ಬೆಂಗಳೂರು: ಹದಿಮೂರು ಮಂದಿ ರಾಜೀನಾಮೆ ನೀಡುತ್ತಾರೆ ಎಂಬ ಪ್ರಶ್ನೆಗೆ ಗರಂ ಆದ ಸ್ಪೀಕರ್ ರಮೇಶ್ ಕುಮಾರ್, ಅವರು ಸುಖಾಸುಮ್ಮನೆ ಪುಕಾರು ಹಬ್ಬಿಸುತ್ತಿದ್ದಾರೆ. ವ್ಯಾಪಾರಕ್ಕಾಗಿ ಈ ರೀತಿಯ ಮಾಡುವುದು ಸರಿಯಲ್ಲ ಎಂದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು (ಮಾಧ್ಯಮದವರು) ವ್ಯಾಪಾರಕ್ಕೆ ಬರುವ ಅವರನ್ನು ನಂಬಬೇಡಿ. ನೀತಿ ನಿಯಮಗಳ ಪ್ರಕಾರ ಹೋಗುವ ನನ್ನನ್ನು ನಂಬಿ ಎಂದು ಹೇಳಿದರು.
ನನ್ನನ್ನು ಈವರೆಗೆ ಯಾವ ಶಾಸಕರು ಇದುವರೆಗೂ ಸಂಪರ್ಕಿಸಿಲ್ಲ. ನನ್ನನ್ನು ಭೇಟಿಯಾಗೋಕೆ ಯಾರೂ ಸಮಯ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಸಂತೆಯಲ್ಲಿ ಕೂತಿಲ್ಲ. ಸ್ಪೀಕರ್ ಭೇಟಿ ಮಾಡೋಕೆ ಒಂದು ಕ್ರಮ ಇದೆ. 13 ಅಲ್ಲ 30 ಜನ ಬರಲಿ. ಸ್ಪೀಕರ್ ಭೇಟಿ ಮಾಡೋಕೆ ಕಚೇರಿ ಇದೆ. ಅದಕ್ಕೊಂದು ಕ್ರಮ ಇದೆ. ಅವರು ಬರ್ತಾರೆ ಅಂತ ಹೇಳಿದ ತಕ್ಷಣ ನಾನು ಕಾದುಕೊಂಡು ಕೋರಿಕೆ ಆಗಲ್ಲ ಎಂದು ಗರಂ ಆಗಿಯೇ ಹೇಳಿದರು.
ಅವರವರ ಬಿಸ್ನೆಸ್ ಮಾಡೋಕೆ ಸುಮ್ಮನೆ ಊಹಾಪೋಹ ಹಬ್ಬಿಸುತ್ತಿದ್ದಾರೆ. ಸ್ಪೀಕರ್ ಭೇಟಿಗೆ ಬರ್ತಾರೆ ಅಂತ ಬ್ಲಾಕ್ ಮೇಲ್ ಮಾಡುವವರನ್ನು ಯಾರನ್ನೂ ನಂಬಬೇಡಿ. ನನ್ನನ್ನು ನಂಬಿ ನಾನು ಸತ್ಯ ಹೇಳ್ತಾ ಇದ್ದೇನೆ ಎಂದರು.