ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿದ್ದು, ಪೊಲೀಸರು 30ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಈ ವೇಳೆ ಸಿಸಿಬಿ ಪೊಲೀಸರು 23 ಪ್ರಕರಣಗಳ ಸಂಬಂಧ ತನಿಖೆ ಅವಶ್ಯಕತೆ ಇರುವ ಕಾರಣ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ರವಿ ಪೂಜಾರಿಯನ್ನ ಸಿಸಿಬಿ ಪೊಲೀಸರ ವಶಕ್ಕೆ ನೀಡಿದೆ. ಸದ್ಯ ನಗರದಲ್ಲಿ ನಡೆದಿರುವ ಹಲವಾರು ಪ್ರಕರಣದಲ್ಲಿ ರವಿ ಪೂಜಾರಿ ಪಾತ್ರವಿದ್ದು, 23 ಪ್ರಕರಣ ಸಂಬಂಧ ಸಿಸಿಬಿ, ಡಿಸಿಪಿ ತನಿಖೆ ನಡೆಸಲಿದ್ದಾರೆ. 23 ಪ್ರಕರಣ ಸಂಬಂಧ ಪಟ್ಟಿಯನ್ನ ಈಗಾಗಲೇ ಸಿದ್ಧಪಡಿಸಿದ್ದು, ನಾಳೆಯಿಂದ ತನಿಖೆ ಶುರು ಮಾಡಲಿದ್ದಾರೆ.
ಬಾಡಿ ವಾರೆಂಟ್ ಮೂಲಕ ರವಿಯನ್ನ ಕಸ್ಟಡಿಗೆ ತೆಗೆದುಕೊಳ್ಳಲು ಮುಂಬೈ ಪೊಲೀಸರು ಸಿದ್ಧವಾಗಿದ್ದರು. ಆದರೆ ಸದ್ಯ ಕರ್ನಾಟಕ ಪೊಲೀಸರು ಮತ್ತೆ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ರವಿ ಪೂಜಾರಿ ಈಗಾಗಲೇ ಪೊಲೀಸರೆದುರು ಮುಂಬೈ ಪೊಲೀಸರ ವಶಕ್ಕೆ ನೀಡಬೇಡಿ ಎಂದು ಮನವಿ ಮಾಡಿದ್ದ ಎನ್ನಲಾಗಿದೆ.