ETV Bharat / state

ಬೀದಿ ನಾಯಿಗೆ ಥಳಿಸಿ ಆ್ಯಸಿಡ್ ಹಾಕುವ ಯತ್ನ: ಐವರ ವಿರುದ್ಧ ಎಫ್‌ಐಆರ್‌ ದಾಖಲು - ಬೀದಿ ನಾಯಿ ಮೇಲೆ ಆಸಿಡ್ ದಾಳಿ

ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಬೀದಿ ನಾಯಿಯನ್ನು ಥಳಿಸಿ ಆ್ಯಸಿಡ್ ಹಾಕಲು ಯತ್ನಿಸಿದ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

dog
dog
author img

By

Published : Mar 11, 2022, 7:34 AM IST

ಬೆಂಗಳೂರು : ಬೀದಿ ನಾಯಿಯನ್ನು ಥಳಿಸಿ ಆ್ಯಸಿಡ್ ಹಾಕಲು ಯತ್ನಿಸಿದ ಅಮಾನವೀಯ ಘಟನೆ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ನಡೆದಿದ್ದು, ಈ ಸಂಬಂಧ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾರ್ಚ್ 4 ರ ರಾತ್ರಿ ಸುಮಾರು 10 ಗಂಟೆಗೆ ಕಿಡಿಗೇಡಿಗಳು ಬೀದಿ ನಾಯಿಯೊಂದನ್ನು ಕಟ್ಟಿ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಯಿ ಹಿಂಸಿಸುವುದನ್ನು ತಡೆಯಲು ಹೋದಾಗ ನನಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿದ ಮಹಿಳೆ, ಸಾಮಾಜಿಕ ಕಾರ್ಯಕರ್ತೆಯೊಬ್ಬರ ಸಹಾಯದಿಂದ ಬನಶಂಕರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನಾಯಿ ಮೇಲೆ ನಡೆದ ದಾಳಿ ಕುರಿತು ಮಾಹಿತಿ ನೀಡಿದ ಸುಕನ್ಯಾ

ಐವರ ವಿರುದ್ಧ ಎಫ್‌ಐಆರ್‌: ದೂರಿನನ್ವಯ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಗಾಯಗೊಂಡಿರುವ ನಾಯಿಗೆ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ದೆಹಲಿಗೆ ತಲುಪಿತು ಉಕ್ರೇನ್​ನಿಂದ ವಿದ್ಯಾರ್ಥಿಗಳನ್ನು ಹೊತ್ತ ವಿಮಾನ.. ಮತ್ತೆರಡು ವಿಮಾನಗಳ ಆಗಮನದ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.