ETV Bharat / state

ಬೆಳಗಿನ ಜಾವ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಇಬ್ಬರು ಬಂಡಾಯ ಶಾಸಕರು..ಕುತೂಹಲ ಕೆರಳಿಸಿದ ನಡೆ

ಇಂದು ಮುಂಜಾನೆ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ತಂಗಿರುವ ಮಧ್ಯಪ್ರದೇಶದ ಬಂಡಾಯ ಶಾಸಕರಿಬ್ಬರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.

rebel MLAs of Madhya Pradesh
ಬೆಳಗಿನ ಜಾವ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಇಬ್ಬರು ಬಂಡಾಯ ಶಾಸಕರು
author img

By

Published : Mar 14, 2020, 12:46 PM IST

Updated : Mar 14, 2020, 1:14 PM IST

ದೇವನಹಳ್ಳಿ: ಕಳೆದ ಆರು ದಿನಗಳಿಂದ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ಮಧ್ಯಪ್ರದೇಶದ 19 ಬಂಡಾಯ ಶಾಸಕರು ವಾಸ್ತವ್ಯ ಹೂಡಿದ್ದಾರೆ.

ಇಂದು ಮುಂಜಾನೆ ಇಬ್ಬರು ಶಾಸಕರು ಬೆಂಗಳೂರಿಗೆ ಪ್ರಯಾಣ ಬೆಳಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮುಂಜಾನೆ 4 ರ ಸಮಯದಲ್ಲಿ ಪೊಲೀಸ್ ಬೆಂಗಾವಲು ವಾಹನದೊಂದಿಗೆ ರೆಸಾರ್ಟ್​ನಿಂದ ಹೊರ ಬಂದ ಕಾರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.

ಬೆಳಗಿನ ಜಾವ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಇಬ್ಬರು ಬಂಡಾಯ ಶಾಸಕರು

ಕಾರಿನಲ್ಲಿ ಇಬ್ಬರು ಬಂಡಾಯ ಶಾಸಕರಿದ್ದು, ಬೆಂಗಳೂರಿನಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡುವ ಸಾಧ್ಯತೆ ಇದೆ. ನಿನ್ನೆ ಸಹ ರೆಸಾರ್ಟ್​ನಲ್ಲಿದ್ದ 19 ಶಾಸಕರು ಏರ್​ಪೋರ್ಟ್​ನಲ್ಲಿ ಜೆ. ಪಿ.ನಡ್ಡಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು.

ಜೆ.ಪಿ.ನಡ್ಡಾ ಬೆಂಗಳೂರಿಗೆ ಹೊರಟ ತಕ್ಷಣವೇ ರೆಬಲ್ ಶಾಸಕರು ಮತ್ತೆ ರೆಸಾರ್ಟ್​ಗೆ ಮರಳಿದರು. ಮುಂಜಾನೆ ಹೊರ ಹೊರಟ ಮಧ್ಯಪ್ರದೇಶ ಶಾಸಕರ ನಡೆ ಇನ್ನೂ ನಿಗೂಢವಾಗಿದೆ.

Last Updated : Mar 14, 2020, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.