ಬೆಂಗಳೂರು: ವಿವಿಧೆಡೆ ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ ಖದೀಮರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಾಗೇಶ್ ಹಾಗೂ ಚಂದ್ರ ಬಂಧಿತ ಆರೋಪಿಗಳು.
ಸದ್ಯ ಆರೋಪಿಗಳಿಂದ 2 ಬೈಕ್, 152 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇನ್ನು ಇಬ್ಬರಲ್ಲಿ ನಾಗೇಶ್ ಎಂಬುವರನ್ನು ವಿಚಾರಣೆ ನಡೆಸಿದಾಗ ಈತ ಮಾರತಹಳ್ಳಿ, ಬಂಡೆಹಳ್ಳಿ, ಜಾಲಹಳ್ಳಿ, ವಿ.ವಿ.ಪುರಂ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.
2020ರ ಡಿಸೆಂಬರ್ ತಿಂಗಳಲ್ಲಿ ಜೈಲಿಗೆ ಹೋಗಿ 2021ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದು, ಮತ್ತದೇ ಕಸುಬಿಗೆ ಕೈಹಾಕಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಕಳ್ಳತನ: ಆರೋಪಿ ಅರೆಸ್ಟ್