ಬೆಂಗಳೂರು: ನಗರದಲ್ಲಿ ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಕಾರಣಕ್ಕೆ ಸಾಕಷ್ಟು ಜನರು ಹಾಫ್, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಿದ್ದಾರೆ. ಸರ್ವೆ ಪ್ರಕಾರ ಅಪಘಾತದಲ್ಲಿ ಈ ಹಾಫ್ ಹೆಲ್ಮೆಟ್ ಧರಿಸಿದ್ದವರೇ ಹೆಚ್ಚು ಸಾಯುತ್ತಿದ್ದಾರೆ. ಹೀಗಾಗಿ ಇನ್ಮುಂದೆ ಹಾಫ್, ಕಳಪೆ ಹೆಲ್ಮೆಟ್ ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತರು, ಸದ್ಯ ನಗರದ ಹಲವು ಕಡೆ ಈ ಬಗ್ಗೆ ಸಂಚಾರ ಪೊಲೀಸರು ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ. ಫೇಸ್ ಕವರ್ ಹೆಲ್ಮೆಟ್ ಧರಿಸುವಂತೆ ಮೊದಲು ಜಾಗೃತಿ ಮೂಡಿಸಲಾಗುವುದು. ನಂತರ ದಿನಗಳಲ್ಲಿ ಹಾಫ್, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿದವರಿಗೆ ದಂಡ ವಿಧಿಸಲಾವುದು ಎಂದು ಅವರು ತಿಳಿಸಿದ್ದಾರೆ.
ಸಾಕಷ್ಟು ಪೊಲೀಸರು ಕೂಡ ಹಾಫ್ ಹೆಲ್ಮೆಟ್ ಧರಿಸುತ್ತಿದ್ದು, ಅವರಿಗೂ ಈ ಫುಲ್ ಹೆಲ್ಮೆಟ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ ಎಂದು ಆಯುಕ್ತ ಹೇಳಿದ್ದಾರೆ.
ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ಶಾಕ್ ನೀಡಿದ ಸಿಎಂ: ಸ್ಫೋಟಗೊಳ್ಳುವುದೇ ಅಸಮಾಧಾನ?