ETV Bharat / state

'ನನ್ನಮ್ಮ ಸೂಪರ್‌ ಸ್ಟಾರ್' ರಿಯಾಲಿಟಿ ಶೋದಲ್ಲಿ ಮಿಂಚಿದ ಬಾಲಕಿ ದುರಂತ ಸಾವು - nammamma super star show contestant death

ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲಕಿ ಸಮನ್ವಿ ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

TV reality show contestant girl died in tipper accident
ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲಕಿ ಸಮನ್ವಿ ಸಾವು
author img

By

Published : Jan 13, 2022, 10:32 PM IST

Updated : Jan 14, 2022, 2:20 AM IST

ಬೆಂಗಳೂರು: ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಆರು ವರ್ಷದ ಬಾಲಕಿ ಟಿಪ್ಪರ್ ಹರಿದು ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಪೊಲೀಸ್ ಠಾಣೆಯ ಕೋಣನಕುಂಟೆ ಕ್ರಾಸ್ ಬಳಿ ಸಂಭವಿಸಿತು.

'ನನ್ನಮ್ಮ ಸೂಪರ್‌ ಸ್ಟಾರ್' ರಿಯಾಲಿಟಿ ಶೋದಲ್ಲಿ ಮಿಂಚಿದ ಬಾಲಕಿ ದುರಂತ ಸಾವು

ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ(6) ಮೃತಪಟ್ಟ ಬಾಲಕಿ. ಅಪಘಾತ ವೇಳೆ ಗಾಯಗೊಂಡಿರುವ ತಾಯಿ ಅಮೃತಾ ನಾಯ್ಡು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

TV reality show contestant girl died in tipper accident
ಅಮ್ಮನೊಂದಿಗೆ ಸಮನ್ವಿ

ಅಮೃತಾ ನಾಯ್ಡು ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಗುರುವಾರ ಸಂಜೆ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದ ಸಮನ್ವಿ ಮೇಲೆ ಟಿಪ್ಪರ್ ಹರಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಾಲಕಿಯು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿ ಮಿಂಚಿದ್ದರು ಎಂದು ತಿಳಿದು ಬಂದಿದೆ.

ಕಿಚ್ಚ ಸುದೀಪ್​ ಜೊತೆ ಸಮನ್ವಿ

ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಟಿಪ್ಪರ್​ ಚಾಲಕನನ್ನು ವಶಕ್ಕೆ ಪಡೆದು, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲೇ ದೊಣ್ಣೆಯಿಂದ ಎರಡು ಕುಟುಂಬಗಳ ಹೊಡೆದಾಟ: ಕಾರಣವಾಗಿದ್ದು ಕೋಳಿ!

Last Updated : Jan 14, 2022, 2:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.