ETV Bharat / state

ಚಿಕನ್​​ ಆರ್ಡರ್ ಮಾಡಿ ಹಣ ದೋಚಿದ ಕಳ್ಳರು: ಖದೀಮರ‌ ಕೈಚಳಕ ಸಿಸಿಟಿವಿಯಲ್ಲಿ ಸೆರೆ

author img

By

Published : Sep 17, 2021, 7:19 PM IST

Updated : Sep 17, 2021, 8:41 PM IST

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖದೀಮರು ಚಿಕನ್​​ ​ಸೆಂಟರ್​ನಲ್ಲಿ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

Two thieves thefted more than 35 thousand in chicken centre
ಚಿಕನ್​​ ಆರ್ಡರ್ ಮಾಡಿ ಹಣ ದೋಚಿದ ಕಳ್ಳರು

ಬೆಂಗಳೂರು: ಚಿಕನ್​​ ಕೊಳ್ಳವ ನೆಪದಲ್ಲಿ ಬಂದ ಇಬ್ಬರು ಖದೀಮರು ಹಾಡುಹಗಲೇ ಸಾವಿರಾರು ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಹೆಗ್ಗನಹಳ್ಳಿ‌ ಕ್ರಾಸ್ ಬಳಿಯಿರುವ ಚಿಕನ್ ಶಾಪ್​​​ನಲ್ಲಿ ಕಳೆದೆರಡು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಖದೀಮರ‌ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಸೆ.15 ರಂದು ಗ್ರಾಹಕರ ಸೋಗಿನಲ್ಲಿ ಬಂದು ಚಿಕನ್​​ ಖರೀದಿ ಮಾಡುವ ನೆಪದಲ್ಲಿ ಶಾಪ್​ಗೆ ಹೋಗಿ ಚಿಕನ್​​ ಆರ್ಡರ್ ಮಾಡಿದ್ದಾರೆ‌. ಅಂಗಡಿ ಮಾಲೀರಾದ ಅನಿತಾ ಒಳಹೋಗಿ ಹೊರ ಬರುವಷ್ಟರಲ್ಲಿ ಕ್ಯಾಶ್​ ಡ್ರಾಯರ್​ನಲ್ಲಿದ್ದ ಸುಮಾರು 35 ಸಾವಿರಕ್ಕೂ ಅಧಿಕ ಮೊತ್ತದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗುತ್ತಿದೆ.

ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: 'ಕೈ'-ದಳ ವಿರೋಧದ ನಡುವೆಯೇ ಪರಿಷತ್‌ನಲ್ಲಿ ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ

Last Updated : Sep 17, 2021, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.