಾಜ್ಯದ ನಿರುದ್ಯೋಗ ಪ್ರಮಾಣ ಅಕ್ಟೋಬರ್​ನಲ್ಲಿ ಶೇ1.6ರಷ್ಟು ಇಳಿಕೆಯಾಯಿತು. ಬಳಿಕ ನವಂಬರ್ ಶೇ1.9, ಡಿಸೆಂಬರ್ ಶೇ1.4, ಜನವರಿ ಶೇ3.3, ಫೆಬ್ರವರಿ ಶೇ2.5, ಮಾರ್ಚ್ ಶೇ1.2 ಮತ್ತು ಏಪ್ರಿಲ್ ಶೇ,2ರಲ್ಲಿತ್ತು. ಇದೀಗ ಲಾಕ್‌ಡೌನ್ ಹೇರಿರುವ ಕಾರಣ ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 5.3 ಗೆ ಏರಿಕೆ ಕಂಡಿದೆ.

ಪ್ರಮುಖ ರಾಜ್ಯಗಳ ನಿರುದ್ಯೋಗ ಸ್ಥಿತಿ ಹೇಗಿದೆ?: ಅಂಕಿ - ಅಂಶದ ಪ್ರಕಾರ, ಇತರ ಪ್ರಮುಖ ರಾಜ್ಯಗಳ ನಿರುದ್ಯೋಗ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕದ ನಿರುದ್ಯೋಗ ಪ್ರಮಾಣ ಕಡಿಮೆಯೇ ಇದೆ.

ಮಹಾರಾಷ್ಟ್ರದಲ್ಲಿ ಏಪ್ರಿಲ್​ನಲ್ಲಿ ನಿರುದ್ಯೋಗ ಪ್ರಮಾಣ ಶೇ5.5ರಷ್ಟು ಇದ್ದರೆ, ಮೇನಲ್ಲಿ ಶೇ5.7ರಷ್ಟು ಇದೆ. ಗುಜರಾತ್​ನಲ್ಲಿ ಏಪ್ರಿಲ್ ವೇಳೆ ನಿರುದ್ಯೋಗ ಪ್ರಮಾಣ ಶೇ1.8ರಷ್ಟು, ಮೇನಲ್ಲಿ ಶೇ2.3ಕ್ಕೆ ಅಲ್ಪ ಏರಿಕೆಯಾಯಿತು. ಇನ್ನು ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಏಪ್ರಿಲ್ ವೇಳೆ 4.5% ಇದ್ದ ನಿರುದ್ಯೋಗ ಪ್ರಮಾಣ ಮೇನಲ್ಲಿ 13.5%ಗೆ ಏರಿಕೆ ಆಗಿದೆ.‌

ಇತ್ತ ತೆಲಂಗಾಣದಲ್ಲಿ ಏಪ್ರಿಲ್ ತಿಂಗಳಲ್ಲಿ ಶೇ5ರಷ್ಟು ಇದ್ದ ನಿರುದ್ಯೋಗ ಮೇನಲ್ಲಿ 7.4ಕ್ಕೆ ಏರಿಕೆಯಾಗಿದೆ. ಇನ್ನು ತಮಿಳುನಾಡಿನಲ್ಲಿ ಏಪ್ರಿಲ್ ನಲ್ಲಿ ಶೇ2.3ರಷ್ಟು ಇದ್ದ ನಿರುದ್ಯೋಗ ಮೇನಲ್ಲಿ ಶೇ 28ರಷ್ಟಕ್ಕೆ ಏರಿಕೆ ಕಂಡಿದೆ.

ಅಧಿಕ ಉದ್ಯೋಗ ನಷ್ಟವಾದ ಕ್ಷೇತ್ರ ಯಾವುದು?: ಅಸಂಘಟಿತ ವಲಯದಲ್ಲಿ ಅಧಿಕ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದ್ದು, ಲಾಕ್​ಡೌನ್​ ವೇಳೆ ಅಸಂಘಟಿತ ವಲಯದಲ್ಲಿ ಲಕ್ಷಾಂತರ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಇದರ ಜೊತೆಗೆ ಪ್ರವಾಸೋದ್ಯಮ, ಸಾರಿಗೆ ಕ್ಷೇತ್ರ, ಹೋಟೆಲ್​, ರೆಸ್ಟೋರೆಂಟ್ ಕ್ಷೇತ್ರಗಳಿಗೆ ಲಾಕ್‌ಡೌನ್​ನಿಂದ ಏಟು ಬಿದ್ದಿದೆ. ಹೋಟೆಲ್​ ಉದ್ಯಮ, ಪ್ರವಾಸೋದ್ಯಮ ನೆಲಕಚ್ಚಿರುವ ಹಿನ್ನೆಲೆ ದೊಡ್ಡ ಪ್ರಮಾಣದ ಉದ್ಯೋಗ ನಷ್ಟ ಆಗಿದೆ. ಇನ್ನು ಅದೇ ರೀತಿ ನಿರ್ಮಾಣ ಕ್ಷೇತ್ರ, ಮನರಂಜನಾ ಕ್ಷೇತ್ರಗಳಲ್ಲೂ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನಷ್ಟ ಆಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಪ್ರವಾಸೋದ್ಯಮ ವಲಯದಲ್ಲಿ ನಿರುದ್ಯೋಗಿಗಳ ಪ್ರಮಾಣ: ಈಗಾಗಲೇ ಲಾಕ್‌ಡೌನ್ ಹಿನ್ನೆಲೆ ಸುಮಾರು 8 ಲಕ್ಷ ವಲಸಿಗರು ತಮ್ಮ ಊರುಗಳಿಗೆ ತೆರಳಿದ್ದಾರೆ. ಮೇ ತಿಂಗಳ ಲಾಕ್‌ಡೌನ್ ಹಿನ್ನೆಲೆ ಸುಮಾರು 5000-7,000 ಗಾರ್ಮೆಂಟ್ಸ್ ಕಾರ್ಮಿಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರವಾಸೋದ್ಯಮ ವಲಯದಲ್ಲಿ ಸುಮಾರು 10-15 ಲಕ್ಷ ಮಂದಿ ನಿರುದ್ಯೋಗಿಗಳಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇತ್ತ ಹೋಟೆಲ್​ಗಳಿಗೆ ನಿರ್ಬಂಧಿತ ಅವಕಾಶ ನೀಡಲಾಗಿದ್ದು, ಈ​ ಕ್ಷೇತ್ರದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಬೆಂಗಳೂರಲ್ಲಿ ಸುಮಾರು 6,500 ಹೋಟೆಲ್​ಗಳು ಮುಚ್ಚಿವೆ. ಅದರಲ್ಲಿ ಸುಮಾರು 3,000 ಲಾಡ್ಜಿಂಗ್ ಹೋಟೆಲ್​ಗಳು ಮುಚ್ಚಿವೆ ಎಂದು ಸಂಘಟನೆ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಓದಿ: ಅಕ್ರಮವಾಗಿ ರಸಗೊಬ್ಬರ - ಬೀಜ ಮಾರಿದರೆ ಕಾನೂನು ಕ್ರಮ : ಸಚಿವ ಬಿ.ಸಿ. ಪಾಟೀಲ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.