ETV Bharat / state

ಟ್ಯಾಕ್ಸ್ ಕಟ್ಟಿಸಿಕೊಂಡು ನಕಲಿ ರಸೀದಿ ನೀಡಿ ದೋಖಾ: ಇಬ್ಬರು ಅರೆಸ್ಟ್

ಟ್ಯಾಕ್ಸ್ ಹೆಸರಿನಲ್ಲಿ ಹೆಚ್ಚುವರಿ ಹಣ ಪಡೆದು ನಕಲಿ ಬಿಲ್‌ ನೀಡುತ್ತಿದ್ದ ಆರ್​ಟಿಒ ಸಿಬ್ಬಂದಿ(ಬಂಧಿತ) ಸೇರಿ ಇಬ್ಬರನ್ನು ಬಂಧಿಸಲಾಗಿದೆ.

two arrested under fraud case in Bangalore
ಟ್ಯಾಕ್ಸ್ ಕಟ್ಟಿಸಿಕೊಂಡು ನಕಲಿ ರೆಸಿಪ್ಟ್ ನೀಡಿ ದೋಖಾ: ಇಬ್ಬರು ಅರೆಸ್ಟ್
author img

By

Published : Aug 13, 2022, 5:43 PM IST

Updated : Aug 13, 2022, 6:38 PM IST

ಬೆಂಗಳೂರು: ಲೈಫ್ ಟೈಮ್ ರೋಡ್ ಟ್ಯಾಕ್ಸ್ ಕಟ್ಟಿರುವ, ಇನ್ಮುಂದೆ ಕಟ್ಟುವ ವಾಹನ ಮಾಲೀಕರು ಹುಷಾರಾಗಿರಬೇಕು. ಕಾರ್ ತಗೊಂಡು ಲಕ್ಷ ಟ್ಯಾಕ್ಸ್ ಪೇ ಮಾಡಿದರೂ ನಿಮ್ಮ ಮನೆಗೆ ನೋಟಿಸ್ ಬರಬಹುದು. ಕಟ್ಟಿರುವ ಟ್ಯಾಕ್ಸ್ ಸರ್ಕಾರದ ಬೊಕ್ಕಸಕ್ಕೆ ಸೇರದೆ ವಂಚಕರ ಜೇಬು ಸೇರುತ್ತಿತ್ತು. ಟ್ಯಾಕ್ಸ್ ಹೆಸರಿನಲ್ಲಿ ಹೆಚ್ಚುವರಿ ಹಣ ಪಡೆದು ನಕಲಿ ಬಿಲ್‌ ನೀಡುತ್ತಿದ್ದ ಆರ್​ಟಿಒ ಸಿಬ್ಬಂದಿ(ಬಂಧಿತ) ಸೇರಿ ಮತ್ತೆ ಓರ್ವನನ್ನು ಬಂಧಿಸಲಾಗಿದೆ. ಮೂವರು ಪ್ರಕರಣದ ಆರೋಪಿಗಳು. ಇಬ್ಬರನ್ನು ಬಂಧಿಸಲಾಗಿದೆ. ಈ ಇಬ್ಬರ ಪೈಕಿ ಓರ್ವ ಈ ಮೊದಲೇ ಬಂಧನವಾಗಿದ್ದ.

ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆರ್‌ಟಿಒ ಅಧಿಕಾರಿಗಳ ಮೇಲಿನ‌ ಪ್ರಕರಣ ಬಗೆದಷ್ಟು ಹೊರಬರುತ್ತಿದೆ. ಆರ್​ಟಿಒ ನಕಲಿ ರಸೀದಿ ನೀಡಿ ದೊಡ್ಡ ಹಗರಣ ನಡೆಸಿರುವುದು ಬಯಲಾಗಿದೆ. ಮಲ್ಲೇಶ್ವರಂ ಬಳಿಕ ಕೋರಮಂಗಲದಲ್ಲಿ ವಂಚನೆ ಕುರಿತು ಎರಡು ಪ್ರಕಣ ದಾಖಲಾಗಿದ್ದವು. ಲೈಫ್ ಟೈಮ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವ ಆರ್​ಟಿಒ ಎಸ್​ಡಿಎ ರವಿಶಂಕರ್ ಮತ್ತು ಸಂತೋಷ್ ಎಂಬ ಆರೋಪಿಗಳು ಜನರಿಗೆ ಯಾಮಾರಿಸಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಇಬ್ಬರು ಅರೆಸ್ಟ್ - ಡಿಸಿಪಿ ಸಿ.ಕೆ ಬಾಬಾ ಮಾಹಿತಿ ನೀಡಿರುವುದು

ಒಂದು ಕೇಸ್ ತನಿಖೆ ಮಾಡುವ ವೇಳೆ ಮತ್ತಷ್ಟು ವಂಚನೆಗಳು ಬೆಳಕಿಗೆ ಬಂದಿವೆ. ಈಗಾಗಲೇ ಡ್ರಗ್ಸ್​ ಕೇಸ್​​ನಲ್ಲಿ ಬಂಧನವಾಗಿರುವ ಆರ್​ಟಿಒ ಎಸ್​ಡಿಎ ರವಿಶಂಕರ್ ಜೊತೆಗೆ ಮತ್ತೊಬ್ಬ ಆರೋಪಿ ಸಂತೋಷ್ ಸಿಕ್ಕಿಬಿದ್ದಿದ್ದಾರೆ. ಸದ್ಯ ಕೋರಮಂಗಲ ಪೊಲೀಸರಿಂದ ಸಂತೋಷ್ ವಿಚಾರಣೆ ನಡೆಯುತ್ತಿದ್ದು, ಫ್ಯಾನ್ಸಿ ನಂಬರ್ ಹಾಗೂ ಲೈಫ್ ಟೈಮ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವ ಹೆಸರಲ್ಲಿ ಹಲವರಿಗೆ ದೋಖಾ ಮಾಡಿರುವುದು ಗೊತ್ತಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ನಕಲಿ ಬಿಲ್ ನೀಡಿ ವಂಚನೆ: ಒಂದೊಂದು ಕಾರಿಗೆ ಟ್ಯಾಕ್ಸ್ ಎಂದು ನಂಬಿಸಿ ಲಕ್ಷ ಲಕ್ಷ ವಸೂಲಿ ಮಾಡಿ ನಕಲಿ ಬಿಲ್ ನೀಡಿ ವಂಚಿಸಿದ್ದಾರೆಂದು ಡಿಸಿಪಿ ಸಿ.ಕೆ ಬಾಬಾ ವಿವರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿಗಳ ಪೋಷಕ: ಸಂಸದ ಪ್ರತಾಪ್ ಸಿಂಹ

Last Updated : Aug 13, 2022, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.