ETV Bharat / state

ಶವ ಸಾಗಿಸಲು 60 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ ಇಬ್ಬರು ಆ್ಯಂಬುಲೆನ್ಸ್ ಮಾಲೀಕರ ಬಂಧನ - money demanding

ಶವ ಸಾಗಿಸಲು ಭಾರಿ ಪ್ರಮಾಣದ ಹಣದ ಬೇಡಿಕೆ ಇಟ್ಟಿದ್ದ ಇಬ್ಬರು ಆ್ಯಂಬುಲೆನ್ಸ್ ಮಾಲೀಕರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

Two ambulance owners are arrested
ಆ್ಯಂಬುಲೆನ್ಸ್ ಮಾಲೀಕರ ಬಂಧನ
author img

By

Published : Apr 22, 2021, 7:47 PM IST

ಬೆಂಗಳೂರು: ವಿದ್ಯುತ್ ಚಿತಾಗಾರಕ್ಕೆ ಶವ ಸಾಗಿಸಲು ಸಾವಿರಾರು ರೂಪಾಯಿ ಬೇಡಿಕೆಯಿಟ್ಟು ಮೃತರ ಕುಟುಂಬಸ್ಥರಿಂದ 16 ಸಾವಿರ ರೂ. ವಸೂಲಿ ಮಾಡಿದ್ದ ಇಬ್ಬರು ಆ್ಯಂಬುಲೆನ್ಸ್ ಮಾಲೀಕರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹನುಮಂತಪ್ಪ ಸಿಂಗ್ರಿ ಹಾಗೂ ಹರೀಶ್ ಬಂಧಿತ ಆರೋಪಿಗಳು‌.

ಇದನ್ನೂ ಓದಿ: ಕೊರೊನಾದಿಂದ ತಾಯಿ ಕಳೆದುಕೊಂಡ ವಾರಿಯರ್ ​: ಚಿತಾಗಾರದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಪೊಲೀಸ್

ಏ.20ರಂದು ಪ್ರಸಾದ್ ಎಂಬುವರು ಕೊರೊನಾದಿಂದ ಮೃತಪಟ್ಟಿದ್ದರು. ಆ್ಯಂಬುಲೆನ್ಸ್ ಮೂಲಕ ಚಿತಾಗಾರಕ್ಕೆ ಶವ ಸಾಗಿಸಲು ಈ ವಾಹನದ ಮೊರೆ ಹೋಗಿದ್ದರು‌. ಜೈ ಹನುಮಾನ್ ಆ್ಯಂಬುಲೆನ್ಸ್ ಮಾಲೀಕ ಹಾಗೂ ಚಾಲಕ ಹನುಮಂತಪ್ಪ ಮತ್ತು ನಂದನ ಇಂಟರ್​ ನ್ಯಾಷನಲ್ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಎಂಬುವರನ್ನು ಮೃತರ ಮಗಳಾದ ಭವ್ಯ ಸಂಪರ್ಕಿಸಿದ್ದರು.

ಚಿತಾಗಾರಕ್ಕೆ ಶವ ಸಾಗಿಸಲು ಆ್ಯಂಬುಲೆನ್ಸ್ ಮಾಲೀಕರು 60 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ವೇಳೆ‌ ಕುಟುಂಬಸ್ಥರು 16 ಸಾವಿರ ರೂಪಾಯಿ ನೀಡಿದ್ದಾರೆ.‌ ಉಳಿದ ಹಣ ನೀಡದಿದ್ದರೆ ಶವವನ್ನು ರಸ್ತೆಯಲ್ಲೇ ಬಿಸಾಡುವುದಾಗಿ ಧಮ್ಕಿ ಹಾಕಿದ್ದರು ಎನ್ನಲಾಗುತ್ತಿದೆ.

ಈ ವೇಳೆ ಭವ್ಯ ಮಾಂಗಲ್ಯ ಸರ ಮಾರಿ ಹಣ ನೀಡಲು ಮುಂದಾಗಿದ್ದರು. ಈ ಕುರಿತು ಮಾಧ್ಯಮಗಳಲ್ಲಿ‌ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಮೃತಹಳ್ಳಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 269, 270 ಹಾಗೂ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ (ಎನ್​ಡಿಎಂಎ) ಸೆಕ್ಷನ್ 54 ಅಡಿ ಎಫ್​ಐಆರ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಆ್ಯಂಬುಲೆನ್ಸ್ ಸಹ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಡ್​​ನಿಂದ ಮೃತಪಟ್ಟವರ ದಹನಕ್ಕೂ ಸರದಿ ಸಾಲು.. ಪಾಲಿಕೆ ವ್ಯಾಪ್ತಿಯ 12 ಚಿತಾಗಾರಗಳಿಗೆ ಅನುಮತಿ

ಆರೋಪಿಗಳು ಇದೇ ರೀತಿ ಹಲವರಿಂದ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ. ಶವ ಸಾಗಿಸಲು ಹಣ‌ ಕೇಳಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.