ETV Bharat / state

ರಂಗಶಿಕ್ಷಣ ಅಂಕ ಗಳಿಕೆ ಪದ್ಧತಿಗೆ ಒಳಪಟ್ಟಾಗಲೇ ಅದರ ಪ್ರಾಮುಖ್ಯತೆ ಹೆಚ್ಚಾಗಲು ಸಾಧ್ಯ: ಟಿ.ಎಸ್.ನಾಗಾಭರಣ

ಪದವಿ ಶಿಕ್ಷಣದಲ್ಲಿ ಅನ್ವಯಿಕ ರಂಗ ಪ್ರಕಾರವನ್ನು ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ. ಏಕೆಂದರೆ, ರಂಗಶಿಕ್ಷಣವನ್ನು ನಾವು ಶಿಕ್ಷಣದ ಶಿಸ್ತಿಗೆ ಅಳವಡಿಸಿಕೊಳ್ಳಬೇಕಾದರೆ ಅದು ಅಗತ್ಯವಾಗಿದೆ. ಆದ್ಯತೆಯ ಶಿಕ್ಷಣ ಪದ್ಧತಿಯಲ್ಲಿ ಬೌದ್ದಿಕ ಗ್ರಹಿಕೆ ಹೆಚ್ಚಾಗಲು ಇಂತಹ ವಿಷಯಗಳ ಪಠಣ ಅವಶ್ಯಕವಾಗಿದೆ..

T.S.Nagabharana
ಟಿ.ಎಸ್.ನಾಗಾಭರಣ
author img

By

Published : Jun 21, 2021, 9:29 PM IST

ಬೆಂಗಳೂರು : ಪದವಿ ತರಗತಿಗಳಲ್ಲಿ ರಂಗಶಿಕ್ಷಣದ ಶೈಕ್ಷಣಿಕ ಮಹತ್ವ ಬಹಳ ಹೆಚ್ಚಾಗಿದೆ. ಆದರೆ, ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕಾದರೆ ಅದನ್ನು ಅಂಕಗಳಿಕೆಯ ಪದ್ಧತಿಗೆ ಅಳವಡಿಸುವುದು ಅಗತ್ಯ ಎಂದು ಹಿರಿಯ ರಂಗಕರ್ಮಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌ ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

ಇಂದು ಆನ್​ಲೈನ್ ವೆಬಿನಾರ್‌ ಮೂಲಕ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಸುರಾನಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿವಿ ಕಲಾ ವಿಭಾಗ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪದವಿ ತರಗತಿಗಳಲ್ಲಿ ರಂಗ ಶಿಕ್ಷಣದ ಮಹತ್ವ ರಾಷ್ಟ್ರಮಟ್ಟದ ಎಫ್‌ಡಿಪಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪದವಿ ಶಿಕ್ಷಣದಲ್ಲಿ ಅನ್ವಯಿಕ ರಂಗ ಪ್ರಕಾರವನ್ನು ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ. ಏಕೆಂದರೆ, ರಂಗಶಿಕ್ಷಣವನ್ನು ನಾವು ಶಿಕ್ಷಣದ ಶಿಸ್ತಿಗೆ ಅಳವಡಿಸಿಕೊಳ್ಳಬೇಕಾದರೆ ಅದು ಅಗತ್ಯವಾಗಿದೆ. ಆದ್ಯತೆಯ ಶಿಕ್ಷಣ ಪದ್ಧತಿಯಲ್ಲಿ ಬೌದ್ದಿಕ ಗ್ರಹಿಕೆ ಹೆಚ್ಚಾಗಲು ಇಂತಹ ವಿಷಯಗಳ ಪಠಣ ಅವಶ್ಯಕವಾಗಿದೆ. ರಂಗಭೂಮಿ ಎಂದರೆ ಕೇವಲ ಚಳವಳಿ ಎಂದಲ್ಲ. ಅದೊಂದು ಪ್ರಬೇಧ ಅಷ್ಟೇ. ಆದರೆ, ಮನೋವಿಕಾಸ ಎನ್ನುವುದು ಮತ್ತು ಸಾಂಸ್ಕೃತಿಕ ವಲಯದ ಸೃಷ್ಟಿ ಬಹಳ ದೊಡ್ಡ ಕರ್ತವ್ಯವಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬರುವ ಹತ್ತು ಹಲವು ಯೋಜನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯವಿದೆ. ಅದರಲ್ಲಿ ಏಕರೂಪ ಪಠ್ಯಕ್ರಮ ಇಲ್ಲ. ಸೃಜನಾತ್ಮಕತೆ, ಭಿನ್ನತೆಯಿದೆ. ಅಲ್ಲದೆ ಹೊಸತನದ ಹಾದಿಯನ್ನು ಕಂಡುಕೊಳ್ಳಲು ಅವಕಾಶವಿದೆ. ಭಾಷೆಯನ್ನು ಬೆಳೆಸುವ ಬಗ್ಗೆ, ಭಾಷೆಯ ನಿರಂತರತೆಯನ್ನು ಕಾಪಾಡುವಲ್ಲಿ, ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ರಂಗಶಿಕ್ಷಣ ಪ್ರಮುಖ ಪಾತ್ರವಹಿಸಲಿದೆ.

ಪದವಿ ತರಗತಿಗಳಲ್ಲಿ ರಂಗಶಿಕ್ಷಣದ ಶೈಕ್ಷಣಿಕ ಮಹತ್ವ ಬಹಳ ಹೆಚ್ಚಾಗಿದೆ. ಆದರೆ, ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕಾದರೆ ಅದನ್ನು ಅಂಕಗಳಿಕೆಯ ಪದ್ಧತಿಗೆ ಅಳವಡಿಸುವುದು ಅಗತ್ಯ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಜೆ.ಲೋಕೇಶ್‌ ಮಾತನಾಡಿ, ಪದವಿ ತರಗತಿಗಳಲ್ಲಿ ಯಾವ ರೀತಿಯ ನಾಟಕಗಳನ್ನು ಪಠ್ಯಪುಸ್ತಕಗಳನ್ನು ಅಳವಡಿಸಬೇಕು ಎನ್ನುವುದಕ್ಕೆ ಸಮಿತಿಗಳು ಹೆಚ್ಚಿನ ಒತ್ತು ನೀಡಬೇಕು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡುವಂತಹ ರಂಗ ಚಟುವಟಿಕೆಗಳು ಪಠ್ಯದಲ್ಲಿ ಅಳವಡಿಕೆಯಾಗಬೇಕು. ಆ ಚಟುವಟಿಕೆಗಳನ್ನು ಅಂಕಗಳಿಕೆಯ ಪರಿಧಿಗೆ ತಂದಲ್ಲಿ ಜನರು ಅದರಲ್ಲಿ ತೊಡಗಿಕೊಳ್ಳುತ್ತಾರೆ ಎಂದರು. ಕಾರ್ಯಕ್ರಮದ ನಿರ್ವಹಣೆಯನ್ನು ಸಂಯೋಜಕರಾದ ಸುರಾನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್‌ ನಡೆಸಿಕೊಟ್ಟರು. ಡಾ. ರಾಜಶೇಖರಯ್ಯ ಮಠಪತಿ, ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಬೆಂವಿವಿ ಜ್ಞಾನಭಾರತಿ ಕಲಾವಿಭಾಗದ ನಿರ್ದೇಶಕ ಪ್ರದರ್ಶನ, ಡಾ ಹಂಸಿನಿ ನಾಗೇಂದ್ರ, ಸುರಾನಾ ಕಾಲೇಜು ಸೌತ್‌ ಎಂಡ್‌ ರಸ್ತೆ ಪ್ರಾಂಶುಪಾಲೆ ಡಾ ಭವಾನಿ ಎಂ.ಆರ್‌ ಸೇರಿ ಹಲವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.