ಬೆಂಗಳೂರು: ಇವರು ಒಂಥರಾ ಡಿಫರೆಂಟ್ ಕಳ್ಳರು. ಬಾಡಿ ಮಸಾಜ್ ಮಾಡಿಸಿಕೊಳ್ಳಲು ಹಣ ಹೊಂದಿಸಲು ಸಿಲಿಕಾನ್ ಸಿಟಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಈ ಖದೀಮರನ್ನು ವಿಜಯನಗರ ಪೊಲೀಸರು ಸೆರೆಹಿಡಿದಿದ್ದಾರೆ.
ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಜಾನ್ ಮೆಲ್ವಿನ್ ಮತ್ತು ಮಂಜುನಾಥ್ ಎಂಬುವರನ್ನು ಬಂಧಿಸಿ 16 ಲಕ್ಷ ಬೆಳೆ ಬಾಳುವ 360 ಗ್ರಾಂ ಚಿನ್ನಾಭರಣ, ಎರಡು ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.
ಓದಿ: ಗೋವಾ ಚುನಾವಣಾ ಪ್ರಚಾರ: ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ
ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಖದೀಮರು ಕಳ್ಳತನ ಮಾಡಿದ ಹಣದಲ್ಲಿ ಶೋಕಿ ಜೀವನ ನಡೆಸುತ್ತಿದ್ದರು. ಅಲ್ಲದೇ ಹೆಣ್ಣು ಮಕ್ಕಳಿಂದಲೇ ಮಸಾಜ್ ಮಾಡಿಸಿಕೊಳ್ಳಲು ಪಾರ್ಲರ್ಗೆ ಹೋಗುವುದಕ್ಕೆ ಕಳ್ಳತನ ಮಾಡುತ್ತಿದ್ದರು.
ಬೆಂಗಳೂರು ಮಾತ್ರವಲ್ಲದೇ ತಮಿಳುನಾಡು, ಕೇರಳ ಸೇರಿದಂತೆ ಹೊರರಾಜ್ಯಗಳಿರುವ ಮಸಾಜ್ ಕೇಂದ್ರಗಳಿಗೆ ಹೋಗುತ್ತಿದ್ದರು. ಒಂದು ಬಾರಿ ಮಸಾಜ್ ಪಾರ್ಲರ್ ಹೋಗಿ 10 ರಿಂದ 15 ಸಾವಿರ ಟಿಪ್ಸ್ ಕೊಡುತ್ತಿದ್ದರು. ಹೀಗೆ ಮನೆಗಳ್ಳತನ ಮಾಡಿ ಮಸಾಜ್ ಪಾರ್ಲರ್ಗಳಲ್ಲಿ ಎಂಜಾಯ್ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಡಾ.ಸಂಜೀವ ಪಾಟೀಲ್ ಹೇಳಿದ್ದಾರೆ.