ETV Bharat / state

ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಿಂದ ಸುಲಿಗೆ; ಪುಲಿಕೇಶಿ ನಗರ ಠಾಣೆಯ ಮತ್ತಿಬ್ಬರು ಕಾನ್​​ಸ್ಟೇಬಲ್ಸ್​​ ಅಮಾನತು - ಡಿಸಿಪಿ ಭೀಮಾಶಂಕರ್ ಗುಳೇದ್

ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿ ಕೊಂಡಯ್ಯ ಎಂಬಾತನಿಂದ 10 ಲಕ್ಷ ರೂ ಲಂಚ ಪಡೆದ ಆರೋಪದ ಮೇರೆಗೆ ಪುಲಕೇಶಿನಗರ ಠಾಣೆಯ ಇಬ್ಬರು ಕಾನ್​ಸ್ಟೇಬಲ್​ಗಳನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ

author img

By

Published : Apr 2, 2023, 3:20 PM IST

ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆಯಲ್ಲಿ ಜನರನ್ನು ವಂಚಿಸಿದ್ದ ಎಂಬ ಶಂಕಿತ ಆರೋಪಿಯಿಂದ 10 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಪುಲಿಕೇಶಿನಗರ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ನಸ್ರುಲ್ಲಾ, ಸನಾವುಲ್ಲಾ ಅಮಾನತುಗೊಂಡಿರುವ ಪೊಲೀಸ್ ಕಾನ್ಸ್‌ಟೇಬಲ್​ಗಳು ಎಂದು ತಿಳಿದುಬಂದಿದೆ.

ಘಟನೆಯ ವಿವರ: ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಾಗಿರುವ ಕೊಂಡಯ್ಯ ಎಂಬಾತನನ್ನು ಮಾರ್ಚ್ 20ರಂದು ವಶಕ್ಕೆ ಪಡೆದಿದ್ದ ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿದಂತೆ ಮೂವರು ಸಿಬ್ಬಂದಿ, ಆತನನ್ನು ಅಕ್ರಮವಾಗಿ ಕೂಡಿ ಹಾಕಿ, ಕೇಸ್ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದರು. ವಶಕ್ಕೆ ಪಡೆದಿದ್ದ ಪಿಎಸ್ಐ ರುಮಾನ್ ಪಾಶಾ ನೇತೃತ್ವದ ಸಿಬ್ಬಂದಿ ತಂಡ, ಠಾಣಾ ಡೈರಿಯಲ್ಲಿ ನಮೂದಿಸಿರಲಿಲ್ಲ. ಪ್ರಕರಣವನ್ನೂ ದಾಖಲಿಸಿರಲಿಲ್ಲ. ಬದಲಿಗೆ ಶಂಕಿತ ಆರೋಪಿ ಕೊಂಡಯ್ಯನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಬಿಟ್ಟು ಕಳಿಸಿದ್ದರು ಎಂದು ದೂರು ದಾಖಲಾಗಿತ್ತು. ಈ ಘಟನೆಯ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಐಜಿಪಿ ಚಂದ್ರಶೇಖರ್ ಅವರಿಗೆ ಕೊಂಡಯ್ಯ ದೂರು ನೀಡಿದ್ದರು.

ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಐಜಿಪಿ ಆಂತರಿಕ ತನಿಖೆ ನಡೆಸುವಂತೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಿಗೆ ಸೂಚಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಪಿಎಸ್‌ಐ ರುಮಾನ್ ಮತ್ತು ಸಿಬ್ಬಂದಿಯ ಕಳ್ಳಾಟ ಪತ್ತೆಯಾದ ಹಿನ್ನೆಲೆಯಲ್ಲಿ ಐಜಿಪಿಗೆ ವರದಿ ಸಲ್ಲಿಸಲಾಗಿತ್ತು. ವರದಿಯನ್ನು ಆಧರಿಸಿ ನಗರ ಪೊಲೀಸ್ ಆಯುಕ್ತ ಸಿ. ಹೆಚ್ ಪ್ರತಾಪ್ ರೆಡ್ಡಿ, ಆರೋಪಿತ ಪಿಎಸ್‌ಐ ಮತ್ತು ಓರ್ವ ಕಾನ್ಸ್​ಸ್ಟೇಬಲ್​ ಅವರನ್ನು ಅಮಾನತುಗೊಳಿಸಿದ್ದರು. ಸದ್ಯ ಇನ್ನಿಬ್ಬರು ಕಾನ್​ಸ್ಟೇಬಲ್​ಗಳನ್ನು ಅಮಾನತುಗೊಳಿಸಿದ್ದಾರೆ.

ಹೈಟೆಕ್ ರೈಸ್ ಪುಲ್ಲಿಂಗ್ ದಂಧೆ: ರೈಸ್ ಪುಲ್ಲಿಂಗ್ ಯಂತ್ರ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಎಂಟು ಜನ ಆರೋಪಿಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಮಾರ್ಚ್​ 8-2023) ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ರಾಜೇಶ್ (36), ಮೊಹಮ್ಮದ್ ಗೌಸ್ (52), ಸ್ಟೀಫನ್ (38), ಸಾಹಿಲ್ (35), ಶ್ರೀನಿವಾಸ್ (35), ವಿಕಾಸ್ (27) ಕುಮಾರ್ (29) ಹಾಗೂ ಸ್ರೀವಲ್ಸನ್ (42) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದರು.

ಬೆಂಗಳೂರಿನ ಹಲಸೂರು ಪೊಲೀಸ್​ ಠಾಣೆ ವ್ಯಾಪ್ತಿಯ ಎಂ.ಜಿ ರಸ್ತೆಯಲ್ಲಿರುವ ಓಬೇರಾಯ್ ಹೋಟೆಲ್​ನ ಬ್ಯುಸಿನೆಸ್ ಬೋರ್ಡ್​​ನಲ್ಲಿ ಗಿರಾಕಿಗಳನ್ನು ಬರಮಾಡಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. 'ತಮ್ಮ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ರೈಸ್ ಪುಲ್ಲಿಂಗ್ ಯಂತ್ರವಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದಕ್ಕೆ ಭಾರಿ ಬೆಲೆ ಇದೆ' ಎಂದು ನಂಬಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

'ಗ್ರಾಹಕರು ನೋಡಲು ಬಯಸಿದರೆ 'ಅದೊಂದು ಶಕ್ತಿಶಾಲಿ ವಸ್ತುವಾಗಿದ್ದು, ಕಣ್ಣಿನ ದೃಷ್ಟಿ ಸಮಸ್ಯೆಯಾಗುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ' ಎಂದು ನಂಬಿಸಿ ನೇರವಾಗಿ ಮಾರಾಟ ಮಾಡುವುದಾಗಿ ಹೇಳಿ, ಮೊದಲು ಹಣ ಪಡೆದುಕೊಂಡು ಬಳಿಕ ಏನನ್ನೂ ನೀಡದೇ ವಂಚಿಸುತ್ತಿದ್ದರು. ದಂಧೆ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 35. 30 ಲಕ್ಷ ರೂಪಾಯಿ ಹಣ ಮತ್ತು ರೈಸ್ ಪುಲ್ಲಿಂಗ್ ಯಂತ್ರ ಎನ್ನಲಾಗಿದ್ದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ' ಎಂದು‌ ಸಿಸಿಬಿಯ ಜಂಟಿ ಆಯುಕ್ತ ಡಾ. ಎಸ್. ಡಿ ಶರಣಪ್ಪ ತಿಳಿಸಿದ್ದರು.

ಇದನ್ನೂ ಓದಿ : ಬೆಂಗಳೂರಲ್ಲಿ ಹೈಟೆಕ್ ರೈಸ್ ಪುಲ್ಲಿಂಗ್ ದಂಧೆ : ಎಂಟು ಮಂದಿ ಆರೋಪಿಗಳ ಬಂಧನ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.