ಬೆಂಗಳೂರು: ದುರ್ಗಾ ಮಾತೆ ಮೂರ್ತಿ ನಿಮಜ್ಜನ ಮಾಡಲು ಹೋಗಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃತದೇಹವನ್ನ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಜೀತು ಹಾಗೂ ಸೋಮೇಶ್ ಮೃತ ಯುವಕರು.
ನಿನ್ನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಣಕಲ್ ಪಾಳ್ಯದ ಕೆರೆಯಲ್ಲಿ ದುರ್ಗಾ ಮೂರ್ತಿ ನಿಮಜ್ಜನೆಗೆ ಯುವಕರು ಮುಂದಾಗಿದ್ದರು. ಮೂರ್ತಿ ವಿಸರ್ಜನೆ ಮಾಡಲು ಐವರು ಕೆರೆಗೆ ಇಳಿದಿದ್ದು, ಮೂವರು ಮಾತ್ರ ನೀರಿನಿಂದ ಹೊರ ಬಂದಿದ್ದಾರೆ. ಆದರೆ, ಸೋಮೇಶ್ (21) ಮತ್ತು ಜಿತು (22) ಹೊರ ಬಂದಿರಲಿಲ್ಲ.
ಸ್ನೇಹಿತರು ಮತ್ತು ಆಪ್ತರು ಗಾಬರಿಗೊಂಡು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಯುವಕರ ಮೃತದೇಹ ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: ಅಮ್ಮನವರ ಮೂರ್ತಿ ನಿಮಜ್ಜನ ವೇಳೆ ಅವಘಡ: ನೀರಿನಲ್ಲಿ ಮುಳುಗಿ ಐವರ ಸಾವು