ETV Bharat / state

ಮಹಿಳೆಗೆ ಖಾಸಗಿ ಅಂಗ ತೋರಿಸಿ ವಿಕೃತಿ‌ ಮೆರೆದ ಊಬರ್ ಚಾಲಕ.. ಆರೋಪ - ಈಟಿವಿ ಭಾರತ ಕನ್ನಡ

ಮಹಿಳಾ ಪ್ರಯಾಣಿಕರೊಬ್ಬರು ಊಬರ್​​ನಲ್ಲಿ ಪ್ರಯಾಣಿಸುವಾಗ ಚಾಲಕ ಅಸಭ್ಯ ವರ್ತನೆ ತೋರಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಊಬರ್ ಚಾಲಕ ಅಸಭ್ಯ ವರ್ತನೆ
ಊಬರ್ ಚಾಲಕ ಅಸಭ್ಯ ವರ್ತನೆ
author img

By

Published : Jun 23, 2023, 7:45 AM IST

Updated : Jun 23, 2023, 8:16 AM IST

ಬೆಂಗಳೂರು: ಮಹಿಳಾ ಪ್ರಯಾಣಿಕರೊಂದಿಗೆ ಊಬರ್ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿ ತನ್ನ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್‌ವರೆಗೆ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಜತೆ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ನೊಂದ ಮಹಿಳೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಾಕಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಪೋಸ್ಟ್ ವೈರಲ್ ಆದ ನಂತರ, ಮಹಿಳೆ ಮತ್ತೊಂದು ಪೋಸ್ಟ್‌ ಅನ್ನು ಹಾಕಿ, ಚಾಲಕನ ವಿರುದ್ಧ ಊಬರ್ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ? ಕ್ಯಾಬ್ ಬುಕ್ ಮಾಡಿದ ಮೇಲೆ ಚಾಲಕನು ಸಮಯಕ್ಕೆ ಸರಿಯಾಗಿ ನನ್ನನ್ನು ಕರೆದುಕೊಂಡು ಹೋಗಲು ಬಂದನು. ಮೊದಲಿಗೆ ಎಲ್ಲವೂ ಸರಿಯಾಗಿಯೇ ಇತ್ತು. ಬಳಿಕ ಇದ್ದಕ್ಕಿದ್ದಂತೆ ಚಾಲಕ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದ. ಇದರಿಂದ ನಾನು ಮುಜುಗರಕ್ಕೆ ಒಳಗಾಗಿ, ನಿಗದಿತ ಸಮಯಕ್ಕಿಂತ ಸ್ವಲ್ಪ ಬೇಗನೆ ನಾನು ತಲುಪಬೇಕಿದ್ದ ಸ್ಥಳಕ್ಕೆ ಬಿಡಲು ಕೇಳಿಕೊಂಡೆ. ಅದರಂತೆ ಆತ ಬೇಗ ಸ್ಥಳಕ್ಕೆ ಬಿಟ್ಟಿದ್ದರು. ನಂತರ ಹಣ ಕೊಡಲು ಹೋದಾಗ ಚಾಲಕ ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ. ಇದರಿಂದ ನಾನು ಗಾಬರಿಗೊಂಡು ತಕ್ಷಣ ಚಾಲಕನಿಂದ ಓಡಿಹೋದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.

ಇದಾದ ಒಂದು ದಿನದ ನಂತರ ಮಹಿಳೆಯು ಮತ್ತೊಂದು ಪೋಸ್ಟ್ ಮಾಡಿದ್ದು, ನಾನು ಆ ಘಟನೆಯ ಬಗ್ಗೆ ಮಾಹಿತಿ ನೀಡಲು ಬಯಸುತ್ತೇನೆ. ನಾನು ಊಬರ್ ಚಾಲಕನ ಕುರಿತು ಕಂಪ್ಲೆಂಟ್ ಮಾಡಿದ್ದೆ. ಈ ಕುರಿತು ಊಬರ್ ತಂಡವು ನನ್ನನ್ನು ಸಂಪರ್ಕಿಸಿ, ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದು, ಚಾಲಕನ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ಊಬರ್ ಪ್ರತಿಕ್ರಿಯೆ ಜತೆಗೆ ಲಿಂಕ್ಡ್‌ಇನ್‌ಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಊಬರ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಪ್ರಯಾಣಿಕರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಈ ರೀತಿಯ ಘಟನೆಗಳು ಮುಂದೆ ಎಂದಿಗೂ ಆಗಬಾರದು. ಗ್ರಾಹಕರ ಯೋಗಕ್ಷೇಮವು ಮೊದಲ ಆದ್ಯತೆಯಾಗಿದ್ದು, ಈ ಮೂಲಕ ಅದು ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಸಂಬಂಧ ಮಹಿಳೆ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಕೆಲದಿನಗಳ ಹಿಂದಷ್ಟೆ ಊಬರ್​ ಕ್ಯಾಬ್​​ಅಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಂದಿಗೆ ಕಾರಲ್ಲಿ ಚಾಲಕ ಅಸಭ್ಯ ವರ್ತನೆ ತೋರಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಮಹಿಳೆ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಏರ್​ಲೈನ್ಸ್ ಮಹಿಳಾ ಸಿಬ್ಬಂದಿಗೆ ಎಲ್ಲೆಲ್ಲೋ ಟಚ್ ಮಾಡಿ ಅಸಭ್ಯ ವರ್ತನೆ.. ಪ್ರಯಾಣಿಕನ ವಿರುದ್ಧ ದೂರು

Last Updated : Jun 23, 2023, 8:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.