ಬೆಂಗಳೂರು : ಹೇಳಿಕೊಳ್ಳೋಕೆ ಮೆಕ್ಯಾನಿಕ್ ಉದ್ಯೋಗ ಆದರೆ ಮಾಡುತ್ತಿದ್ದದ್ದು ಮಾತ್ರ ದ್ವಿಚಕ್ರ ವಾಹನ ಕಳ್ಳತನ. ಇಬ್ಬರು ಕುಖ್ಯಾತ ದ್ವಿಚಕ್ರ ವಾಹನ ಕಳ್ಳರನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಪಾಶಾ ಹಾಗೂ ಹುಸೇನ್ ಸೌದದ್ ಬಂಧಿತ ಆರೋಪಿಗಳು.
![Seized two-wheelers](https://etvbharatimages.akamaized.net/etvbharat/prod-images/16275907_theft.jpg)
ಶಿವಾಜಿನಗರದ ತನ್ನ ಮನೆಯಲ್ಲೇ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಅಫ್ರೋಜ್, ಹುಸೇನ್ ಸೌದದ್ ಜೊತೆ ಸೇರಿ ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕಳ್ಳತನ ಆರಂಭಿಸಿದ್ದನು. ಬಳಿಕ ಕಳ್ಳತನ ಮಾಡಿದ ವಾಹನದ ಬಿಡಿಭಾಗಗಳನ್ನು ಬಿಚ್ಚಿ ಮಾರಾಟ ಮಾಡುತ್ತಿದ್ದರು. ಕಳೆದ ಆರೇಳು ತಿಂಗಳಿನಿಂದ ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳು ಬನಶಂಕರಿ, ಜೆಪಿ ನಗರ, ಬಸವನಗುಡಿ, ಶಿವಾಜಿನಗರ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಜಯನಗರ ಠಾಣಾ ಪೊಲೀಸರು ಬಂಧಿತರಿಂದ 20 ವಿವಿಧ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರು ಕಳ್ಳತನ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ