ETV Bharat / state

ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ: ರೈಲ್ವೇ ಟಿಕೆಟ್ ಇನ್​ಸ್ಪೆಕ್ಟರ್ ಸಸ್ಪೆಂಡ್

author img

By

Published : Mar 16, 2023, 10:58 AM IST

ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಟಿಟಿಇ ಅಮಾನತುಗೊಳಿಸಲಾಗಿದೆ. ಬೆಂಗಳೂರಿನ ಕೆ.ಆರ್.ಪುರ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿತ್ತು.

alleged-misbehave-with-railway-women-passenger-railway-ticket-inspector-suspended
ರೈಲ್ವೇ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ ಆರೋಪ : ರೈಲ್ವೇ ಟಿಕೆಟ್ ಇನ್​ಸ್ಪೆಕ್ಟರ್ ಅಮಾನತು

ಬೆಂಗಳೂರು: ಮದ್ಯದ ಅಮಲಿನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ರೈಲ್ವೇ ವಿಭಾಗದ ಉಪಮುಖ್ಯ ಟಿಕೆಟ್ ಪರಿವೀಕ್ಷಕನನ್ನು ನೌಕರಿಯಿಂದ ಅಮಾನತುಗೊಳಿಸಲಾಗಿದೆ. ಉಪಮುಖ್ಯ ಟಿಕೆಟ್ ಇನ್​ಸ್ಪೆಕ್ಟರ್ ಸಂತೋಷ್ ಅಮಾನತುಗೊಂಡವರು.

ನಿನ್ನೆ ಸಂಜೆ ಕೆ.ಆರ್.ಪುರ ರೈಲ್ವೇ ನಿಲ್ದಾಣದಲ್ಲಿ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿದ್ದ ಮಹಿಳಾ ಪ್ರಯಾಣಿಕರೊಂದಿಗೆ ಸಂತೋಷ್​​ ಅನುಚಿತ ವರ್ತನೆ ತೋರಿದ್ದರು. ಮಹಿಳಾ ಪ್ರಯಾಣಿಕರು ಮತ್ತು ಸಂತೋಷ್​ ವಾಗ್ವಾದ ನಡೆಸುವ ವಿಡಿಯೋವನ್ನು ಇತರ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿತ್ತು.

ಘಟನೆಯ ಮತ್ತಷ್ಟು ವಿವರ: ಕೆ.ಆರ್.ಪುರ ರೈಲ್ವೇ ನಿಲ್ದಾಣದಲ್ಲಿ ಬುಧವಾರ ಸಂಜೆ 6 ಗಂಟೆಯ ವೇಳೆ ಹೌರಾ ಎಕ್ಸ್ ಪ್ರೆಸ್ ರೈಲಿನಿಂದ ಇಳಿದು ಬರುವಾಗ ರೈಲ್ವೇ ಟಿಕೆಟ್ ಪರಿವೀಕ್ಷಕ ಸಂತೋಷ್ ಟಿಕೆಟ್ ತೋರಿಸುವಂತೆ ಮಹಿಳಾ ಪ್ರಯಾಣಿಕರನ್ನು ಗದರಿಸಿ ಕೇಳಿದ್ದಾರೆ. ಮಹಿಳಾ ಪ್ರಯಾಣಿಕರು ತೋರಿಸುವುದಾಗಿ ಹೇಳಿದರೂ ಅನುಚಿತವಾಗಿ ವರ್ತಿಸಿದ್ದಾರೆ. ವ್ಯಕ್ತಿಯೊಬ್ಬರು ಘಟನೆಯನ್ನು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಮಾರ್ಚ್​ 20ಕ್ಕೆ ಆಟೋ ಸೇವೆ ಇರಲ್ಲ​: ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಒತ್ತಾಯಿಸಿ ಸೋಮವಾರ ನಗರದಲ್ಲಿ ಆಟೋ ಸೇವೆ ಬಂದ್ ಮಾಡಲು ರಿಕ್ಷಾ ಚಾಲಕರು ನಿರ್ಧರಿಸಿದ್ದಾರೆ. ನಗರದಲ್ಲಿ ರಾಪಿಡೋ ಸೇರಿದಂತೆ ವಿವಿಧ ಬೈಕ್ ಟ್ಯಾಕ್ಸಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು ಇಂತಹ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋ ಚಾಲಕರು ಇಂದಿನಿಂದ ಸಾಂಕೇತಿಕವಾಗಿ ತಮ್ಮ ವಾಹನಗಳಿಗೆ ಕಪ್ಪುಬಾವುಟ ಕಟ್ಟಿ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದರೆ ಸೋಮವಾರ ಬಂದ್ ನಡೆಸಲು ನಿರ್ಧರಿಸಿದ್ದಾರೆ.

ಆಟೋ ಚಾಲಕರು ಹಾಗೂ ಬೈಕ್ ಟ್ಯಾಕ್ಸಿ ಕಂಪನಿಗಳ ಮಧ್ಯೆ ಹಲವು ತಿಂಗಳಿಂದಲೂ ಸೇವೆ ನೀಡುವ ಬಗ್ಗೆ ಸಮಸ್ಯೆ ಉಂಟಾಗಿದೆ. "ರಾಪಿಡೋ ಬೈಕ್ ಸಂಚಾರದಿಂದ ಆಟೋ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಇದರಿಂದ ನಮಗೆ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ತಮ್ಮ ಪಾಲಿನ ಗ್ರಾಹಕರು ಸುಲಭವಾಗಿ ವೈಟ್ ಬೋರ್ಡ್ ಬೈಕ್ ಕಂಪನಿಗಳ ಮೊರೆ ಹೋಗುತ್ತಿದ್ದಾರೆ. ನಾವು ಇಲ್ಲಿ ನ್ಯಾಯಬದ್ದವಾಗಿ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಆದರೆ ವಾಮಮಾರ್ಗದಿಂದ‌ ಕಾನೂನುಬಾಹಿರವಾಗಿ ಬೈಕ್, ಟ್ಯಾಕ್ಸಿಗಳು ಸೇವೆ ನೀಡುತ್ತಿರುವುದು ಎಷ್ಟು ಸರಿ" ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಹೀಗೆ ಬೈಕ್ ಸೇವೆ ನೀಡುತ್ತಿರುವ ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು‌, ನಮ್ಮ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಟೋ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ : ಕೊಲೆ, ಹಲ್ಲೆ, ದರೋಡೆ..: ಮಂಗಳೂರಿನಲ್ಲಿ 'ಜಪಾನ್ ಮಂಗ' ಸೇರಿ ನಾಲ್ವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.