ETV Bharat / state

ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚಿಸುತ್ತಿದ್ದ ಇಬ್ಬರ ಬಂಧನ

ಶೇರ್ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿ ಲಾಭ ಮಾಡಿಕೊಡುವುದಾಗಿ ಎಂಜಿನಿಯರ್​​ಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದು, ಹಣದಾಸೆ ತೋರಿಸಿ ನೂರಾರು ಜನರಿಗೆ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.

Two arrested by police who cheats engineers
ಇಂಜಿನಿಯರ್​​​​ಗಳನ್ನೇ ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚಿಸುತ್ತಿದ್ದ ಇಬ್ಬರ ಬಂಧನ
author img

By

Published : Jan 22, 2021, 6:29 PM IST

ಬೆಂಗಳೂರು: ಟೆಕ್ಕಿಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಟೀಫನ್ ಜಾನ್ಸ್​​, ರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಶೇರ್ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿ ಲಾಭ ಮಾಡಿಕೊಡುವುದಾಗಿ ಎಂಜಿನಿಯರ್​​ಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಸತೀಶ್ ಎಂಬುವರು ಚಂದ್ರ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಎಫ್​ಐಆರ್ ದಾಖಲಾಗಿದೆ. ಎ1 ಆರೋಪಿ ರಾಘವೇಂದ್ರ ಹಾಗೂ ಜಾನ್ಸ್​ ಬೇರೆ ಬೇರೆ ಕಂಪನಿ ನಡೆಸುತ್ತಿದ್ದರು. ರಾಘವೇಂದ್ರ ಸಿಸ್ಟಮೆಟಿಕ್ ವೆಲ್ತ್​ ಮಲ್ಟಿ ಪ್ಲೇಯರ್ ಕಂಪನಿ ಹಾಗೂ ಜಾನ್​​, ಜಾನ್​​ ವೆಲ್ತ್ ಮ್ಯಾನೇಜ್​​​ಮೆಂಟ್ ಕಂಪನಿ ನಡೆಸುತ್ತಿದ್ದರು. ಇವರದ್ದೇ ಕಂಪನಿ ಮೇಲೆ ಹಣ ಹೂಡುವಂತೆ ಸತೀಶ್​​​ಗೆ ತಿಳಿಸಿದ್ದಾರೆ.

ಆದರೆ ಹಣ ಇಲ್ಲ ಎಂದಾಗ ಇವರೇ ಬ್ಯಾಂಕ್​​ನಿಂದ ಲೋನ್ ಕೂಡ ಕೊಡಿಸಿದ್ದಾರೆ. 1 ಕೋಟಿ 60 ಲಕ್ಷ ಸಾಲ ಕೊಡಿಸಿ, ತಮ್ಮ ಅಕೌಂಟ್​​​ಗೆ ಹಾಕಿಸಿಕೊಂಡಿದ್ದಾರೆ. ಇದಾದ ಬಳಿಕ ಕೆಲ ಕಾಲ ಲಾಭಾಂಶವೆಂದು ಸ್ವಲ್ಪ ಹಣ ನೀಡಿದ್ದಾರೆ. ಬಳಿಕ ಸತೀಶ್​ಗೆ ಹಣ ನೀಡುವುದನ್ನು ನಿಲ್ಲಿಸಿದ್ದಾರೆ.

ಇದರಿಂದ ವಂಚನೆಗೊಳಗಾಗಿರುವುದು ಅರಿವಿಗೆ ಬರುತ್ತಿದ್ದಂತೆ ಸತೀಶ್ ದೂರು ನೀಡಿದ್ದಾರೆ. ಇವರಿಬ್ಬರು ಹಲವರಿಗೆ ಇದೇ ರೀತಿಯಾಗಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಚಂದ್ರ ಲೇಔಟ್​​​ನಿಂದ ಪ್ರರಕಣ ಸಿಸಿಬಿಗೆ ವರ್ಗಾವಣೆಗೊಂಡಿದ್ದು, ಎಸಿಪಿ ಜಗನ್ನಾಥ್ ನೇತೃತ್ವದಲ್ಲಿ ವಿಚಾರಣೆ ಮುಂದುವರೆದಿದೆ.

ಬಂಧಿತರಿಂದ ಎರಡು ಕಾರು ಹಾಗೂ 8 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಎಫೆಕ್ಟ್​: 50 ಕರುಗಳನ್ನು ಬಿಟ್ಟು ಹೋದ ವ್ಯಾಪಾರಸ್ಥರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.