ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ರಂಗಭೂಮಿಯ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ಸಂತಾಪ ಸೂಚಿಸಿದ್ದಾರೆ.
ಸಿನಿಮಾ ಮತ್ತು ಕಿರುತೆರೆಯಲ್ಲಿ ಖಾತ್ಯ ಕಲಾವಿದರಾದ ಏಣಗಿ ನಟರಾಜ್ ಮತ್ತು ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮಿಬಾಯಿ ಏಣಗಿ ಅವರ ಕಲಾಸೇವೆ ಅದ್ಭುತವಾದುದು. ಬಾಳಪ್ಪನವರ ಜತೆ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಲಕ್ಷ್ಮಿಬಾಯಿರ ಪುತ್ರ ನಟರಾಜ್ ಜೊತೆ ಟಿ.ಎಸ್.ನಾಗಾಭರಣ ನಿರ್ದೇಶನದ ಸಿಂಗಾರವ್ವ ಚಿತ್ರದಲ್ಲಿ ಅಭಿನಯಿಸಿದ್ದರು.
ಇದನ್ನೂ ಓದಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಪುತ್ರಿ ರಾಜನಂದಿನಿಗೆ ಜೀವ ಬೆದರಿಕೆ
ಶತಮಾನ ಮತ್ತು ಅದಕ್ಕಿಂತ ಹಿಂದಿನ ರಂಗಭೂಮಿ ಇತಿಹಾಸವನ್ನು ಸ್ಪಷ್ಟವಾಗಿ ಬಲ್ಲವರಾಗಿದ್ದ ಏಣಗಿ ಬಾಳಪ್ಪನವರ ಕುಟುಂಬದೊಂದಿಗೆ ಹಲವು ವರ್ಷಗಳಿಂದ ನಾಗಾಭರಣ ಸ್ನೇಹ ಹೊಂದಿದ್ದರು. ಏಣಗಿ ಬಾಳಪ್ಪನವರ ಇಡೀ ಕುಟುಂಬ ನಾಗಾಭರಣ ಅವರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಮೈಸೂರಿನ ನಟನಾ ರಂಗ ಪುರಸ್ಕಾರಕ್ಕೆ ಭಾಜನರಾಗಿದ್ದ ಅದ್ಭುತ ಜೀವಚೈತನ್ಯದ ಕಲಾವಿದೆ ಲಕ್ಷ್ಮಿಬಾಯಿ ಏಣಗಿ ಅವರ ಕಲಾವೈಭವದ ದಾರಿ ನಮ್ಮ ಮನದಲ್ಲಿ ನಿತ್ಯ ನಿರಂತರವಾಗಿರಲಿದೆ ಎಂದು ನಾಗಾಭರಣ ತಿಳಿಸಿದ್ದಾರೆ.