ETV Bharat / state

ಕ್ಯಾಬ್ ಏರಿದ ಯುವತಿಗೆ ಲೈಂಗಿಕ ಕಿರುಕುಳ... ಬೆಂಗಳೂರಲ್ಲಿ ಆರೋಪಿ ಅಂದರ್​

author img

By

Published : Feb 17, 2020, 10:18 PM IST

ಬೆಂಗಳೂರಿನಲ್ಲಿ ಕ್ಯಾಬ್​ ಚಾಲಕನೋರ್ವ ತನ್ನ ಕಾರ್​​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಚಾಲಕ ಈಗ ಕಂಬಿ ಎಣಿಸುವಂತಾಗಿದೆ.

ಲೈಂಗಿಕ ಕಿರುಕುಳ
ಲೈಂಗಿಕ ಕಿರುಕುಳ

ಬೆಂಗಳೂರು: ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಚಾಲಕನನ್ನು ಕೆ ಆರ್ ಪುರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಹಿಂದೂಪುರ ಮೂಲದ ರಾಮ್ ಮೋಹನ್ ಬಂಧಿತ ಉಬರ್ ಕ್ಯಾಬ್ ಚಾಲಕ. ಟಿ.ಸಿ. ಪಾಳ್ಯದ ನಿವಾಸಿಯಾದ 25 ವರ್ಷದ ಯುವತಿ ಇತ್ತೀಚೆಗೆ ತನ್ನ ಗೆಳತಿಯರನ್ನು ಭೇಟಿ ಮಾಡಲು ಹೆಬ್ಬಾಳಕ್ಕೆ ಹೋಗಿದ್ದರು. ಹೆಬ್ಬಾಳದಿಂದ ತಮ್ಮ ಮನೆಗೆ ಬರಲು ಸಂಜೆ 6:30ರ ಸಮಯದಲ್ಲಿ ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕೆ.ಆರ್. ಪುರ ಮಾರ್ಗವಾಗಿ ಟಿಸಿ ಪಾಳ್ಯ ಗೇಟ್​ನಲ್ಲಿ ಚಾಲಕ ಕ್ಯಾಬ್​ನಲ್ಲಿಯೇ ಯುವತಿಯ ಕಾಲು ಮುಟ್ಟಿ ಟೀ ಷರ್ಟ್​ ಒಳಗೆ ಕೈಹಾಕಲು ಯತ್ನಿಸಿದ್ದನಂತೆ. ನಂತರ ಸಂತ್ರಸ್ತೆ ಯುವತಿ ಮಾರ್ಗ ಮಧ್ಯೆಯೇ ಕ್ಯಾಬ್ ನಿಂದ ಇಳಿದು ಮನೆಗೆ ತೆರಳಿದ್ದಳು. ಫೆಬ್ರವರಿ 11ರಂದು ಘಟನೆ ಹಿನ್ನಲೆ ಕೆ.ಆರ್. ಪುರ ಪೊಲೀಸ್ ಠಾಣೆಗೆ ಚಾಲಕನ ದುರ್ವತನೆ ವಿರುದ್ಧ ಯುವತಿ ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿ ಕ್ಯಾಬ್ ಚಾಲಕ ರಾಮ್​ ಮೋಹನನ್​ನನ್ನು ಫೆಬ್ರವರಿ 12 ರಂದು ಕೆ ಆರ್ ಪುರ ಪೊಲೀಸರು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸಿದ್ದರು. ಆರೋಪಿಗೆ ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.