ETV Bharat / state

ಹೊಂದಾಣಿಕೆಗೆ ಬಗ್ಗದ ಹಿಂದುತ್ವವಾದಿ ವ್ಯಕ್ತಿ ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ - ಆಕಾಂಕ್ಷಿ ಬಸನಗೌಡ ಪಾಟೀಲ್ ಯತ್ನಾಳ್

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಯಾವಾಗ ಆಗುತ್ತದೆಯೋ ಗೊತ್ತಿಲ್ಲ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ರಾಜ್ಯಾಧ್ಯಕ್ಷ ಸ್ಥಾನ ಶೀಘ್ರವೇ ನೇಮಕ ಆಗುತ್ತದೆ. ನೇಮಕ ಆಗುವ ಇಬ್ಬರಿಗೂ ಚಾಲೆಂಜ್ ಇದೆ: ಮಾಜಿ ಸಚಿವ ಈಶ್ವರಪ್ಪ

Former DCM KS Eshwarappa
ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ
author img

By

Published : Jul 4, 2023, 5:54 PM IST

ಬೆಂಗಳೂರು: ಯಾವುದೇ ಹೊಂದಾಣಿಕೆಗೆ ಬಗ್ಗದ, ಹಿಂದುತ್ವವಾದಿ ವ್ಯಕ್ತಿ ಪ್ರತಿಪಕ್ಷ ನಾಯಕ ಆಗಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಪ್ರಸ್ತುತ ಬಿಜೆಪಿಗೆ ಇಂತಹ ವ್ಯಕ್ತಿಯ ಅಗತ್ಯತೆ ಇದೆ. ಹಾಗಾಗಿ ಅಂತಹ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಪಾದಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕೇಂದ್ರದ ವೀಕ್ಷಕರಿಗೆ ಅಭಿಪ್ರಾಯ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವವಾದಿ, ಯಾವುದೇ ಹೊಂದಾಣಿಕೆಗೂ ಬಗ್ಗದ ವ್ಯಕ್ತಿ ಪ್ರತಿಪಕ್ಷ ನಾಯಕನಾಗಬೇಕು. ಬಿಜೆಪಿಯಲ್ಲಿ ಈಗ ಟರ್ನಿಂಗ್ ಪಾಯಿಂಟ್ ಆಗುತ್ತಿದೆ. ನಾವು ಈ ಬಾರಿ ಅಂಕಿ-ಅಂಶಗಳಲ್ಲಿ ಸೋತಿದ್ದೇವೆಯೇ ವಿನಃ ಪರ್ಸೇಂಟೇಜ್ ನಲ್ಲಿ ಅಲ್ಲ, ಇಡೀ ಹಿಂದುತ್ವದ ಮೂಲಕ ಬಿಜೆಪಿ ಹಾಗೂ ಸಂಘಟನೆ ಬೆಳೆದಿದೆ. ಇದರ ಆಧಾರದ ಮೇಲೆಯೇ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರ ನೇಮಕ ಯಾವಾಗ ಆಗುತ್ತದೆಯೋ ಗೊತ್ತಿಲ್ಲ, ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೂ ಶೀಘ್ರವೇ ನೇಮಕ ಆಗುತ್ತದೆ. ಹೀಗಾಗಿ ನೇಮಕ ಆಗುವ ಇಬ್ಬರಿಗೂ ಚಾಲೆಂಜ್ ಇದೆ, ಇಬ್ಬರಿಗೂ ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬರುವ ಚುನಾವಣೆಯಲ್ಲಿ ಗೆಲ್ಲಿಸುವ ಹೊಣೆ ಇದೆ ಎಂದು ಅಭಿಪ್ರಾಯ ತಿಳಿಸಿದರು.

ಇವತ್ತು ಸಂಜೆ ಅಥವಾ ನಾಳೆ ಒಳಗೆ ಪ್ರತಿಪಕ್ಷ ನಾಯಕನ ಆಯ್ಕೆಯಾಗಬಹುದು, ರಾಜಕಾರಣದಲ್ಲಿ ಪ್ರತಿ ಸ್ಥಾನಕ್ಕೂ ಪೈಪೋಟಿ ಇದ್ದೇ ಇರುತ್ತದೆ. ಹಿಂದುತ್ವವಾದಿ, ಯಾವುದೇ ಹೊಂದಾಣಿಕೆಗೆ ಬಗ್ಗದೆ ಇರುವ ವ್ಯಕ್ತಿ ಪ್ರತಿಪಕ್ಷ ನಾಯಕನಾಗಬೇಕು, ಯತ್ನಾಳ್ ಹಿಂದುತ್ವವಾದಿ, ಅವರ ಹೆಸರು ಸೇರಿದಂತೆ ಈ ಮಾತು ಹೇಳುತ್ತಿದ್ದೇನೆ ಎಂದು ಯತ್ನಾಳ್ ಪರ ಒಲವು ವ್ಯಕ್ತಪಡಿಸಿದರು.

ಶೋಭಾ ಕರಂದ್ಲಾಜೆ ಯಾಕೆ ರಾಜ್ಯಾಧ್ಯಕ್ಷೆ ಆಗಬಾರದು: ಮಹಿಳೆಯರು ಯಾಕೆ ಬಿಜೆಪಿ ರಾಜ್ಯಾಧ್ಯಕ್ಷರು ಆಗಬಾರದು..? ಎಲ್ಲ ಕಡೆಯೂ ಮಹಿಳೆಯರು ಇರಬೇಕು ಹಾಗೆಯೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮಹಿಳೆಯರು ಇರಬೇಕು. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಆಯ್ಕೆ ನಡೆಯುತ್ತಿದೆ. ರಾಜ್ಯಾಧ್ಯಕ್ಷರು ಯಾರಾಗಬೇಕೆಂದು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೇ ಆದರೂ ಅವರ ಜೊತೆ ನಾವು ಒಟ್ಟಾಗಿ ಹೋಗುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.

ಅನುಭವಿ ನಾಯಕರ ಆಯ್ಕೆ: ಬಿಜೆಪಿ ಕಚೇರಿಗೆ ಆಗಮಿಸಿದ ಮಾಜಿ ಸಚಿವ ಗೋವಿಂದ ಕಾರಜೋಳ ಕೇಂದ್ರದ ವೀಕ್ಷಕರಿಗೆ ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಎಲ್ಲವನ್ನೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕವನ್ನು ಹೈಕಮಾಂಡ್ ತೀರ್ಮಾನ ಮಾಡಿದಾಗ ಆಗುತ್ತದೆ. ಅನುಭವಿ ಪ್ರತಿಪಕ್ಷ ನಾಯಕರ ಅವಶ್ಯಕತೆ ಇದೆ. ಆ ನಿಟ್ಟಿನಲ್ಲೇ ಆಯ್ಕೆ ನಡೆಯಲಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಗುಪ್ತ ಮತದಾನದಂತೆ ಗುಪ್ತ ಅಭಿಪ್ರಾಯ: ಗುಪ್ತ ಮತದಾನದಂತೆ ಗುಪ್ತ ಅಭಿಪ್ರಾಯವನ್ನು ಹೈಕಮಾಂಡ್ ವೀಕ್ಷಕರಿಗೆ ತಿಳಿಸಲಾಗಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ಸ್ಥಾನದ ಆಕಾಂಕ್ಷಿ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಹೈಕಮಾಂಡ್ ವೀಕ್ಷಕರ ಭೇಟಿ ಬಳಿಕ ಮಾತನಾಡಿದ ಅವರು, ಪ್ರತಿಪಕ್ಷ ನಾಯಕನ ಆಯ್ಕೆ ಸಂಬಂಧ ವೀಕ್ಷಕರಿಗೆ ನನ್ನ ಅಭಿಪ್ರಾಯ ಹೇಳಿದ್ದೇನೆ, ಎಲ್ಲ ಅಭಿಪ್ರಾಯ ಕೇಳುತ್ತಾರೆ. ಆದರೆ ಪಕ್ಷದ ಒಳ ವಿಷಯಗಳನ್ನು ಹೇಳೋಕೆ ಆಗಲ್ಲ, ಗುಪ್ತ ಮತದಾನ ಅಷ್ಟೇ ಎಂದು ಹೇಳಿದರು.

ಇದನ್ನೂಓದಿ:ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡಿದ ಬಿಜೆಪಿ.. ಕರ್ನಾಟಕದ್ದು ಯಾವಾಗ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.