ಬೆಂಗಳೂರು: ಟಿಕ್‌ಟಾಕ್ ಮಾಡಲು ಹೋಗಿ ಸಹೋದರರಿಬ್ಬರು ರೈಲ್ವೇ ಹಳಿಗೆ ಸಿಲುಕಿ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಇಂದು ಸಂಜೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ರೈಲ್ವೆ ಗೇಟ್ ಬಳಿ ಸಂಭವಿಸಿದೆ.
ಆಫಬ್ ಷರೀಫ್ ಹಾಗೂ ಮತೀನ್ ಮೃತರು. ಜಮೀಉಲ್ಲಾ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ದುರ್ಘಟನೆಯು ಸಂಜೆ ಸುಮಾರು 6 ವೇಳೆಗೆ ನಡೆದಿದೆ ಎನ್ನಲಾಗಿದೆ. ಯಲಹಂಕದಿಂದ ಬೆಂಗಳೂರಿಗೆ ರೈಲು ಬರುವಾಗ ರೈಲಿನ ಎದುರು ಇಬ್ಬರು ಟಿಕ್‌ಟಾಕ್ ಮಾಡಲು ಹೋಗಿದ್ದಾರೆ. ವೇಗವಾಗಿ ಬಂದ ರೈಲು ಇಬ್ಬರಿಗೆ ಗುದ್ದಿದೆ. ಈ ವೇಳೆ ಅವರ ಸನಿಹದಲ್ಲಿದ್ದ ಮತ್ತೊಬ್ಬನಿಗೂ ತಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಬಂದ ಸಂಪಿಗೆಹಳ್ಳಿ ಹಾಗೂ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.