ಬೆಂಗಳೂರು : ನಿನ್ನೆ ಸಂಜೆ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಪ್ರತಿಭಾನ್ವಿತ ಬಾಲಕಿ ಸಮನ್ವಿ ಅಂತ್ಯಕ್ರಿಯೆ ನಗರದ ಬನಶಂಕರಿ ಚಿತಾಗಾರದಲ್ಲಿ ನಡೆಯಿತು.
ಬಣಜಿಗ ಸಂಪ್ರದಾಯದಂತೆ ಋಷಿಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಮಗಳ ಚಿತೆಗೆ ತಂದೆ ರೂಪೇಶ್ ಅಗ್ನಿಸ್ವರ್ಶ ಮಾಡಿದರು. ಈ ಮೂಲಕ ಸಮನ್ವಿ ಪಂಚಭೂತಗಳಲ್ಲಿ ಲೀನಳಾದಳು.
ಇದನ್ನೂ ಓದಿ: 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಬಾಲಕಿ ಸಾವು ಪ್ರಕರಣ : ಟಿಪ್ಪರ್ ಚಾಲಕ ಅರೆಸ್ಟ್
ಚಿಕ್ಕ ವಯಸ್ಸಿನಲ್ಲೇ ಕ್ರೂರ ವಿಧಿಯಾಟಕ್ಕೆ ಮಗಳ ಅಂತ್ಯ ಕಂಡು ಕುಟುಂಬಸ್ಥರ ದುಃಖ ಹೇಳತೀರದಾಗಿತ್ತು. ಮತ್ತೊಂದೆಡೆ, ಗಾಯಗೊಂಡು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವ ತಾಯಿ ಅಮೃತಾ ನಾಯ್ಡು ಶವದ ಮುಂದೆ ಕಣ್ಣೀರು ಹಾಕುತ್ತಾ, 'ಎದ್ದೇಳವ್ವ... ಎದ್ದೇಳವ್ವಾ..' ಎಂದು ಹಣೆಗೆ ಮುತ್ತಿಟ್ಟು ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.